ತುರುವೇಕೆರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಕೃಷ್ಣಪ್ಪ

By Kannadaprabha News  |  First Published May 16, 2023, 4:31 AM IST

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ತಾವು ಹಗಲಿರುಳೂ ಶ್ರಮಿಸುವುದಾಗಿ ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.


 ತುರುವೇಕೆರೆ :  ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ತಾವು ಹಗಲಿರುಳೂ ಶ್ರಮಿಸುವುದಾಗಿ ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ತಾಲೂಕು ಜೆಡಿಎಸ್‌ ಕಾರ್ಯಕರ್ತರು ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು ಜನರು ತಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಹುಸಿಗೊಳಿಸಲಾರೆ. ಅದರಲ್ಲೂ ನ ಕಾರ್ಯಕರ್ತರು ಮತ್ತು ಮುಖಂಡರು ತಮ್ಮ ಕಷ್ಟ ಕಾಲದಲ್ಲಿ ಕೈ ಹಿಡಿದಿರುವುದು ನನ್ನ ಸೌಭಾಗ್ಯ. ನನ್ನ ಗೆಲುವಿಗಾಗಿ ಹಗಲಿರುಳೂ ಹೋರಾಡಿದ ಕಾರ್ಯಕರ್ತರಿಗೆ ಋುಣಿ. ಕಾರ್ಯಕರ್ತರು ತಮಗೆ ವಿಜಯೋತ್ಸವ ಆಚರಣೆ ಮಾಡುತ್ತಿದ್ದಾರೆ. ಆದರೆ ತಮಗೆ ಸೇರಿದ ವಿಜಯೋತ್ಸವವಲ್ಲ. ಅದು ಜೆಡಿಎಸ್‌ ಕಾರ್ಯಕರ್ತರಿಗೆ ಸೇರಿದ ವಿಜಯೋತ್ಸವ. ಕಳೆದ ಬಾರಿ ಒಂದೆರೆಡು ಸಾವಿರ ಅಂತರದಿಂದ ಸೋತಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈಗ ಹತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿರುವುದು ದೊಡ್ಡ ಸಾಧನೆ ಎಂದು ಹೇಳಿದರು.

Latest Videos

undefined

ಈ ಯಲ್ಲಿ ಹಣ ಉಳ್ಳವರು ನನ್ನ ಸಹಕಾರಕ್ಕೆ ನಿಲ್ಲದೆ ಹೋದರು, ಬಡವರು, ಮುಖಂಡರು, ನಿಷ್ಠಾವಂತ ಕಾರ್ಯಕರ್ತರು ನನ್ನ ಪರವಾಗಿ ಹೋರಾಟ ಮಾಡಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿರುವ ನಿಮಗೆ ನಾನು ಸದಾ ಚಿರಋುಣಿಯಾಗಿರುವುದಾಗಿ ಹೇಳಿದ ಕೃಷ್ಣಪ್ಪ ರೈತರ, ಬಡ ಜನರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದರ ಜೊತೆಗೆ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಮಾಡುತ್ತೇನೆ ಎಂದರು.

ಪಟ್ಟಣದ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪರನ್ನು ಮೆರವಣಿಗೆಯ ಮೂಲಕ ಕರೆತರಲಾಯಿತು. ಉಡಸಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಪಟ್ಟಣದಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಾಣಸಂದ್ರ ವೃತ್ತದಲ್ಲಿ ಜೆಸಿಬಿಗಳ ಮೂಲಕ ಹೂ ಮಳೆಗೈದರು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಕೃಷ್ಣಪ್ಪ ಮಾತನಾಡಿದರು. ಮುಖಂಡರು ಹಾಗೂ ಕಾರ್ಯಕರ್ತರು ಹಾರ, ಶಾಲು ಹಾಕಿ ಸನ್ಮಾನಿಸಿದರು. ಅಪಾರ ಕಾರ್ಯಕರ್ತರು ವಿಜಯೋತ್ಸವ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ಜೆಡಿಎಸ್‌ನ ರಾಜ್ಯ ನಾಯಕರಿಗೆ ಹಾಗೂ ನೂತನ ಶಾಸಕರಿಗೆ ಜಯಘೋಷ ಹಾಕಿದರು. ಪಟಾಕಿ ಸಿಡಿಸಿ, ಸಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಸ್ವಾಮಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾವಾಳರಾಮೇಗೌಡ, ಪಟ್ಟಣ ಪಂಚಾಯಿತಿ ಸದಸ್ಯ ಎನ್‌.ಆರ್‌.ಸುರೇಶ್‌, ಮಧು, ಸಪ್ನ ನಟೇಶ್‌, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್‌ಗೌಡ, ಮುಖಂಡರಾದ ಹೆಡಿಗಿಹಳ್ಳಿ ವಿಶ್ವನಾಥ್‌, ದಿವಾಕರ್‌, ರೇಣುಕೇಶ್‌, ಸೇರಿದಂತೆ ಅಪಾರ ಮುಖಂಡರು ಕಾರ್ಯಕರ್ತರು ಇದ್ದರು.

ಶಾಸಕರ ಸಾಧನೆ ಶೂನ್ಯ

 ತುರುವೇಕೆರೆ : ಹಾಲಿ ಶಾಸಕ ಮಸಾಲಾ ಜಯರಾಮ್‌ರ ಸಾಧನೆ ಶೂನ್ಯವಾಗಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ಶಾಶ್ವತವಾದ ಯಾವುದೇ ಗುರುತರ ಕಾಮಗಾರಿ ಮಾಡಿಲ್ಲ. ಕೇವಲ ಕಮಿಷನ್‌ ಆಸೆಗಾಗಿ ಸಿಸಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಿರುವುದನ್ನು ಬಿಟ್ಟರೆ ಇನ್ನು ಹೇಳಿಸಿಕೊಳ್ಳುವಂತಹ ಯಾವುದೇ ಕಾಮಗಾರಿ ಆಗಿಲ್ಲ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ತಾಲೂಕಿನ ಗುರುವಿನಮಠದ ಶ್ರೀ ಪತ್ರೆ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಸಾಲಾ ಜಯರಾಮ್‌ ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಬಂದರೆ ಸವಾಲು ಸ್ವೀಕರಿಸಿ ತಾವು ಶಾಸಕರಾಗಿದ್ದಾಗ ಸರ್ಕಾರದಿಂದ ತಂದಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿವರವನ್ನು ದಾಖಲೆ ಸಹಿತ ನೀಡುವೆ. ತಾವು ನೀಡಿರುವ ಸವಾಲನ್ನು ಸ್ವೀಕರಿಸಿದರೆ ತಾವು ಮಾಡಿರುವ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಲು ಸಾಧ್ಯವಾಗಲಿದೆ ಎಂದು ಎಂ.ಟಿ.ಕೃಷ್ಣಪ್ಪ ಹೇಳಿದರು.

ರಾಜ್ಯ ಯುವ ಜೆಡಿಎಸ್‌ನ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಈ ಕಾರ್ಯಕ್ರಮಕ್ಕೆ ಆಗಮಿಸುವರು ಎಂದು ಹೇಳಲಾಗಿತ್ತು. ಆದರೆ ಸಾಯಂಕಾಲ 5 ಗಂಟೆಯ ವೇಳೆಗೆ ನಿಖಿಲ್‌ ಕುಮಾರಸ್ವಾಮಿಯವರ ಕಾರ್ಯಕ್ರಮ ಕೊನೇ ಕ್ಷಣದಲ್ಲಿ ರದ್ದಾಗಿದೆ ಎಂಬ ಸಂಗತಿ ತಿಳಿದು ಜೆಡಿಎಸ್‌ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಬೇಸರ ತರಿಸಿತು.

ಪತ್ರೆ ಆಂಜನೇಯಸ್ವಾಮಿ ದೇವಾಲದಲ್ಲಿ ನೂತನವಾಗಿ ನಿರ್ಮಾಣ ಮಾಡಲಿರುವ ಆಂಜನೇಯ ಸ್ವಾಮಿಯವರ ವಿಗ್ರಹ ನಿರ್ಮಾಣಕ್ಕೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು 5 ಲಕ್ಷ ರು. ಗಳ ದೇಣಿಗೆಯನ್ನು ನೀಡಿದರು.

click me!