ಗದಗ (ಆ.11) : ಬೆಳಗ್ಗೆ ಜಮೀನು ಕೆಲಸಕ್ಕೆ ಅಂತಾ ಸುರಕೋಡ ಗ್ರಾಮದ ಚಿನ್ನವ್ವ ಮುತ್ತಲಗೇರಿ (65) ಹಳ್ಳದ ಆಚೆ ಇರೋ ಜಾಗಕ್ಕೆ ಹೋಗಿದ್ರು. 10 ಗಂಟೆಯ ನಂತ್ರ ಏಕಾಏಕಿ ಹಳ್ಳ ಉಕ್ಕಿ ಹರಿದಿದೆ. ಹೆಸರು ಕಟಾವಿನ ನಂತ್ರ ಕಾಯಿ ಆರಿಸೋದಕ್ಕೆ ಚಿನ್ನವ್ವ ಜಮೀನಿಗೆ ಹೋಗಿದ್ರು. ಕೆಲಸದಲ್ಲೇ ತಲ್ಲೀನ ಆಗಿದ್ದ ಚಿನ್ನವ್ವಗೆ ಹಳ್ಳ ಉಕ್ಕಿ ಹರಿತೀರೋದು ಗಮನಕ್ಕೆ ಬಂದಿರಲಿಲ್ಲ. ಕೆಲ ಹೊತ್ತಿನ ನಂತ್ರ ಹಳ್ಳದ ಅಬ್ಬರ ಅಜ್ಜಿಯ ಗಮನಕ್ಕೆ ಬಂದಿದೆ. ಹಳ್ಳದ ದಡಕ್ಕೆ ಬಂದು ಚಿನ್ನವ್ವ ಕಿರಚಾಡೋದಕ್ಕೆ ಶುರು ಮಾಡಿದ್ಳಂತೆ. ಅಜ್ಜಿಯ ಕಿರುಚಾಟ ಗಮನಿಸಿದ್ದ ಕೆಲವ್ರು ಗ್ರಾಮದ ಶರಣಪ್ಪ ಅನ್ನೋರಿಗೆ ಫೋನ್ ಮಾಡಿದ್ದಾರೆ. ಜಮೀನಲ್ಲಿದ್ದ ಶರಣಪ್ಪ ಶಿರಸಂಗಿ, ವೆಂಕಪ್ಪ ಸುಗ್ಗಿ ಅವರೊಂದಿಗೆ ಹಳ್ಳದ ದಡಕ್ಕೆ ಹೋಗಿ ದಾರೆ. ನಂತ್ರ ಹಳ್ಳದಲ್ಲಿ ದುಮುಕಿ ಹಳ್ಳದ ಮತ್ತೊಂದು ಬದಿ ಇದ್ದ ಚಿನ್ನವ್ವಳನ್ನ ರಕ್ಷಿಸಿದ್ದಾರೆ.
ಹುಬ್ಬಳ್ಳಿ: ಉಕ್ಕಿದ ಬೆಣ್ಣೆಹಳ್ಳ, 32 ಜನರ ರಕ್ಷಣೆ ಓರ್ವ ನಾಪತ್ತೆ
undefined
ಚಿನ್ನವ್ವಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ:
ಪ್ರವಾಹದಲ್ಲಿ ಸಿಲುಕಿದ್ದ ಚಿನ್ನವ್ವ ಸದ್ಯ ಸುರಕ್ಷಿತವಾಗಿ ದಡ ಸೇರಿದ್ದಾಳೆ. ರಕ್ಷಣೆ ಮಾಡಿದ ಶರಣಪ್ಪ ಶಿರಸಂಗಿ, ವೆಂಕಪ್ಪ ಸುಗ್ಗಿ ಅವರೇ ಅಜ್ಜಿಯನ್ನ ಆಸ್ಪತ್ರೆಗೆ ಸೇರಿಸಿದಾರೆ. ಅಜ್ಜಿ ಆರೋಗ್ಯವಾಗಿದ್ದು ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಯಾದಗಿರಿ: ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಮಗುಚಿದ ಲಾರಿ: ಚಾಲಕನ ರಕ್ಷಣೆ
ವೃದ್ಧೆ ರಕ್ಷಣೆ ಮಾಡಿದವರಿಗೆ ಸ್ಥಳೀಯರಿಂದ ಅಭಿನಂದನೆ
ಚಿನ್ನವ್ವಳಿಗೆ ಈಜು ಬರ್ತಿರಲಿಲ್ಲ. ವಯಸ್ಸಾದ ಕಾರಣ ಕೂಗಿ ಜನ ಸೇರಿಸೋದಕ್ಕೂ ಚಿನ್ನವ್ವಳಲ್ಲಿ ತ್ರಾಣ ಇಲ್ಲ. ವಿಷ್ಯ ತಿಳಿದು ಸ್ಥಳಕ್ಕೆ ಹೋಗಿದ್ದ ಶರಣಪ್ಪ, ವೆಂಕಪ್ಪ ಅವರೇ ಚಿನ್ನವ್ವಳ ಪಾಲಿಗೆ ದೇವರಂತೆ ಕಂಡಿದ್ರು.. ಇಬ್ಬರು ಅಜ್ಜಿಯನ್ನ ಹಿಡಿದು ಈಜಿ ದಡ ಸೇರಿಸಿದ್ದಾರೆ.. ವೆಂಕಪ್ಪ, ಶರಣಪ್ಪ ಅವರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ..