ಗುತ್ತಿಗೆದಾರನ ಕುಟುಂಬಸ್ಥರು 3 ಮನೆ BPL ಮತ್ತು ಎನ್‌ಆರ್‌ಐಜಿ (ನರೇಗಾ) ಅಡಿಯಲ್ಲಿ ಕೂಲಿ ಕಾರ್ಮಿಕರ ಕಾರ್ಡ್ ಪಡೆದುಕೊಂಡಿರುವ ದರ ಬಗ್ಗೆ ಜಿಲ್ಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲು ನೀಡಿದ ಪತ್ರಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದಿರುವುದನ್ನು ಕಾಣಬಹುದಾಗಿದೆ ಎಂದು ಗ್ರಾಮದ ಮುಖಂಡ ಸಿಎಂ ರಾಜು ಆರೋಪಿಸಿದ್ದಾರೆ.
ಬೈಲಕುಪ್ಪೆ (ಡಿ.13): ಗುತ್ತಿಗೆದಾರನ ಕುಟುಂಬಸ್ಥರು 3 ಮನೆ BPL ಮತ್ತು ಎನ್‌ಆರ್‌ಐಜಿ (ನರೇಗಾ) ಅಡಿಯಲ್ಲಿ ಕೂಲಿ ಕಾರ್ಮಿಕರ ಕಾರ್ಡ್ ಪಡೆದುಕೊಂಡಿರುವ ದರ ಬಗ್ಗೆ ಜಿಲ್ಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲು ನೀಡಿದ ಪತ್ರಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದಿರುವುದನ್ನು ಕಾಣಬಹುದಾಗಿದೆ ಎಂದು ಗ್ರಾಮದ ಮುಖಂಡ ಸಿಎಂ ರಾಜು ಆರೋಪಿಸಿದ್ದಾರೆ.
ತಾಲೂಕಿನ ತಿರುಮಲಪುರ ಗ್ರಾಮದ ಸ್ವಾಮಿ ಶೆಟ್ಟಿಯ ಮಗ ಅಣ್ಣಯ್ಯ ಶೆಟ್ಟಿ ಎಂಬ ವ್ಯಕ್ತಿಯ ವಾರ್ಷಿಕ ಆದಾಯ ಕೋಟಿ ರು. ಗಳಿದ್ದು ಕ್ಕೆ (Govt ) ತೆರಿಗೆ ಕಟ್ಟುವ ಈತ ಕುಟುಂಬದ ಸದಸ್ಯರ ಹೆಸರನ್ನು (Name) ಬಳಸಿಕೊಂಡು ಸರ್ಕಾರದ ವಿವಿಧ ಯೋಜನೆಯ ಹೆಸರಿನಲ್ಲಿ ದುರುಪಯೋಗ ಪಡಿಸಿಕೊಂಡು ಅರ್ಹ ಫಲಾನುಭವಿಗೆ ಅವಕಾಶವನ್ನು ಕಸಿದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
undefined
ಬೈಲುಕುಪ್ಪೆ ಗ್ರಾಪಂ ವ್ಯಾಪ್ತಿಗೆ ಸೇರಿದ ತಿರುಮಲಪುರ ಗ್ರಾಮದ ವಾಸಿ ಸ್ವಾಮಶೆಟ್ಟಿಯ ಮಗ ಅಣ್ಣಯ್ಯ ಶೆಟ್ಟಿಯು ತನ್ನ ಪತ್ನಿ ಸುಜಾತ ಹೆಸರಿನಲ್ಲಿ 2015ನೇ ಸಾಲಿನಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರು ಮಾಡಿಸಿಕೊಂಡು 1,19,800 ರು. 2018ನೇ ಸಾಲಿನಲ್ಲಿ ತನ್ನ ತಾಯಿ ಪ್ರೇಮ ರವರ ಹೆಸರಿನಲ್ಲಿ ಮತ್ತೆ ಎರಡನೇ ಬಾರಿಗೆ ಬಸವ ವಸತಿ ಯೋಜನೆ ಅಡಿಯಲ್ಲಿ 1,19,800 ರು. ಪಡೆದು ತಮ್ಮ ಹೊಲದ ಬಳಿ ಮನೆ ನಿರ್ಮಾಣ ಮಾಡಿಕೊಂಡಿದ್ದು, 2020 ನೇ ಸಾಲಿನಲ್ಲಿ ತನ್ನ ಹೆಸರಿನಲ್ಲಿ ಬೇರೆ ಸಂತ್ರಸ್ತ ಪುನರ್ ವಸತಿ ಯೋಜನೆಯಲ್ಲಿ 5 ಲಕ್ಷ ರು. ಗಳನ್ನು ಪಡೆದು ಗ್ರಾಮದಲ್ಲಿ ಸುಜಾತ ಎಂಬುವರ ಹೆಸರಿನಲ್ಲಿ ಸೌಲಭ್ಯ ಪಡೆದು ನಿರ್ಮಿಸಲಾಗಿದ್ದ ಮನೆಯನ್ನು ನಾಶಪಡಿಸಿ ಅದೇ ಸ್ಥಳದಲ್ಲಿ 20 ಲಕ್ಷ ರು. ಗಳಿಗೂ ಹೆಚ್ಚಿನ ವೆಚ್ಚದಲ್ಲಿ ನೂತನವಾಗಿ ಐಷಾರಾಮಿ ಮನೆ ನಿರ್ಮಿಸಿರುವುದನ್ನು ಕಾಣಬಹುದಾಗಿದೆ ಎಂದು ರಾಜು ತಿಳಿಸಿದ್ದಾರೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಹೊಂದಾಣಿಕೆಯಿಂದ ಈ ಹಣ ದುರುಪಯೋಗವಾಗಿರುವ ಬಗ್ಗೆ ಸಿಎಂ ರಾಜು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ಮೇರೆಗೆ ಜಿಲ್ಲಾಧಿಕಾರಿಗಳು ಜಿಪಂ ಮುಖ್ಯ ಕಾರ್ಯನಿರ್ವಣನಾಧಿಕಾರಿಗಳಿಗೆ ಅಣ್ಣಯ್ಯ ಶೆಟ್ಟಿಯ ಮಗ ಸೋಮಶೆಟ್ಟಿಸಹ ಎರಡನೇ ದರ್ಜೆ ಗುತ್ತಿಗೆದಾರನಾಗಿದ್ದು, ಗ್ರಾಪಂ ವ್ಯಾಪ್ತಿಯ ಸರ್ಕಾರದ ಯಾವುದೇ ಯೋಜನೆ ಅಡಿಯಲ್ಲಿ ವಸತಿ ಸೌಲಭ್ಯ ಗೆ ಅರ್ಹವಾಗದೆ ಇರುವುದರಿಂದ ಸರ್ಕಾರಕ್ಕೆ ಮೋಸ ಮಾಡಿ ನಷ್ಟವಾಗಿರುವುದರಿಂದ ಕುಟುಂಬಸ್ಥರಿಗೆ ನೀಡಿರುವ ಹಣವನ್ನು ಹಿಂಪಡೆದು ಫಲಾನುಭವಿಗಳು ಮತ್ತು ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಳೆದ ಮಾಚ್‌ರ್ 1ರಂದು ನೀಡಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಆದರೆ ಸ್ಥಳೀಯ ಶಾಸಕರ ಪ್ರಭಾವಕ್ಕೆ ಒಳಗಾಗಿರುವ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲೂಕು ತಹಸೀಲ್ದಾರ್ ಅವರು ಒಬ್ಬರ ಮೇಲೆ ಒಬ್ಬರು ದಾಖಲೆಗಳ ನೆಪದಲ್ಲಿ ಪತ್ರ ವ್ಯವಹಾರ ನಡೆಸುತ್ತಾ ಕಾಲಹರಣ ಮಾಡುತ್ತಿದ್ದಾರೆ ವಿನಃ ಯಾವುದೇ ಕಾನೂನು ಕ್ರಮ ವಾಗಿಲ್ಲ ಎಂದು ರಾಜು ತಿಳಿಸಿದ್ದಾರೆ.
ಆದ್ದರಿಂದ ಇದೇ ರೀತಿ ತಾಲೂಕಿನ ಹಲವು ಗ್ರಾಮಗಳಲ್ಲಿ ನೆರೆ ಸಂತ್ರಸ್ತ ಪುನರ್ ವಸತಿ ಯೋಜನೆಯಡಿಯಲ್ಲಿ ನಿಜವಾದ ಫಲ ನೀವುಗಳಿಗೆ ವಂಚನೆಯಾಗಿದ್ದು, ಅದೇ ರೀತಿ ದುರುಪಯೋಗವೂ ಸಹ ಆಗಿದೆ ಈ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.