ರೇಷ್ಮೆನಗರಿ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಾಹಸ ಕ್ರೀಡೆಗಳ ಪ್ರವಾಸೋದ್ಯಮದ ಭಾಗವಾಗಿ ಶನಿವಾರ ಹಾಟ್ ಏರ್ ಬಲೂನಿನ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು.
ರಾಮನಗರ (ನ.27): ರೇಷ್ಮೆನಗರಿ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಾಹಸ ಕ್ರೀಡೆಗಳ ಪ್ರವಾಸೋದ್ಯಮದ ಭಾಗವಾಗಿ ಶನಿವಾರ ಹಾಟ್ ಏರ್ ಬಲೂನಿನ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು.
ತಾಲೂಕಿನ ಸುಗ್ಗನಹಳ್ಳಿ ಸಮೀಪದ ಖಾಸಗಿ ರೆಸಾರ್ಚ್ವೊಂದರಲ್ಲಿ ಹಾಟ್ ಏರ್ ಬಲೂನಿನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ ಚಾಲನೆ ನೀಡಲು ಉದ್ದೇಶಿಸಿರುವ ಸಾಹಸ ಕ್ರೀಡೆ ಪ್ರವಾಸೋದ್ಯಮಕ್ಕೆ ಹೊಸ ಹುರುಪು ಬಂದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಪೂರಕವಾದ ಯೋಜನೆಗಳನ್ನು ತಯಾರಿಸಿ ಟೂರಿಂಗ್ ಹಬ್ ರೂಪಿಸುವ ಕನಸು ಕಾಣುತ್ತಿದ್ದಾರೆ.
Ramanagara: ಪಶುಪಾಲನಾ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
ಇತ್ತೀಚೆಗಷ್ಟೇ ಸಚಿವರು ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ನಡೆಸಿ ಪ್ರವಾಸೋದ್ಯಮದ ಅಭಿವೃದ್ಧಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಕುರಿತು ಚರ್ಚೆ ನಡೆಸಿದ್ದರು. ಇದರ ಫಲವಾಗಿ ಹೂಡಿಕೆದಾರರು ಜಿಲ್ಲೆಯ ಪ್ರವಾಸೋದ್ಯಮದತ್ತ ಒಲವು ತೋರುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಟ್ರಕ್ಕಿಂಗ್, ರಾಕಿಂಗ್, ಹೈ ರೋಪ್ ಕೋರ್ಸ್, ಕಾನ್ ಫಿ ರಾಕ್ ಮತ್ತು ಜಿಪ್ ಲೈನ್, ಬೋಟ್ ರೈಡಿಂಗ್, ಮೈಕ್ರೋ ಏರೋ ಸ್ಪೋಟ್ಸ್‌ರ್, ಪ್ಯಾರಾ ಮೋಟರ್ಸ್, ಹಾಚ್ ಏರ್ ಬಲೂನ್, ಬಂಜಿ ಜಂಪಿಂಗ್ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸಲು ಇರುವಂತಹ ಚಟುವಟಿಕೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.
ಇನ್ನು ಜಿಲ್ಲಾಡಳಿತ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಬರುವ ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಮುಂದಾಗಿದೆ. ಇದರಿಂದ ಜಿಲ್ಲೆಯಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಒದಗಿಸುವಂತಾಗುತ್ತದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು.
Ramanagara: ಶುಕ್ರವಾರ ದಿನದಂದೇ ವೃದ್ದೆಯರ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನ
ಏರ್ ಅಡ್ವೆಂಚರ್ ಸ್ಪೋರ್ಟ್ಸ್ ಬಲೂನಿಂಗ್: ಬಲೂನಿಂಗ್ ಬಿಸಿ ಗಾಳಿಯ ಬಲೂನಿನ ಹಾರಾಟವನ್ನು ಒಳಗೊಂಡಿರುವ ಒಂದು ಉತ್ತೇಜಕ ಏರ್ ಕ್ರೀಡೆಯಾಗಿದೆ. ಹಾಟ್ ಏರ್ ಬಲೂನಿಂಗ್ ಇದರ ಇನ್ನೊಂದು ಹೆಸರು. ಸಾಹಸಮಯ ಕ್ರೀಡೆಗಳಲ್ಲಿ ಒಂದಾಗಿರುವ ಹಾಟ್ ಏರ್ ಬಲೂನಿಂಗ್ ಸಾಹಸ, ರೋಮಾಂಚನಕಾರಿ ಆಗಿರುತ್ತದೆ. ಆಕಾಶವನ್ನು ಅನ್ವೇಷಿಸಲು ಹಾಗೂ ಹೆಚ್ಚಿನ ಎತ್ತರದಿಂದ ಭೂದೃಶ್ಯದ ಪಕ್ಷಿ ನೋಟವನ್ನು ಬಲೂನಿಂಗ್ನಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.