ವಿಶ್ವದ ನಂ.1 ತಾಂತ್ರಿಕ ಕೇಂದ್ರವಾಗಲಿರುವ ಬೆಂಗಳೂರು: ಸಚಿವ ಅಶ್ವತ್ಥ್‌ ನಾರಾಯಣ

By Govindaraj SFirst Published Nov 27, 2022, 9:48 PM IST
Highlights

ಬರುವ 25 ವರ್ಷಗಳಲ್ಲಿ ಬೆಂಗಳೂರು ವಿಶ್ವದ ನಂಬರ್‌ ಒನ್‌ ನಗರವಾಗಿ ಬೆಳೆಯಲಿದೆ. ದೇಶದ ವಾಣಿಜ್ಯ ಹಾಗೂ ತಾಂತ್ರಿಕ ಕೇಂದ್ರವಾಗಿ ಗಮನ ಸೆಳೆಯಲಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ದೊಡ್ಡಬಳ್ಳಾಪುರ (ನ.27): ಬರುವ 25 ವರ್ಷಗಳಲ್ಲಿ ಬೆಂಗಳೂರು ವಿಶ್ವದ ನಂಬರ್‌ ಒನ್‌ ನಗರವಾಗಿ ಬೆಳೆಯಲಿದೆ. ದೇಶದ ವಾಣಿಜ್ಯ ಹಾಗೂ ತಾಂತ್ರಿಕ ಕೇಂದ್ರವಾಗಿ ಗಮನ ಸೆಳೆಯಲಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡರ ಬಳಗ ಆಯೋಜಿಸಿದ್ದ ಕೆಂಪೇಗೌಡರ ಪ್ರಗತಿ ಪ್ರತಿಮೆ ಸ್ಥಾಪನೆಗೆ ಶ್ರಮಿಸಿದ ಗಣ್ಯರಿಗೆ ಜನಾಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳ್ಳೆಯ ಕೆಲಸ ಮಾಡುವ ವ್ಯಕ್ತಿಯನ್ನು ಎಷ್ಟೇ ಶತಮಾನವಾದರೂ ಈ ನಾಡು ಮರೆಯುವುದಿಲ್ಲ. ಬೆಂಗಳೂರು ದೇಶದಲ್ಲೇ ನಂ.1 ನಗರವಾಗಿದೆ. ನಾನು ಐಟಿಬಿಟಿ ಸಚಿವನಾಗಿದ್ದರಿಂದ ಬೆಂಗಳೂರಿನ ಶಕ್ತಿ ತಿಳಿಯಲು ನನಗೆ ಸಾಧ್ಯವಾಯಿತು. ಇಂದು ಇಡೀ ವಿಶ್ವ ಎದುರು ನೋಡುವಂತೆ ಬೆಂಗಳೂರು ಬೆಳೆದು ನಿಂತಿದೆ ಎಂದು ಹೇಳಿದರು.

ಚಿಲುಮೆ ಸಂಸ್ಥೆಯನ್ನು ನಾನು ಬಳಸಿಲ್ಲ: ಸಚಿವ ಅಶ್ವತ್ಥ್‌ ನಾರಾಯಣ

ಪ್ರೇರೇಪಣೆಯ ಪ್ರಗತಿ ಪ್ರತಿಮೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪಿಸಿರುವ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಪ್ರಗತಿ, ಸಮೃದ್ಧಿಯ ಸಂಕೇತವಾಗಿದೆ.ವಿಮಾನ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬರಿಗೂ ಕೆಂಪೇಗೌಡರ ಪರಿಚಯವಾಗಲಿದೆ. ಸಮಾಜಕ್ಕೆ ಉತ್ತಮ ಸಂದೇಶ, ಪ್ರತಿಯೊಬ್ಬರಲ್ಲೂ ಸ್ಫೂರ್ತಿಯನ್ನು ಪ್ರೇರೇಪಿಸುವ ಪ್ರಗತಿ ಪ್ರತಿಮೆ 23 ಎಕರೆ ಜಾಗದಲ್ಲಿ ತಲೆ ಎತ್ತಿ ನಿಂತಿದೆ ಎಂದರು.

ಲಾಲ್‌ಬಾಗ್‌ಗೆ ಕೆಂಪೇಗೌಡರ ಹೆಸರು ನಾಮಕರಣಕ್ಕೆ ಒತ್ತಾಯ: ಬೆಂಗಳೂರಿನ ಸಸ್ಯಕಾಶಿ ಲಾಲ್‌ ಬಾಗಿಗೆ ಕೆಂಪೇಗೌಡರ ಹೆಸರು ನಾಮಕರಣ ಮಾಡುವಂತೆ ಸಾಕಷ್ಟುಒತ್ತಾಯ ಕೇಳಿಬಂದಿದೆ. ಅಭಿವೃದ್ಧಿಗೆ ಮತ್ತೊಂದು ಹೆಸರಾದ ಕೆಂಪೇಗೌಡರ ವ್ಯಕ್ತಿತ್ವ ಸಂಚಲನ ಮೂಡಿಸುವಂತಿದೆ ಎಂದು ಬಣ್ಣಿಸಿದರು. ಕೆಂಪೇಗೌಡರ ಮೃತ್ತಿಕೆ ಸಂಗ್ರಹ ರಥಯಾತ್ರೆಯು 22 ಸಾವಿರ ಕಿ.ಮೀ, ಕ್ರಮಿಸಿ 24 ಸಾವಿರ ಸ್ಥಳಗಳಿಂದ ಮೃತಿಕೆ ಸಂಗ್ರಹಿಸಲಾಯಿತು ಎಂದು ಹೇಳಿದರು.

ಪುಣ್ಯಕ್ಷೇತ್ರದ ಫಲ ಪ್ರಾಪ್ತಿ: ರಾಜ್ಯದ ಹಲವು ಪುಣ್ಯಕ್ಷೇತ್ರ, ಸಾಧುಸಂತರು, ದೇವಾಲಯಗಳ ಜಾಗದಿಂದ ಸಂಗ್ರಹಿಸಿರುವ ಮೃತಿಕೆಯಿಂದ ಪ್ರಗತಿ ಪ್ರತಿಮೆ ಸ್ಥಳ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಬಂದರೆ ಕರ್ನಾಟಕವನ್ನೇ ಸ್ಪರ್ಶ ಮಾಡಿದಂತಾಗುತ್ತದೆ. ರಥಯಾತ್ರೆ ವೇಳೆ 3.60 ಕೋಟಿ ಜನರು ಭಾಗವಹಿಸಿದ್ದರು. ಅ ಮೂಲಕ ದೇಶದಲ್ಲೇ ಇತಿಹಾಸ ಸೃಷ್ಟಿಸಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಕಾಂಗ್ರೆಸಿಗರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಅಶ್ವತ್ಥ್‌ ನಾರಾಯಣ ಎಚ್ಚರಿಕೆ

ಸಮಾರಂಭದಲ್ಲಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಸನ್ಮಾನಿಸಲಾಯಿತು. ಪುಷ್ಪಾಂಡಜಮುನಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ, ಮಾಜಿ ಶಾಸಕ ಎಂ.ಕೃಷ್ಣಪ್ಪ, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಧೀರಜ್‌ ಮುನಿರಾಜು, ಡಾ.ಆಂಜಿನಪ್ಪ, ದಿಬ್ಬೂರು ಜಯಣ್ಣ, ಟಿ.ವಿ.ಲಕ್ಷ್ಮಿನಾರಾಯಣ, ಎ.ನರಸಿಂಹಯ್ಯ, ಅ.ದೇವೇಗೌಡ, ಬಿ.ಸಿ.ನಾರಾಯಣಸ್ವಾಮಿ, ನಾಗೇಶ್‌, ಬಂತಿ ವೆಂಕಟೇಶ್‌, ಎಸ್‌.ಪದ್ಮನಾಭ್‌ ಮತ್ತಿತರರು ಪಾಲ್ಗೊಂಡಿದ್ದರು.

click me!