ಶಿವಮೊಗ್ಗದಲ್ಲಿ ಉಗ್ರರು: ಪೇಜಾವರ ಶ್ರೀ ಕಳವಳ

Published : Sep 22, 2022, 12:43 PM IST
ಶಿವಮೊಗ್ಗದಲ್ಲಿ ಉಗ್ರರು: ಪೇಜಾವರ ಶ್ರೀ ಕಳವಳ

ಸಾರಾಂಶ

ಶಿವಮೊಗ್ಗದಲ್ಲಿ ಉಗ್ರರು: ಪೇಜಾವರ ಶ್ರೀ ಕಳವಳ ಉಗ್ರರ ವಿರುದ್ಧ ಕೂಂಬಿಂಗ್‌ ಮಾದರಿ ಕಾರ್ಯಾಚರಣೆಗೆ ಸ್ವಾಮೀಜಿ ಆಗ್ರಹ

ಉಡುಪಿ (ಸೆ.22) : ಶಿವಮೊಗ್ಗದಲ್ಲಿ ಉಗ್ರರು ಪತ್ತೆಯಾಗಿರುವ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ- ಮಂಗಳೂರು- ಉಡುಪಿ ಭಾಗಗಳಲ್ಲಿ ಉಗ್ರರ ಚಟುವಟಿಕೆ ನಡೆಯುತ್ತಿರುವುದು, ಸ್ಯಾಟಲೈಟ್‌ ಫೋನ್‌ಗಳ ಮೂಲಕ ಸಂಭಾಷಣೆ ನಡೆಯುತ್ತಿರುವುದು ಕಳವಳಕಾರಿ ವಿಷಯ, ಈ ಪ್ರಕರಣದಲ್ಲಿ ಇನ್ನೂ ಹಲವು ಜನ ಭಾಗಿ ಆಗಿರುವ ಸಾಧ್ಯತೆ ಇದೆ, ಸರ್ಕಾರ ಈ ಬಗ್ಗೆ ನಿಖರ ಮಾಹಿತಿ ಕಲೆ ಹಾಕಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಉಡುಪಿ: ದಲಿತ ಬಾಲಕನಿಗೆ ಬಹಿಷ್ಕಾರ: ಪೇಜಾವರ ಶ್ರೀ ಕಳವಳ

ಈ ಘಟನೆಗಳಿಗೆ ಯಾವುದೇ ಕೋಮಿನ ಬಣ್ಣ ನೀಡದೆ ನಿಗ್ರಹ ಮಾಡಬೇಕು, ಉಗ್ರರ ವಿರುದ್ಧ ಕೂಂಬಿಂಗ್‌ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.

ಮಾಲೂರು ಘಟನೆ ಖೇದಕರ:

ಮಾಲೂರಿನಲ್ಲಿ ದಲಿತ ಬಾಲಕನಿಗೆ ಉತ್ಸವದ ಸಂದರ್ಭ ಪಲ್ಲಕ್ಕಿ ಮುಟ್ಟಿದ್ದಕ್ಕೆ ಸವರ್ಣೀಯರು ಬಹಿಷ್ಕಾರ ಹಾಕಿದ್ದು ಕೇಳಿ ಬಹಳ ಖೇದವಾಗಿದೆ, ಧರ್ಮ ಗ್ರಂಥಗಳು ಇಂತಹ ಬೆಳವಣಿಗೆಯನ್ನು ಒಪ್ಪುವುದಿಲ್ಲ ಎಂದು ಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಉತ್ಸವ ಇಡೀ ಊರಿಗೆ ಸಂಬಂಧಿಸಿದ ಕಾರ್ಯಕ್ರಮ. ಬಹಿಷ್ಕಾರ ಶಿಕ್ಷೆ, ದಂಡವನ್ನು ಯಾವ ಧರ್ಮ ಗ್ರಂಥಗಳಲ್ಲಿಯೂ ಹೇಳಿಲ್ಲ. ಹಿಂದೂ ಸಂಘಟನೆಗಳು ಇಂತಹ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುತ್ತಿದೆ. ಸರ್ಕಾರ ಕೂಡ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ತಪ್ಪು ಮಾಡಿದವರನ್ನು ಶಿಕ್ಷಿಸಿದರೆ ಸಾಲದು, ಜಾಗೃತಿ ಮೂಸುವ ಕಾರ್ಯಕ್ರಮ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ

PREV
Read more Articles on
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!