* ತ್ರಿಪುರಾ ಗಲಭೆ ಖಂಡಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ಪ್ರತಿಭಟನೆ ವೇಳೆ ಗಲಾಟೆ
* ಹಿಂದುಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ
* ಬೇಡಿಕೆ ಈಡೇರದಿದ್ದಲ್ಲಿ ನ. 18ರಂದು ಸವಣೂರ ಬಂದ್ ಕರೆ
ಸವಣೂರು(ನ.16): ತ್ರಿಪುರಾದಲ್ಲಿ(Tripura) ನಡೆದ ಕೋಮುಗಲಭೆಯನ್ನು(Communal Riot) ಖಂಡಿಸಿ ಪಟ್ಟಣದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪ್ರತಿಭಟನಾ(Protest) ಮೆರವಣಿಗೆ ಸಂದರ್ಭದಲ್ಲಿ ಆರ್‌ಎಸ್‌ಎಸ್(RSS) ಪ್ರಮುಖ ಅರುಣ ಬಗರೆ ಅವರ ಅಂಗಡಿ ಮೇಲೆ ಕಲ್ಲು ತೂರಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕೆಲ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತು.
ಪಟ್ಟಣದ ಶುಕ್ರವಾರ ಪೇಟೆಯಿಂದ ಆರಂಭಗೊಂಡ ಅಂಜುಮನ್ ಇಸ್ಲಾಂ ಸಂಸ್ಥೆಯ(Anjuman Islam Institute) ಪ್ರತಿಭಟನಾ ಮೆರವಣಿಗೆ ಭರಮಲಿಂಗೇಶ್ವರ ವೃತ್ತ, ಮುಖ್ಯಮಾರುಕಟ್ಟೆಯಲ್ಲಿ ಹಾಯ್ದು ಉಪವಿಭಾಗಾಧಿಕಾರಿಗಳ ಕಾರ್ಯಾಲಯ ತಲುಪಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಆರ್‌ಎಸ್‌ಎಸ್ ಕುರಿತು ಅವಹೇಳನಕಾರಿ ಘೋಷಣೆ ಕೂಗಿದರು. ನಂತರ, ಉಪವಿಭಾಗಾಧಿಕಾರಿಗಳ ಕಾರ್ಯಾಲಯಕ್ಕೆ ನುಗ್ಗುವ ಪ್ರಯತ್ನಕ್ಕೆ ಮುಂದಾಗಿ ವಿಫಲವಾದರು. ಪೊಲೀಸ್(Police) ಅಧಿಕಾರಿಗಳು ಲಘು ಲಾಠಿ(Lathi Charge) ಪ್ರದರ್ಶನ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದರು.
undefined
'ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ ದಾಳಿ, ಪ್ರಧಾನಿ ಮೌನವಾಗಿರುವದು ನಿಜಕ್ಕೂ ಆಘಾತ ತಂದಿದೆ'
ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಚದುರಿದ ಪ್ರತಿಭಟನಾಕಾರರಲ್ಲಿ ಕೆಲ ಕಿಡಿಗೇಡಿಗಳು ಮರಳಿ ಆಗಮಿಸಿ ಮಾರುಕಟ್ಟೆಯಲ್ಲಿರುವ ಆರ್‌ಎಸ್‌ಎಸ್ ಪ್ರಮುಖ ಅರುಣ ಬಗರೆ ಅಂಗಡಿಗೆ ಪೊಲೀಸ್ ಅಧಿಕಾರಿಗಳ ಎದುರಲ್ಲಿ ಕಲ್ಲು ಎಸೆದರು. ಈ ಘಟನೆಯಲ್ಲಿ ಅರುಣ ಅವರಿಗೆ ಗಾಯವಾಗಿದೆ. ಸುದ್ದಿ ತಿಳಿದು ಹಿಂದುಪರ ಸಂಘಟನೆ(Pro-Hindu Organization) ಕಾರ್ಯಕರ್ತರು ಬಗರೆ ಅವರ ಅಂಗಡಿಗೆ ಆಗಮಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ಆರಂಭಿಸಿದರು.
ಹಿಂದೂಪರ ಸಂಘಟನೆಯ ಪ್ರಮುಖರಾದ ಮಹೇಶ ಸಾಲಿಮಠ, ಮಲ್ಲಾರಪ್ಪ ತಳ್ಳಿಹಳ್ಳಿ, ಗಂಗಾಧರ ಶೆಟ್ಟರ್, ಪ್ರವೀಣ ಬಾಲೇಹೊಸೂರ, ಮಹೇಶ ಮುದಗಲ್, ಗಂಗಾಧರ ಬಾಣದ, ಹನುಮಂತಗೌಡ ಮುದಿಗೌಡ್ರ ಹಾಗೂ ಸಾವಿರಾರು ಕಾರ್ಯಕರ್ತರು ಪೊಲೀಸ್ ಠಾಣೆ ಎದುರಲ್ಲಿ ಪ್ರತಿಭಟನೆ ಆರಂಭಿಸಿ, ಆರ್‌ಎಸ್‌ಎಸ್ ವಿರುದ್ಧ ಅವಹೇಳಕಾರಿ ಘೋಷಣೆ ಕೂಗಿದವರನ್ನು, ಬಗರೆ ಅವರ ಅಂಗಡಿಗೆ ಕಲ್ಲು ಎಸೆದ ಕಿಡಿಗೇಡಿಗಳನ್ನು ಹಾಗೂ ಪರವಾನಗಿ ಪಡೆಯದೇ ಕೋಮುಗಲಭೆಗೆ ಕಾರಣವಾದ ಪಟ್ಟಣದ ಅಂಜುಮನ್ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಪಟ್ಟು ಹಿಡಿದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್‌ಪಿ ಹನುಮಂತಪ್ಪ ಹಿಂದೂಪರ ಸಂಘಟನೆಯ ಪ್ರಮುಖರೊಂದಿಗೆ ಮಾತುಕತೆ ನಡೆಸಿ ತಪ್ಪಿಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಹಾಗೂ ಬಂಧಿಸಲಾಗುವದು ಎಂದು ತಿಳಿಸಿದರೂ ಸಹ ಹಿಂದೂಪರ ಸಂಘಟನೆ ಪ್ರಮುಖರು ಹಾಗೂ ಯುವಕರು ಈಗಲೇ ಬಂಧಿಸುವಂತೆ ಪಟ್ಟು ಹಿಡಿದರು. ಪ್ರತಿಯಾಗಿ ಇನ್ನೊಂದು ಕೋಮಿನವರೂ ಸಹ ಪೊಲೀಸ್ ಠಾಣೆಯ ಎದುರಲ್ಲಿ ಪ್ರತಿಭಟನೆ ಕೈಗೊಳ್ಳಲು ಮುಂದಾದರು. ಎಸ್‌ಪಿ ಹನುಮಂತಪ್ಪ ಹಿಂದೂಪರ ಸಂಘಟನೆಯ ಪ್ರಮುಖರೊಂದಿಗೆ ಮತ್ತೊಂದು ಬಾರಿ ಮಾತುಕತೆ ನಡೆಸಿ ಪ್ರತಿಭಟನೆ ಕೈಬಿಡಲು ಮನವಿ ಮಾಡಿದರು.
Tripura Violence; ಅಮರಾವತಿಯಲ್ಲಿ ಮತ್ತೆ ಹಿಂಸಾಚಾರ : 4 ದಿನಗಳ ಕರ್ಫ್ಯೂ,ಇಂಟರ್‌ನೆಟ್ ಬಂದ್!
ಮಹೇಶ ಸಾಲಿಮಠ ಮಾತನಾಡಿ, ನ. 17ರ ಒಳಗಾಗಿ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ನ. 18ರಂದು ಸವಣೂರ(Savanur) ಬಂದ್(Bandh) ಕರೆ ನೀಡಲಾಗುವದು ಎಂದು ತಿಳಿಸಿ ಪ್ರತಿಭಟನೆಯನ್ನು ವಾಪಸ್ ಪಡೆದರು.
ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆಯನ್ನು ಹಿಂಪಡೆದ ಸುದ್ದಿ ತಿಳಿದು ಇನ್ನೊಂದು ಸಮುದಾಯ ಸಹ ಪ್ರತಿಭಟನೆ ವಾಪಸ್ ಪಡೆದು ಮನೆಗೆ ತೆರಳಿದರು.
ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಜೀಶಾನಖಾನ್ ಪಠಾಣ, ಅಜ್ಮತುಲ್ಲಾಖಾನ್ ಅಳ್ನಾವರ, ಅಬ್ದಲಗಫಾರ ಹುದೂದ, ಅಬ್ದಲರೆಹಮಾನ ದುಕಾನದಾರ, ಮೊಹ್ಮದಯೂಸಪ್ ಪರಾಶ, ನನ್ನಮೀಯಾ ಬನ್ನೂರ, ರಿಯಾಜ್‌ಅಹ್ಮದ ಗೌಡಗೇರಿ, ಕರೀಮಖಾನ ಮುನೀಮಖಾನವರ, ಅಬ್ದುಲವಾಹೀದ ಪರಾಶ, ಮುಸ್ಲಿಂ(Muslim) ಸಮುದಾಯದ ಪ್ರಮುಖರು ಸೇರಿದಂತೆ ಸಾವಿರಾರು ಜನರು ಪತ್ರಿಭಟನೆಯಲ್ಲಿ ಪಾಲ್ಗೊಂಡಿದ್ದರು.