Davanagere News: ಶಾಸಕರ ಅಣತಿಯಂತೆ ತಹಸೀಲ್ದಾರ್ ಕೆಲಸ; ಆರೋಪ

Published : Oct 15, 2022, 09:37 AM ISTUpdated : Oct 15, 2022, 09:38 AM IST
Davanagere News: ಶಾಸಕರ ಅಣತಿಯಂತೆ ತಹಸೀಲ್ದಾರ್ ಕೆಲಸ; ಆರೋಪ

ಸಾರಾಂಶ

ಶಾಸಕರ ಅಣತಿಯಂತೆ ತಹಸೀಲ್ದಾರ್ ಕೆಲಸ; ಆರೋಪ ಮಾಜಿ ಶಾಸಕ ಡಿ.ಜಿ.ಶಾಂತನಗೌಡರಿಂದ ಆರೋಪ ವಿಎ ಹಾಗೂ ರಾಜಸ್ವ ನಿರೀಕ್ಷಕರಿಗೆ ಸೂಚಿಸಿದ್ದೇನೆ  

ಹೊನ್ನಾಳಿ (ಅ.15) : ತಹಸೀಲ್ದಾರ್‌ಎಚ್‌.ಜೆ. ರಶ್ಮೀ ಅವರು ಕಾನೂನಿನಂತೆÜ ಜನ ಸಾಮಾನ್ಯರ ಪರ ಕೆಲಸ ಮಾಡದೆ ಶಾಸಕರ ಅಣತಿಯಂತೆ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಆರೋಪಿಸಿದರು. ಶುಕ್ರವಾರ ತಹಸೀಲ್ದಾರ್‌ ಕಚೇರಿಯಲ್ಲಿ ಮಾತನಾಡಿದ ಅವರು, ಬಗರ್‌ಹುಕುಂ ಕಮಿಟಿಯಲ್ಲಿ 27 ಜನರಿಗೆ ಖಾತೆ ಪಹಣಿ ನೀಡಲು ತೀರ್ಮಾನವಾಗಿದೆ. ಅದರಂತೆæ 23 ಜನರಿಗೆ ದಾಖಲೆ ಕೊಟ್ಟಿದ್ದಾರೆ. ಆದರೆ ಇನ್ನೂ ನಾಲ್ಕು ಜನರಿಗೆ ಖಾತೆ ಹಾಗೂ ಪಹಣಿ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ಕಚೇರಿಗೆ ಬಂದು ಕೇಳಿದರೆ ಶಾಸಕರು ಹೇಳಿದರೆ ಮಾತ್ರ ನಾವು ಖಾತೆ ಪಹಣಿ ಮಾಡಿಕೊಡುತ್ತೇವೆ ಎಂದು ತಹಸೀಲ್ದಾರ್‌ ನನಗೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಭ್ರಷ್ಟಾಚಾರ ಆರೋಪ

ಸರ್ಕಾರದಿಂದ ನೇಮಕಗೊಂಡಿರುವ ತಹಸೀಲ್ದಾರ್‌ ಶಾಸಕರು ಹೇಳಿದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರೆ, ಇದನ್ನು ನಾವು ಸಹಿಸಿಕೊಂಡು ಸುಮ್ಮನಿರಬೇಕಾ? ಇವರು ಸರ್ಕಾರದಿಂದ ಆಯ್ಕೆಯಾಗಿದ್ದಾರೋ ಅಥವಾ ಶಾಸಕರಿಂದ ಆಯ್ಕೆಯಾಗಿದ್ದಾರಾ ಎಂಬುದೇ ನನಗೆ ಗೊತ್ತಾಗುತ್ತಿಲ್ಲ ಎಂದರು.

ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಎಸಿ ಅವರ ಗಮನಕ್ಕೆ ತರುತ್ತೇವೆ. ಅಲ್ಲಿ ನಮಗೆ ನ್ಯಾಯ ಸಿಕ್ಕಿದರೆ ಸರಿ ಇಲ್ಲವಾದರೆ ನಾವು ನ್ಯಾಯಕ್ಕಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನನ್ನ ಅಧಿಕಾರಾವಧಿಯಲ್ಲಿ ನ್ಯಾಯಾಲಯದ ಆದೇಶದಂತೆ ಗೋಮಾಳ ಜಾನುವಾರಗಳಿಗೆ ಅವಕಾಶ ಕೊಡಬೇಕೆಂದು ತೀರ್ಪು ನೀಡಿದ್ದರಿಂದ ಕೆಲವು ನಾಲ್ಕೈದು ರೈತರಿಗೆ ಸಾಗುವಳಿ ಚೀಟಿ ನೀಡಲು ಅಂದು ತಿರಸ್ಕಾರ ಮಾಡಿದ್ದೇವು ಆದರೆ ಉಪ ವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಮಾಡಲು ಅವಕಾಶ ನೀಡಿದೆ ಎಂದರು.

ಈ ವಿಚಾರವಾಗಿ ನಾವು ತಹಸೀಲ್ದಾರ್‌ ಕಚೇರಿಗೆ ಬರುವುದಿಲ್ಲ, ಇನ್ನೇನಿದ್ದರೂ ಉಪ ವಿಭಾಗಾಧಿಕಾರಿ ಕಚೇರಿಗೆ ಹೋಗಿ ನ್ಯಾಯ ಕೇಳುತ್ತೇವೆ, ಅಲ್ಲಿಯೂ ನಮಗೆ ನ್ಯಾಯ ಸಿಗಲಿಲ್ಲ ಎಂದರೆ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಮಾಜಿ ಶಾಸಕ ಡಿ.ಜಿ.ಶಾಂತನಗೌಡರ ಆರೋಪಕ್ಕೆ ಸ್ಪಷ್ಟನೆ ನೀಡಿದ ತಹಸೀಲ್ದಾರ್‌ ರಶ್ಮೀ ಅವರು. ನಾಲ್ಕು ಜನರಿಗೆ ಬಗರ್‌ ಹುಕುಂ ಮಂಜೂರಾತಿಯಾಗಿ 20 ವರ್ಷ

ದಾವಣಗೆರೆ ವಿವಿಯ ಆರು ವಿಜ್ಞಾನಿಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಥಾನ!

ಕಳೆದಿದೆ. ಅವರು ಅನುಭವದಲ್ಲಿ ಇದ್ದಾರೋ ಇಲ್ಲವೋ ನೋಡಿ ಅವರಿಗೆ ಖಾತೆ ಪಹಣಿ ಮಾಡಿ ಕೊಡುತ್ತೇವೆ, ಈಗಾಗಲೆ ವಿಎ ಹಾಗೂ ರಾಜಸ್ವ ನಿರೀಕ್ಷಕರಿಗೆ ಸೂಚಿಸಿದ್ದೇವೆ ಅವರು ಪರಿಶೀಲನೆ ಮಾಡುತ್ತಿದ್ದಾರೆ, ಅಲ್ಲಿಯವರೆಗೂ ತಾಳೆÜ್ಮಯಿಂದ ಇರಬೇಕಾಗುತ್ತದೆ ಎಂದು ತಿಳಿಸಿದರು.

PREV
Read more Articles on
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ