Mangaluru News ಕಾರು ನಿಲ್ಲಿಸಿ ಕೆಳಗಿಳಿಯುತ್ತಿದ್ದಂತೆ ಮರ ಬಿದ್ದು ಟೆಕ್ಕಿ ಸಾವು

By Kannadaprabha NewsFirst Published Jan 3, 2022, 8:15 AM IST
Highlights
  • ರಾಷ್ಟ್ರೀಯ ಹೆದ್ದಾರಿ ಬದಿ ಕಾರು ನಿಲ್ಲಿಸಿ ಕೆಳಗಿಳಿಯುತ್ತಿದ್ದಂತೆ ಧೂಪದ ಮರವೊಂದು ಬಿದ್ದು ವ್ಯಕ್ತಿ ಸ್ಥಳದಲ್ಲೇ ಮೃತ
  • ದಕ್ಷಿಣಕನ್ನಡ ಜಿಲ್ಲೆಯ ಅಡ್ಡಹೊಳೆ ಎಂಬಲ್ಲಿ ನಡೆದಿದೆ. 

 ಉಪ್ಪಿನಂಗಡಿ (ಜ.03): ರಾಷ್ಟ್ರೀಯ ಹೆದ್ದಾರಿ (National Highway) ಬದಿ ಕಾರು ನಿಲ್ಲಿಸಿ ಕೆಳಗಿಳಿಯುತ್ತಿದ್ದಂತೆ ಧೂಪದ ಮರವೊಂದು (Tree) ಬಿದ್ದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ (Dakshina Kannada)  ಜಿಲ್ಲೆಯ ಅಡ್ಡಹೊಳೆ ಎಂಬಲ್ಲಿ ನಡೆದಿದೆ. ಬೆಂಗಳೂರಿನ (Bengaluru)  ಬೊಮ್ಮನಹಳ್ಳಿಯ ವೆಸ್ಟೆಂಡ್‌ ಕೂಡ್ಲುಗೇಟ್‌ ನಿವಾಸಿ ಸುರೇಶ್‌ ನಾವಡ (43) ಮೃತ ವ್ಯಕ್ತಿ. ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ ಸುರೇಶ್‌, ಡಿ.23ರಂದು ತಾಯಿ ಮನೆ ಪಾವಂಜೆಗೆ ಪತ್ನಿ ಹಾಗೂ ತನ್ನಿಬ್ಬರು ಮಕ್ಕಳೊಂದಿಗೆ ಬಂದಿದ್ದರು. 

ಭಾನುವಾರ ಬೆಂಗಳೂರಿಗೆ (Bengaluru) ತಮ್ಮ ಕಾರಿನಲ್ಲಿ ವಾಪಸ್‌ ಆಗುವಾಗ ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ ಎಂಬಲ್ಲಿ ಏನೋ ಶಬ್ದ ಕೇಳಿದ್ದು, ಕಾರು ನಿಲ್ಲಿಸಿ ಪರಿಶೀಲಿಸಲು ಕೆಳಗಿಳಿದಿದ್ದಾರೆ. ದುರದೃಷ್ಟವಶಾತ್‌ ಮರ ಬಿದ್ದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮನೆಗೆಲಸದ ಯುವತಿ ನಿಗೂಢ ಸಾವು : 

 ಬೆಳ್ಳಂದೂರು ಸಮೀಪ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರ ಫ್ಲ್ಯಾಟ್‌ನಲ್ಲಿ 19 ವರ್ಷದ ಮನೆಗೆಲಸದ ಯುವತಿ ನಿಗೂಢವಾಗಿ ಸಾವನ್ನಪ್ಪಿರುವ(Death) ಘಟನೆ ಶನಿವಾರ ನಡೆದಿದೆ. ಜಕ್ಕಸಂದ್ರ ನಿವಾಸಿ ಕವಿತಾ (19) ಮೃತ ದುರ್ದೈವಿ. ಫ್ಲ್ಯಾಟ್‌ನ ಸ್ನಾನದ ಕೋಣೆಯಲ್ಲಿ ಬೆಳಗ್ಗೆ 10ರ ಸುಮಾರಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಆಕೆ ಮೃತದೇಹ(Deadbody) ಪತ್ತೆಯಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಕವಿತಾ ಆತ್ಮಹತ್ಯೆ(Suicide) ಮಾಡಿಕೊಂಡಿರಬಹುದು ಎಂದು ಪೊಲೀಸರು(Police) ಶಂಕಿಸಿದರೆ, ಮಗಳ ಸಾವಿನ ಬಗ್ಗೆ ಮೃತಳ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿ ವಿವೇಕ, ಬೆಳ್ಳಂದೂರು ಎಂಬೆಸ್ಸಿ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಪತ್ನಿ ಮತ್ತು ಮಕ್ಕಳ ಜತೆ ನೆಲೆಸಿದ್ದಾರೆ. ಎಂಟು ತಿಂಗಳಿಂದ ಅವರ ಮನೆಯಲ್ಲಿ ಕವಿತಾ ಕೆಲಸ ಮಾಡುತ್ತಿದ್ದಳು. ಆ ಫ್ಲ್ಯಾಟ್‌ನಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ಆಕೆ ನೆಲೆಸಿದ್ದಳು.

ನಿಗೂಢ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಕಿರುತೆರೆ ನಟನ ಮೃತದೇಹ ಪತ್ತೆ!

ತನ್ನ ಕೋಣೆಯ ಸ್ನಾನದ ಮನೆಯಲ್ಲಿ ಕವಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಗ್ಗೆ ತುಂಬಾ ಹೊತ್ತಾದರೂ ಕೋಣೆಯಿಂದ ಕವಿತಾ ಹೊರಗೆ ಬಾರದೆ ಹೋದಾಗ ಆತಂಕಗೊಂಡ ವಿವೇಕ್‌, ಆಕೆಯ ಕೋಣೆ ಬಾಗಿಲು ಬಡಿದ್ದಾರೆ. ಆಗಲೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಸ್ನಾನದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. 

ತಕ್ಷಣವೇ ಬೆಳ್ಳಂದೂರು ಠಾಣೆ ಪೊಲೀಸರಿಗೆ ವಿವೇಕ್‌ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ(Postmorterm) ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಮೌಖಿಕವಾಗಿ ಕವಿತಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. 

ಈ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾಹಿತಿ ನೀಡಲಾಗಿದ್ದು, ಎಫ್‌ಎಸ್‌ಎಲ್‌ ವರದಿ ಬಳಿಕ ಸಾವಿನ ಬಗ್ಗೆ ಖಚಿತ ಕಾರಣ ಗೊತ್ತಾಗಲಿದೆ. ಈ ಬಗ್ಗೆ ಆತ್ಮಹತ್ಯೆ ಆರೋಪದಡಿ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿನ ಬಗ್ಗೆ ತನಿಖೆಗೆ ಪೋಷಕರ ಒತ್ತಾಯ

ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ತನ್ನ ಮೇಲಿನ ನಡೆದ ದೌರ್ಜನ್ಯವನ್ನು(Harrashment) ಸಹಿಸಲಾರದೆ ಆಕೆ ಮೃತಪಟ್ಟಿದ್ದಾಳೆ ಎಂದು ಕವಿತಾ ಪೋಷಕರು ಆರೋಪಿಸಿದ್ದಾರೆ. ಅಲ್ಲದೆ ಮಗಳ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಮನೆ ಮಾಲೀಕ ವಿವೇಕ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತಳ ಕುಟುಂಬದವರು ಆಗ್ರಹಿಸಿದ್ದಾರೆ.

ಮಾಡೆಲಿಂಗ್‌ಗೆ ಬೆಂಗಳೂರು ಹೊರಟಿದ್ದ ವಿದ್ಯಾರ್ಥಿನಿ ನಿಗೂಢ ಸಾವು : ಮೂವರು ಅರೆಸ್ಟ್

ಹೆಣ್ಣಾಗಿ ಬದಲಾಗಿದ್ದ ದೇಗುಲದ ಧರ್ಮದರ್ಶಿ, ಅರ್ಚಕ ನಿಗೂಢ ಸಾವು

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ (chintamani) ತಾಲೂಕಿನ ಗುಟ್ಟಹಳ್ಳಿಯ ಆದಿಶಕ್ತಿ ಕೋಳಾಲಮ್ಮ ದೇವಿಯ ದೇಗುಲದ ಧರ್ಮದರ್ಶಿ (trustee) ಹಾಗೂ ಅರ್ಚಕ (Priest) ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ನ.13 ರಂದು ನಡೆದಿತ್ತು. ಮೇಲ್ನೋಟಕ್ಕೆ ಕೊಲೆ (Murder) ಶಂಕೆ ವ್ಯಕ್ತವಾಗಿದೆ.

ಮೃತರನ್ನು ದೇವಾಲಯದ ಧರ್ಮದರ್ಶಿ ಮತೃ ಸ್ವರೂಪಿಣಿ ದೇವಿ ಆಲಿಯಾಸ್‌ ಶ್ರೀಧರ್‌ ಹಾಗೂ ದೇವಾಲಯದ ಅರ್ಚಕ ಶಿಡ್ಲಘಟ್ಟ ತಾಲೂಕಿನ ಕೆ.ಮುತ್ತಕದಹಳ್ಳಿ ನಿವಾಸಿ ಲಕ್ಷ್ಮೀಪತಿ ಎಂದು ಗುರುತಿಸಲಾಗಿದೆ.

ಹೆಣ್ಣಾಗಿ ಬದಲಾಗಿದ್ದ ಶ್ರೀಧರ್‌

ಶ್ರೀಧರ್‌ ಹೆಣ್ಣಿನ (lady) ಭಾವನೆಗಳಿಗೆ ಪರಿವರ್ತನೆ ಆದ ಬಳಿಕ ಗುಟ್ಟ ಹಳ್ಳಿಯಲ್ಲಿ 15 ವರ್ಷಗಳ ಹಿಂದೆ ಕೋಳಾಲಮ್ಮ ದೇವಿಯನ್ನು (kolalamma Temple) ಸ್ಥಾಪಿಸಿ ಭಕ್ತರಿಗೆ ಉಪದೇಶ ನೀಡುತ್ತಿದ್ದಳು. ದೇವಾಲಯಕ್ಕೆ ಬರುವರ ಭಕ್ತರ (Devotees) ಸಂಖ್ಯೆ ಹೆಚ್ಚಾದಾಗ ತನ್ನ ಶಿಷ್ಯ ಲಕ್ಷ್ಮೀಪತಿಯನ್ನು ಪೂಜಾರಿಯಾಗಿ ನೇಮಿಸಿಕೊಂಡಿದ್ದಳು. ಆದರೆ ಶುಕ್ರವಾರ ಬೆಳಗ್ಗೆ ಇವರಿಬ್ಬರ ಮೃತದೇಹಗಳು ದೇವಾಲಯದ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ. ಮೇಲ್ನೋಟಕ್ಕೆ ಇದು ಕೊಲೆ ಸಂಶಯ ವ್ಯಕ್ತವಾಗಿದ್ದು, ಚಿಂತಾಮಣಿ ಠಾಣೆಯಲ್ಲಿ (Chintamani Police Station) ಪ್ರಕರಣ ದಾಖಲಾಗಿದೆ.

click me!