Gadag: ಕಾಲಹರಣ ಮಾಡುತ್ತಿರುವ ಬಿಜೆಪಿ ಸರ್ಕಾರ: ಜ.4 ರಿಂದ ಕಾಂಗ್ರೆಸ್‌ ಪಾದಯಾತ್ರೆ

By Kannadaprabha NewsFirst Published Jan 3, 2022, 7:56 AM IST
Highlights

*  ವಿವಿಧ ಬೇಡಿಕೆಗಳ ಈಡೇರಿಕೆಗೆ ಹೊಳೆಆಲೂರಿನಿಂದ ಗದಗವರೆಗೆ ಕಾಲ್ನಡಿಗೆ
*  ಪ್ರತಿವರ್ಷ ನಾನಾ ಸಮಸ್ಯೆಗಳನ್ನು ಅನುಭವಿಸುತ್ತಾ ಬಂದಿರುವ ನೆರೆ ಸಂತ್ರಸ್ತರು
*  ಸಿಸಿ ಪಾಟೀಲರ ಕ್ಷೇತ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರಯವ ಅಕ್ರಮ ಮರಳು ಗಣಿಗಾರಿಕೆ

ರೋಣ(ಡಿ.03):  ಆಸರೆ ಮನೆ ಹಂಚಿಕೆ ಸಮಸ್ಯೆ, ಹದಗೆಟ್ಟ ರಸ್ತೆ ಶೀಘ್ರ ದುರಸ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್‌ ವಿವಿಧ ಘಟಕಗಳ ನೇತೃತ್ವದಲ್ಲಿ ಜ. 4ರಿಂದ 6ರ ವರೆಗೆ ಹೊಳೆಆಲೂರಿನಿಂದ ಗದಗವರೆಗೆ ಬೃಹತ್‌ ಪಾದಯಾತ್ರೆ(Padayatra) ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಬಿ.ಆರ್‌. ಯಾವಗಲ್ಲ(BR Yavagal) ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲಪ್ರಭಾ ನದಿ(Malaprabha River) ಪಾತ್ರದಲ್ಲಿರುವ 17 ಗ್ರಾಮಗಳನ್ನು ಸ್ಥಳಾಂತರಕ್ಕಾಗಿ ಆಸರೆ ನವಗ್ರಾಮ ನಿರ್ಮಿಸಿ 11 ವರ್ಷಗಳೆ ಕಳೆದಿದ್ದರೂ ಸಮರ್ಪಕ ಹಕ್ಕು ಪತ್ರ ವಿತರಣೆಯಾಗಲಿ, ನವಗ್ರಾಮದಲ್ಲಿನ ಮೂಲ ಸಮಸ್ಯೆ ಇತ್ಯರ್ಥವಾಗಲಿ, ಮನೆ ಹಂಚಿಕೆಯಾಗಿಲ್ಲ. ನೆರೆ ಸಂತ್ರಸ್ತರು(Flood Victims) ಪ್ರತಿವರ್ಷ ನಾನಾ ಸಮಸ್ಯೆಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ನಾವು ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ್ದಾಗ ಆಸರೆ ಮನೆ ಹಂಚಿಕೆ, ಹಕ್ಕುಪತ್ರ ವಿತರಣೆ ಮಾಡಿ ಇಂದಂತದಲ್ಲಿ ಸಮಸ್ಯೆಗೆ ಪರಿಹಾರ(Compensation) ನೀಡಲಾಗಿತ್ತು. ಆದರೆ, ಸಿ.ಸಿ. ಪಾಟೀಲರು(CC Patil) ಶಾಸಕರಾದ ಬಳಿಕ ನಾವು ಹಂಚಿಕೆ ಮಾಡಿದ್ದನ್ನು ಬದಲಾಯಿಸಿ ತಮಗೆ ಬೇಕಾದವರಿಗೆ ಹಂಚಿಕೆ ಮಾಡಿ ಮತ್ತೆ ಗೊಂದಲ, ಸಮಸ್ಯೆ ಉಂಟಾಗುವಂತೆ ಮಾಡಿದರು. ಮಹದಾಯಿ(Mahadayi) ನ್ಯಾಯಾಧಿಕರಣ ತೀರ್ಪು ನಮ್ಮಂತೆ ಆಗಿದ್ದರೂ ತಾಂತ್ರಿಕ ಸಮಸ್ಯೆ ಮುಂದಿಟ್ಟು ಸರ್ಕಾರ(Government of Karnataka) ಅನಗತ್ಯ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

Latest Videos

Mekedatu Politics: ಹೋಂ ಮಿನಿಸ್ಟರ್‌ಗೆ ಅನುಭವ ಇಲ್ಲವೆಂದ ಡಿ.ಕೆ.ಶಿವಕುಮಾರ್‌

ಸಚಿವರ ಕ್ಷೇತ್ರದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ(Illegal Sand Mining) ನಡೆಯುತ್ತಿದೆ. ಅದನ್ನು ತಡೆಯುವ ಬದಲು, ರಸ್ತೆಗಳು ಹದಗೆಡಲು ಕಾಂಗ್ರೆಸ್ಸಿಗರ(Congress) ಅಕ್ರಮ ಮರಳು ಗಣಿಗಾರಿಕೆ ಎಂದು ಹೇಳುವ ಸಚಿವ ಪಾಟೀಲರೇ, 2013ರಿಂದ 2018ರ ವರೆಗೆ ಅತ್ಯಂತ ಕನಿಷ್ಠ ಮಟ್ಟದಲ್ಲಿ ಮರಳು ದಂಧೆ ನಡೆಯುತ್ತಿತ್ತು. ಆಗ ಬಳಿಕ ನಾವು ಅಧಿಕಾರಕ್ಕೆ ಬಂದಾಗ ನಿಯಂತ್ರಿಸಲಾಯಿತು. ಈಗ ಮತ್ತೆ ಅಕ್ರಮ ಮರಳು ದಂಧೆ ಜೋರಾಗಿದೆ ಎಂದರು.

70 ಕಿಮೀ ಪಾದಯಾತ್ರೆ

ನರಗುಂದ(Nargund), ರೋಣ(Ron), ಗದಗ(Gadag) ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಜ. 4ರಂದು ಬೆಳಗ್ಗೆ 9 ಗಂಟೆಗೆ ಹೊಳೆಆಲೂರಿನಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ಗಾಡಗೋಳಿ, ಹೊಳೆಮಣ್ಣೂರ, ಅಸೂಟಿ, ಕರಮಡಿ, ಮಾಳವಾಡ, ಜೌಜಗೇರಿ ಮೂಲಕ ತೆರಳಿ ಬೆಳವಣಕಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಗುವುದು. ಜ. 5ರಂದು ಬೆಳಗ್ಗೆ 8 ಗಂಟೆಯಿಂದ ಬೆಳವಣಕಿಯಿಂದ ಪ್ರಾರಂಭಿನಿಸಿ ಮಲ್ಲಾಪುರ, ಸಂದಿಗವಾಡ, ಹೊನ್ನಾಪುರ, ಕದಡಿ, ಗಾವರವಾಡ, ಡ.ಸ. ಹಡಗಲಿ, ಗುಜಮಾಗಡಿ ಮೂಲಕ ಕರುಡಗಿ ಗ್ರಾಮಕ್ಕೆ ತೆರಳಿ ವಾಸ್ತವ್ಯ ಮಾಡಲಾಗುವುದು. ಜ. 6ರ ಬೆಳಗ್ಗೆ 8 ಗಂಟೆಯಿಂದ ಕಿರಟಗೇರಿ, ಹುಯಿಲಗೋಳ, ಚಿಕ್ಕೊಪ್ಪ, ಹಿರೇಕೊಪ್ಪ, ನಾಗಸಮುದ್ರ, ನರಸಾಪುರ, ಬೆಟಗೇರಿ ಮಾರ್ಗವಾಗಿ ಗದಗ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ವಿವಿಧ ಬೇಡಿಕೆಗಳ ಈಡೇರಿಕಾಗಿ ಪ್ರತಿಭಟಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಬಿ.ಆರ್‌. ಯಾವಗಲ್ಲ ತಿಳಿಸಿದರು.

Karnataka Politics: ಸಚಿವ ಕಾರಜೋಳ ‘ಬಾಂಬ್‌’: ಕಾಂಗ್ರೆಸ್‌ ವಿರುದ್ಧ ಶೀಘ್ರ ಸ್ಪೋಟಕ ಸುದ್ದಿ..!

ಜಿಲ್ಲಾ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಜಿ.ಎಸ್‌. ಪಾಟೀಲ ಮಾತನಾಡಿದರು. ನರಗುಂದ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಪ್ರವೀಣ ಯಾವಗಲ್ಲ, ಹೊಳೆಆಲೂರ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಎಂ.ಬಿ. ಕೋಳೇರಿ, ರಾಜು ಕಲಾಲ, ತಾಪಂ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಪ್ರಕಾಶ ಭಜಂತ್ರಿ, ಸಂಗು ನವಲಗುಂದ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯದ ಹಿತದೃಷ್ಟಿಯಿಂದ ಪಾದಯಾತ್ರೆ ಮಾಡ್ತೇವೆ: 

ಮೇಕೆದಾಟು ಯೋಜನೆಗೆ(Mekedatu Project) ಆಗ್ರಹಿಸಿ ರಾಜ್ಯ ಕಾಂಗ್ರೆಸ್ ಜನವರಿ 9 ರಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಕುರಿತಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಮೇಕೆದಾಟು ಯೋಜನೆ ಅಪ್ಪಟ ಕುಡಿಯುವ ನೀರಿನ ಯೋಜನೆ ಅದರೊಂದಿಗೆ ವಿದ್ಯುತ್ ಉತ್ಪಾದನೆ ಮಾಡುವ ಯೋಚನೆಯೂ ಇದೆ. ವಿಶೇಷವಾಗಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸಿಕೊಡುವುದು ಮೂಲ ಉದ್ದೇಶ ಎಂದರು. ಇಂದು ಬೆಂಗಳೂರಿನಲ್ಲಿ ಶೇ. 30ರಷ್ಟು ಜನರಿಗೆ ಕಾವೇರಿ ನೀರು ಸಿಗುವುದಿಲ್ಲ. ಈ ಯೋಜನೆಯ ಬಗ್ಗೆ ಸಂಪೂರ್ಣ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. ಇದಕ್ಕೆ ಅವರಿಂದ ಒಪ್ಪಿಗೆ ಬೇಕಿದೆ. ಒಟ್ಟಾರೆ ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದ್ದರು. 
 

click me!