
ಬೆಂಗಳೂರು (ಆ.05) ದೇಶದಲ್ಲಿ ಇಂದು ಶಿಕ್ಷಕರ ದಿನಾಚರಣೆಯಲ್ಲಿ ಆಚರಿಸಲಾಗಿದೆ. ಇದೇ ಶಿಕ್ಷಕರ ದಿನಾಚರಣೆ ದಿನ ಶಿಕ್ಷಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ವೈದ್ಯರು ತಮ್ಮ ಹೆಸರಿನ ಮುಂದೆ Dr ಎಂದು ಹಾಕಿಕೊಳ್ಳುತ್ತಾರೆ. ಇದೇ ರೀತಿ ಶಿಕ್ಷಕರು ತಮ್ಮ ಹೆಸರಿನ ಮುಂದೆ Tr ಹಾಕಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ರಾಜ್ಯ ಕ್ಯಾಬಿನೆಟ್‌ನಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಈ ಮೂಲಕ ಶಿಕ್ಷಕರು ಇನ್ಮುಂದೆ Tr ಮೂಲಕ ಗುರುತಿಸಿಕೊಳ್ಳಲಿದ್ದಾರೆ.
ಶಿಕ್ಷಕರ ದಿನಾಚರಣೆಗೆ ಶಿಕ್ಷಕರಿಗೆ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಶಿಕ್ಷಕರ ಕೊಡುಗೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಶಿಕ್ಷಕರ ಗೌರವ ನೀಡುವ ಸಲುವಾಗಿ ರಾಜ್ಯ ಸರ್ಕಾರ ಸಂಪುಟದಲ್ಲಿ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. Tr ಎಂಬುದು ಕೇವಲ ಒಂದು ಪ್ರಿಫಿಕ್ಸ್ ಅಲ್ಲ, ಸಮಾಜ ಶಿಕ್ಷಕರ ಸೇವೆಯ ಪ್ರತೀಕ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹಲವು ವೃತ್ತಿಪರರಿಗೆ ಗೌರವದ ಪ್ರಿಫಿಕ್ಸ್ ನೀಡಲಾಗಿದೆ. ಗೌರವಯುತವಾಗಿ ಹೆಸರಿನ ಮುಂದೆ ಬಳಲುತ್ತಾರೆ. ಇನ್ನು ಮುಂದೆ ಶಿಕ್ಷಕರು ಗೌರವಯುತವಾಗಿ Tr ಬಳಸುತ್ತಾರೆ. ಇದರಿಂದ ಶಿಕ್ಷಕರಿಗೂ ವೃತ್ತಿಪರತೆಯಲ್ಲಿನ ಗುರುತು ಸಿಗಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಶಿಕ್ಷಕರ ದಿನಾಚರಣೆ ದಿನವೇ ಈ ಘೋಷಣೆ ಹೊರಬಿದ್ದಿದೆ. ಈ ನಿರ್ಧಾರದಿಂದ ಶಿಕ್ಷಕರ ಆತ್ಮವಿಶ್ವಾಸ ಇಮ್ಮಡಿಗೊಳ್ಳಲಿದೆ. ಶಿಕ್ಷಕರಿಗೆ ಸಮಾಜದಲ್ಲಿರುವ ಸ್ಥಾನಮಾನ ಉನ್ನತಗೊಳ್ಳಲಿದೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.