ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಲಿ : ದಿಂಗಾಲೇಶ್ವರ ಸ್ವಾಮೀಜಿ

By Suvarna News  |  First Published Oct 19, 2021, 9:28 AM IST
  •  ಶಿಕ್ಷಕರಾದವರು ಅದರ ಮಟ್ಟ ಸುಧಾರಣೆಗೆ ಮತ್ತಷ್ಟು ಶ್ರವವಹಿಸಬೇಕಿದೆ
  • ಬಾಲೇಹೊಸೂರಿನ ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ

  ಹರಲಾಪೂರ  (ಅ.19):  ಇಂದಿನ ಶಿಕ್ಷಣದ ( Education ) ಮಟ್ಟ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರಾದವರು (Teacher) ಅದರ ಮಟ್ಟ ಸುಧಾರಣೆಗೆ ಮತ್ತಷ್ಟು ಶ್ರವವಹಿಸಬೇಕಿದೆ ಎಂದು ಬಾಲೇ ಹೊಸೂರಿನ ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ (Dingaleshwara Swamiji) ಹೇಳಿದರು.

ಕುಂದಗೋಳ ತಾಲೂಕಿನ ಹರಲಾಪೂರದಲ್ಲಿ ಭಾನುವಾರ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ (Guruvandana Program) ಶ್ರೀಗಳು ಮಾತನಾಡಿದರು. ಶೈಕ್ಷಣಿಕವಾಗಿ ನಾವು ಬಹಳ ಮುಂದೆ ಹೋಗಿದ್ದೇವೆ. ಆದರೆ, ಅದರ ಗುಣಮಟ್ಟತೆಯನ್ನು ಕಾಪಾಡಿಕೊಳ್ಳುವಲ್ಲಿ ಎಡವುತ್ತಿದ್ದೇವೆ ಎಂದು ಹೇಳಿದರು.

Tap to resize

Latest Videos

ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳ (Students) ಬೌದ್ಧಿಕ ಮಟ್ಟ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಮಾತ್ರವಲ್ಲ, ತಪ್ಪು ಮಾಡಿದ ವಿದ್ಯಾರ್ಥಿಯನ್ನು ಶಿಕ್ಷಿಸುತ್ತಿದ್ದರು. ಆದರೆ, ಶಿಕ್ಷೆ ನೀಡುವ ಸಂದರ್ಭದಲ್ಲಿಯೂ ಆ ವಿದ್ಯಾರ್ಥಿಯ ನೆನಪಿನ ಶಕ್ತಿಯನ್ನು ವೃದ್ಧಿಸುವಂತಹ ಶಿಕ್ಷೆಯನ್ನೇ ಗುರುಗಳು ನೀಡುತ್ತಿದ್ದರು. ಆದರೆ, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಿಸದಂತಹ ಕಾನೂನುಗಳು (Law) ಜಾರಿಗೆ ಬಂದಿವೆ. ಇದರಿಂದ ವಿದ್ಯಾರ್ಥಿಗಳು ಸುಧಾರಣೆಯಾಗುವುದು ತುಂಬಾ ಕಷ್ಟ ಎಂದು ಹೇಳಿದರು.

ಮಕ್ಕಳನ್ನು ಸರಿದಾರಿಗೆ ತರಬೇಕಾದರೆ ಶಿಕ್ಷಕರಿಗೆ ಸ್ವಾತಂತ್ರ್ಯವನ್ನು (Freedom) ನೀಡಬೇಕಿದೆ. ಆದರೆ, ಪ್ರಸ್ತುತ ದಿನಮಾನಗಳಲ್ಲಿ ಎಲ್ಲ ಸ್ವಾತಂತ್ರ್ಯವನ್ನು ಕಿತ್ತುಕೊಂಡು ವಿದ್ಯಾರ್ಥಿಗೆ ಜ್ಞಾನಾರ್ಜನೆ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ ಎಂದರು.

ಹಾವೇರಿ (Haveri) ಡಯಟ್‌ನ ಉಪನ್ಯಾಸಕ ವಿ.ವಿ.ಸಾಲಿಮಠ (VV Salimutt) ಅವರು ಮಾತನಾಡಿ, ಮಕ್ಕಳಿಗೆ ಜ್ಞಾನಾರ್ಜನೆ ಮಾಡುವುದು ಪ್ರಸ್ತುತ ಸಂದರ್ಭದಲ್ಲಿ ಸವಾಲಿನ ಕೆಲಸವಾಗಿದೆ. ಹೀಗಾಗಿ ಶಿಕ್ಷಕ ವೃತ್ತಿ ಕೂಡ ಈಗ ಬಹಳ ಸವಾಲಿನ ಕೆಲಸವಾಗಿದೆ. ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿ ಮಾಡುವ ನಿಟ್ಟಿನಲ್ಲಿ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಗುರುವಂದನೆ ಸ್ವೀಕರಿಸಿದ ಶಿಕ್ಷಕರ ಪರವಾಗಿ ಮಾತನಾಡಿದ ಶಿಕ್ಷಕ ಎಂ.ಎಂ.ಹವಳದ (MM Havalada) ಅವರು, ತಮಗೆ ಕಲಿಸಿದ ಶಿಕ್ಷಕರನ್ನು ಸ್ಮರಿಸಿಕೊಳ್ಳುತ್ತಿರುವುದಲ್ಲದೆ, ಈ ರೀತಿ ಒಂದೇ ವೇದಿಕೆಯಲ್ಲಿ ಗುರುವಂದನೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ವಿಚಾರ. ಇಂತಹ ಸತ್ಕಾರ್ಯ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ವಿವರಿಸಿದರು. ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರಕ್ತಮುನಿ ಶಿವಾಚಾರ್ಯರು ಮಾತನಾಡಿದರು. ಹಳೆ ವಿದ್ಯಾರ್ಥಿಗಳ ಪರವಾಗಿ ಪರುಶರಾಮ ಮರೆಯಪ್ಪನವರ ಮತ್ತು ಸುಜಾತಾ ದೇವರಮನಿ ಶಿಕ್ಷಕರೊಂದಿಗಿನ ಓಡನಾಟವನ್ನು ಸ್ಮರಿಸಿದರು.

ಅದ್ಧೂರಿ ಮೆರವಣಿಗೆ:  ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರನ್ನು ಹರಲಾಪೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರಾಥಮಿಕ ಶಾಲೆಯಿಂದ ಆರಂಭಗೊಂಡ ಮೆರವಣಿಗೆಯು ಮುಕ್ತಿಮಂದಿರ ಮಾರ್ಗವಾಗಿ ತೆರಳಿ ಕೊನೆಯಲ್ಲಿ ಹನುಮಾನ ಮಂದಿರದಲ್ಲಿ ಕೊನೆಗೊಂಡಿತು.

ಶಿಕ್ಷಕರಿಗೆ ಗುರುವಂದನೆ:  ರಾತ್ರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ (High School) ಎಲ್ಲ ಶಿಕ್ಷಕರನ್ನು ದಿಂಗಾಲೇಶ್ವರ ಶ್ರೀಗಳು ಮತ್ತು ಮುಕ್ತಿಮಂದಿರದ ಶ್ರೀಗಳು ಸನ್ಮಾನಿಸಿದರು. ಈ ವೇಳೆ ಹಳೆಯ ವಿದ್ಯಾರ್ಥಿಗಳು ಕೂಡ ಸಾಥ್ ನೀಡಿದರು. ಕಾರ್ಯಕ್ರಮದ ಅಂಗವಾಗಿ ಗ್ರಾಮಸ್ಥರೆಲ್ಲರಿಗೂ ಉಚಿತ ಅನ್ನಪ್ರಸಾದ ಸೇವೆಯನ್ನು 

ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಸದಾನಂದ ಕಾಳಿ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಇದೆ ವೇಳೆ ಕೊಣ್ಣೂರು ಗ್ರಾಮದ ಜನಪದ ಕುಣಿತ ಮತ್ತು ಹರಲಾಪೂರ ಗ್ರಾಮದ ಸಿವೈಸಿ ತಂಡವದವರು ಜನಪದ ಹಾಡುಗಳನ್ನು ಹಾಡಿ ಜನರನ್ನು ಮನರಂಜಿಸಿದರು. ಲಾಲ್‌ಸಾಬ್ ನದಾಫ್ ನಿರೂಪಿಸಿದರು. ಶಿವಪ್ರಕಾಶಯ್ಯ ಹಿರೇಮಠ ವಂದಿಸಿದರು. ದಸ್ತಗೀರ್ ಶೇತಸನದಿ ಅತಿಥಿಗಳನ್ನು ಪರಿಚಿಸಿದರು.
ಈ ಸಂದರ್ಭದಲ್ಲಿ ಯು.ಎಸ್.ಶಿರಹಟ್ಟಿಮಠ, ಸಾಂಬಯ್ಯ ಹಿರೇಮಠ, ಹಳೆ ವಿದ್ಯಾರ್ಥಿಗಳಾದ ಯೋಗೇಶ ಹಿರೇಮಠ, ಸೋಮನಾಥ ಜಕ್ಕಣ್ಣವರ, ಸೋಮೇಶ್ವರ ಪತ್ರಿಮಠ, ಗೀತಾ ಕೊಪ್ಪದ, ರೇಣುಕಾ ಕಾಳಿ, ರೋಹಿನ್ ಪಾಟೀಲ, ಬಸವರಾಜ ಹೊಸಳ್ಳಿ, ಮುತ್ತಪ್ಪ ದಾಟನಾಳ, ಚನ್ನಪ್ಪ ಯಲಿವಾಳ, ಫಕ್ಕೀರಸಾಬ ನದಾಫ್, ಮಂಜುನಾಥ ಬಂಡಿವಾಡ, ಅಖಂಡಪ್ಪ ಶಿರಹಟ್ಟಿ, ಸುಧೀರ ಹಡಗಲಿ, ನಾಗರಾಜ ದೇವರಮನಿ, ಸಂತೋಷ ಸಿದ್ದನಗೌಡರ, ಹನುಮಂತ ಅಡ್ರಕಟ್ಟಿ, ರುದ್ರು ಹೊಸಮನಿ, ಫಕ್ಕಿರೇಶ ಜಾಡರ, ರಾಜು ಜಕ್ಕಣ್ಣವರ, ಉಮೇಶ ಕಳಸದ, ನವೀನ ಅಂಗಡಿ, ಹೊನ್ನಪ್ಪ ದೊಡಮನಿ, ಪರುಶರಾಮ ದಾಟನಾಳ, ರಮೇಶ ಕಮಡೊಳ್ಳಿ, ಹೊನ್ನಪ್ಪ ದೊಡ್ಡಮನಿ, ವಿಕ್ರಂ ಮಲಸಮುದ್ರ, ಪ್ರಕಾಶ ಮಡಿವಾಳರ, ಮಂಜುನಾಥ ಹೊಸಳ್ಳಿ ಸೇರಿದಂತೆ ಇತರರಿದ್ದರು.

click me!