ಸರ್ಕಾರಿ ಬಸ್‌ ಎಗರಿಸಿ ಡೀಸೆಲ್‌ ಖಾಲಿಯಾದ ಬಳಿಕ ಬಿಟ್ಟೋದರು!

Kannadaprabha News   | Asianet News
Published : Oct 19, 2021, 07:57 AM IST
ಸರ್ಕಾರಿ ಬಸ್‌ ಎಗರಿಸಿ ಡೀಸೆಲ್‌ ಖಾಲಿಯಾದ ಬಳಿಕ ಬಿಟ್ಟೋದರು!

ಸಾರಾಂಶ

ಪಟ್ಟಣದ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾರಿಗೆ ಸಂಸ್ಥೆ ಬಸ್ಸನ್ನೇ ಕದ್ದ ಕಳ್ಳರು  ಬಸ್ಸನ್ನೇ ಕಳ್ಳರು ಕದ್ದು ಸಿ.ಎಸ್‌.ಠಾಣಾ ವ್ಯಾಪ್ತಿಯ ಜನ್ನನೇಹಳ್ಳಿ ಗ್ರಾಮದ ಬಳಿ ಬಿಟ್ಟು ಪರಾರಿಯಾದ ಅಚ್ಚರಿಯ ಘಟನೆ

ಗುಬ್ಬಿ (ಅ.19): ಪಟ್ಟಣದ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾರಿಗೆ ಸಂಸ್ಥೆ (KSRTC) ಬಸ್ಸನ್ನೇ (Bus) ಕಳ್ಳರು ಕದ್ದು ಸಿ.ಎಸ್‌.ಠಾಣಾ (CS Station) ವ್ಯಾಪ್ತಿಯ ಜನ್ನನೇಹಳ್ಳಿ ಗ್ರಾಮದ ಬಳಿ ಬಿಟ್ಟು ಪರಾರಿಯಾದ ಅಚ್ಚರಿಯ ಘಟನೆ ಸೋಮವಾರ ನಡೆದಿದೆ. 

ನಿಲ್ದಾಣದಲ್ಲಿ ನಿಲ್ಲಿಸಿದ ಬಸ್‌ ಅನ್ನು ಕುಣಿಗಲ್‌ (Kunigal) ಭಾಗದಲ್ಲಿ ಓಡಾಡಿಸಿರುವ ಕಿಡಿಗೇಡಿಗಳು ಡೀಸೆಲ್‌ (Diesel) ಮುಗಿದ ಬಳಿಕ ಜನ್ನನೇಹಳ್ಳಿ ಬಳಿ ನಿಲ್ಲಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. 

ಬಾಡಿಗೆ ಮನೆ ನೋಡುವ ನೆಪ ಹೇಳಿ ಕದಿಯುತ್ತಿದ್ದ ಪ್ರೇಮಿಗಳು..!

ಬಸ್ಸೇ ನಾಪತ್ತೆಯಾಗುವ ಮಟ್ಟಕ್ಕೆ ಅಧಿಕಾರಿಗಳು, ಚಾಲಕ ಮತ್ತು ನಿರ್ವಾಹಕ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕ (Publics) ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗುಬ್ಬಿ (Gubbi) ಬಸ್‌ ನಿಲ್ದಾಣದಲ್ಲಿ (Bus stand) ಕಳ್ಳತನ (Theft) ಹಾಗೂ ಇನ್ನಿತರ ಅಪರಾಧ ಕೃತ್ಯಗಳು ನಡೆಯುತ್ತಿದ್ದರೂ ಸಿಸಿಕ್ಯಾಮೆರಾ  (CCTV) ಅಳವಡಿಸುವಲ್ಲಿ ಬೇಜವಾಬ್ದಾರಿತನ ತೋರಿದ ಅ​ಧಿಕಾರಿಗಳ ಬಗ್ಗೆ ಖಂಡನೆ ವ್ಯಕ್ತವಾಗಿದೆ.

ಕದ್ದ ಲಾರಿ ಮಾರಿ ಕೋಟ್ಯದೀಶ

ನಿಲ್ಲಿಸಿದ್ದ ಲಾರಿಗಳನ್ನು ಕದ್ದು  ಬೇರೆ ನಂಬರ್‌ ಪ್ಲೇಟ್ ಅಳವಡಿಸಿ ಮಾರುತ್ತಿದ್ದ ಗ್ಯಾಂಗ್ ಒಂದು ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದೆ. ಶಿವಮೊಗ್ಗ ಮೂಲದ ನಿಹಾಲ್ ಅಲಿಯಾಸ್ ಇರ್ಫಾನ್,  ಭಾಸ್ಕರ್, ಶಾಹಿದ್, ಹಿದಾಯತ್ ಬಂಧಿತರು.  ಆರೋಪಿಗಳಿಂದ 1.5 ಕೋಟಿ ಬೆಲೆ ಬಾಳುವ 9 ಲಾರಿ ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದರು. 

ಆರೋಪಿ ನಿಹಾಲ್ ಈ ದಂಧೆಯ ಕಿಂಗ್‌ ಪಿನ್ ಆಗಿದ್ದು ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಅಂತರಾಜ್ಯ ವಾಹನ ಕಳ್ಳನಾಗಿರುವ ನಿಹಾಲ್ ಕದ್ದ ವಾಹನ ಮಾರಾಟ ಮಾಡಲೆಂದೆ ದೇಶದ ವಿವಿಧೆಡೆ ಹಲವು ಗ್ಯಾಂಗ್‌ ಕಟ್ಟಿಕೊಂಡಿದ್ದ. ರಸ್ತೆ ಅಪಘಾತವಾಗಿರುವ ಗುಜರಿಗೆ ಬಂದಿರುವ ವಾಹನಗಳ ನಂಬರ್‌ ಹಾಗು ಜಾಸಿಸ್ ನಂಬರ್ ತೆಗೆದು ಕದ್ದ ವಾಹನಗಳಿಗೆ ಅಳವಡಿಸಿ ಇನ್ಸೂರನ್ಸ್ ಕಂಪನಿ ಜೊತೆ ಸೇರಿ ವಾಹನಗಳಿಗೆ ನೈಜ ದಾಖಲೆ ಮಾಡಿ ಮಾರುತ್ತಿದ್ದ.  ಕಡಿಮೆ ಬೆಲೆಗೆ ಸೂಕ್ತ ದಾಖಲೆ ಹೊಂದಿರುವ ವಾಹನಗಳು ಸಿಗುತ್ತಿದ್ದ ಹಿನ್ನೆಲೆ ಹಲವಾರು ಮಂದಿ ನಿಹಾಲ್‌ನಿಂದ ವಾಹನ ಖರೀದಿಸಿದ್ದರು. 

ಈ ದಂಧೆಯಲ್ಲಿ ನಿಹಾಲ್ ಕೊಟ್ಯಂತರ ಅಕ್ರಮ ಹಣ ಸಂಪಾದಿಸಿದ್ದ. ಹಲವೆಡೆ ಕೊಟ್ಯಂತರ ರು ಆಸ್ತಿ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

2010ರಲ್ಲಿ ನಿಹಾಲ್‌ನಿಂದ ಸಿಸಿಬಿ ಪೊಲೀಸರು 40 ವಾಹನ ಜಪ್ತಿ ಮಾಡಿದ್ದರು.  ಕೃತ್ಯಕ್ಕೆ ಈತನ ಸಹೋದರ ಅಕ್ರಮ್ ಅಲಿಯಾಸ್ ವಿಕ್ರಮ್ ಸಹ ಸಾತ್ ಕೊಟ್ಟಿದ್ದ. ಸಹೋದರರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟ ವ್ಯಕ್ತಿಯನ್ನು 2011ರಲ್ಲಿ ಅಕ್ರಮ ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಿಸಿಬಿ ಪೊಲೀಸರು ಅಕ್ರಮ್‌ನನ್ನು ಎನ್‌ಕೌಂಟರ್ ಮಾಡಿದ್ದರು. ಇದಾದ ಬಳಿಕ ನಿಹಾಲ್ ಯಾರ ಕೈಗೂ ಸಿಕ್ಕಿರಲಿಲ್ಲ.  ಇದೀಗ ಈತನ ಕೃತ್ಯ ಬೆಳಕಿಗೆ ಬಂದಿತ್ತು.

PREV
click me!

Recommended Stories

ಹೋರಾಟದಲ್ಲೇ ಉರುಳಿದ 2025ರ ವರ್ಷ, ಬಿಡದಿ ಟೌನ್ ಶಿಪ್ ಯೋಜನೆ ರಾಮನಗರ ಬೆಂಗಳೂರು ದಕ್ಷಿಣವಾಗಿ ಬದಲಾಗಿದ್ದೆ ಸಾಧನೆ!
ಹೊಸ ವರ್ಷದ ಕಿಕ್‌ನಲ್ಲಿ ಡ್ರಿಂಕ್ ಆಂಡ್ ಡ್ರೈವ್ ಮಾಡಿದ್ರೆ ಅಷ್ಟೇ.. ಬೆಂಗಳೂರಿನ 50 ಫ್ಲೈ ಓವರ್‌ಗಳು ಬಂದ್; ರಸ್ತೆಗಿಳಿಯುವ ಮುನ್ನ ತಿಳಿಯಿರಿ