ಆನ್‌ಲೈನ್ ಪಾಠದ ನೆಪದಲ್ಲಿ ಶಿಕ್ಷಕನೋರ್ವ ವಿದ್ಯಾರ್ಥಿನಿಗೆ ಹಿಂಗೆಲ್ಲಾ ಪಾಠ ಮಾಡಿದ್ದಾನೆ. ಅವಳ ಮೊಬೈಲ್ ನೋಡಿದ ಪೋಷಕರು ಬೆಚ್ಚಿ ಬಿದ್ದಿದ್ದಾರೆ.
ಹೊಸಕೋಟೆ (ಸೆ.17): ಅಪ್ರಾಪ್ತ ಶಾಲಾ ಬಾಲಕಿ ಜೊತೆ ಶಿಕ್ಷಕರೊಬ್ಬರು ಪ್ರೀತಿಸುವ ನಾಟಕವಾಡಿ ಅಸಭ್ಯವಾಗಿ ವ್ಯಾಟ್ಸಾಪ್‌ನಲ್ಲಿ ಚಾಟಿಂಗ್ ಮಾಡಿ ಲೈಂಗಿಕ ದೌಜನ್ಯ ಎಸಗಿರುವ ಘಟನೆ ತಾಲೂಕಿನ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ನಂದಗುಡಿಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು 10ನೇ ತರಗತಿ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿ. ಲಾಕ್ ಡೌನ್ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಿದ್ದರಿಂದ ಅನ್ ಲೈನ್ ಶಿಕ್ಷಣದ ಮುಖೇನ ವಿದ್ಯಾರ್ಥಿಗಳಿಗೆ ಆಯಾ ವಿಷಯದ ಶಿಕ್ಷಕರು ಸಂವಾದ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಅಂಗಡಿ ಹಾಗೂ ಗಂಗರಾಜು ವ್ಯಾಟ್ಸಾಪ್‌ನಲ್ಲಿ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ಶಿಕ್ಷಕ ಗಂಗರಾಜು ಪಾಠಮಾಡುವ ನೆಪದಲ್ಲಿ ಮೂರು ಭಾರಿ ಮನೆಗೆ ಬಂದಾಗ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಂದಗುಡಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.
ಮನೆಯಲ್ಲಿ ಪೋಷಕರು ವಿದ್ಯಾರ್ಥಿನಿಯ ಮೊಬೈಲ್ ಪರಿಶೀಲನೆ ವೇಳೆ ವಾಟ್ಸಾಪ್‌ನಲ್ಲಿ ಅಸಭ್ಯವಾಗಿ ಚಾಟಿಂಗ್ ಮಾಡಿರುವುದು ಕಂಡು ಬಂದಿದ್ದು, ವಿದ್ಯಾರ್ಥಿನಿಯನ್ನು ಕೂಲಕುಂಷವಾಗಿ ವಿಚಾರಣೆ ಮಾಡಿದಾಗ ಲೈಂಗಿಕ ದೌರ್ಜನ್ಯ ನಡೆದ ಮಾಹಿತಿ ನೀಡಿದ್ದಾಳೆ.
ಪ್ರಕರಣ ಮುಚ್ಚಿ ಹಾಕಲು ಯತ್ನ
ಈ ಬಗ್ಗೆ ಕಳೆದ ಆಗಸ್ಟ್ 3 ರಂದು ದೂರು ನೀಡಲು ಬಾಲಕಿಯ ಪೋಷಕರು ನಂದಗುಡಿ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆಗ ಪೇದೆಯೊಬ್ಬ ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ಪೋನ್ ಮೂಲಕ ಮಾಹಿತಿ ನೀಡಿದ್ದಾನೆ. ಬಳಿಕ ಮಾತುಕತೆ ನಡೆಸಿ ಪ್ರಕರಣ ಇತ್ಯರ್ಥಗೊಳಿಸುವುದಾಗಿ ಪೋಷಕರನ್ನು ವಾಪಸ್ ಕಳುಹಿಸಿ, ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ. ಈಗ ನಂದಗುಡಿಯ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಸೂಚನೆಯಂತೆ ಶಿಕ್ಷಕ ಗಂಗರಾಜು ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವೇಶ್ಯೆಯರ ಬಳಿ ಹೋಗಿ ಬಂದು ಅವರ ಮನೆಯನ್ನೇ ದೋಚುತ್ತಿದ್ದ ಖದೀಮರು ಅರೆಸ್ಟ್ ..
ಶಾಲಾ ವಿದ್ಯಾರ್ಥಿನಿ ಮೇಲೆ ಲೈಂಗಿಕ ಪ್ರಕರಣ ನಡೆದ ಬಗ್ಗೆ ನನಗೆ ಪೋಷಕರಿಂದ ಅಥವಾ ಶಾಲೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದು ಕಾನೂನಿನಡಿ ಸೂಕ್ತ ಕ್ರಮ ಜರುಗಿಸಲಾಗುವುದು.
ಗಂಗಮಾರಯ್ಯ, ಡಿಡಿಪಿಐ, ಬೆಂಗ್ರಾ ಜಿಲ್ಲೆ.
ಆಗಸ್ಟ್ 03 ರಂದು ಮೊಬೈಲ್ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದ ನನ್ನ ಅಳಿಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸ್ ಸಿಬ್ಬಂದಿ ಎಸ್‌ಡಿಎಂಸಿ ಪದಾಧಿಕಾರಿಗಳ ಮುಖೇನ ಶಾಲೆಗೆ ಕಳುಹಿಸಿದ್ದು, ಶಾಲೆಯಲ್ಲಿ ಎಲ್ಲರೂ ಕೂತು ಚರ್ಚಿಸಿ ಈ ಘಟನೆ ನಡೆಯಬಾರದಿತ್ತು ಶಾಲೆಯ ಮರ್ಯಾದೆ ಪ್ರಶ್ನೆ ಇಂತಹ ಘಟನೆಗೆ ಕಾರಣರಾದ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡುವ ಭರವಸೆ ನೀಡಿದ್ದರು. ತಿಂಗಳು ಕರೆದರೂ ಶಿಕ್ಷಕರನ್ನು ವರ್ಗಾವಣೆ ಮಾಡಲಿಲ್ಲ, ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿತ್ತು, ನನ್ನ ಮಗುವಿಗೆ ಆದಂತೆ ಬೇರೆ ಯಾರಿಗೂ ಈ ಸ್ಥಿತಿ ಬರಬಾರದೆಂದು ತಡವಾಗಿ ದೂರು ನೀಡಿದ್ದೆನೆ.
ನೊಂದ ಬಾಲಕಿಯ ತಾತ.