ಬಸವಕಲ್ಯಾಣ: ಭಾರೀ ಮಳೆಗೆ ಗ್ರಾಮಕ್ಕೆ ನುಗ್ಗಿದ ನೀರು, ಇದ್ದೂ ಇಲ್ಲದಂತಾದ ಜನಪ್ರತಿನಿಧಿಗಳು..!

By Suvarna News  |  First Published Sep 17, 2020, 1:29 PM IST

ಸುವರ್ಣ ನ್ಯೂಸ್‌ ವಾಹಿನಿ ಬಳಿ ಅಳಲು ತೋಡಿಕೊಂಡ ಗ್ರಾಮಸ್ಥರು| ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗೋರಟಗಿ ಗ್ರಾಮದಲ್ಲಿ ನಡೆದ ಘಟನೆ| ಚುನಾವಣೆ ಬಂದಾಗ ಮತ ಕೇಳಲು ಬರುವ ನಾಯಕರು ಕಷ್ಟದ ಕಾಲದಲ್ಲಿ ಇತ್ತ ಕಡೆ ಗಮನ ಹರಿಸದಿರುವುದೇ ದುರಂತದ ಸಂಗತಿ| 


ಬೀದರ್‌(ಸೆ.17): ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಜನರ ಪಡಬಾರದ ಕಷ್ಟಗಳನ್ನ ಅನುಭವಿಸುತ್ತಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರಟಗಿ ಗ್ರಾಮದ ದಲಿತ ಕಾಲೋನಿಯಲ್ಲಿ ಇಂದು(ಗುರುವಾರ) ನಡೆದಿದೆ. ಈ ಬಗ್ಗೆ ಗ್ರಾಮದ ಜನತೆ ಸ್ಥಳೀಯ ಶಾಸಕ ಬಿ ನಾರಾಯಣ, ಸಂಸದ ಭಗವಂತ ಖೂಬಾ, ತಹಶೀಲ್ದಾರ್‌, ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. 

"

Latest Videos

undefined

ಹೀಗಾಗಿ ಗೋರಟಗಿ ವ್ಯಕ್ತಿಯೊಬ್ಬರು ಸುವರ್ಣ ನ್ಯೂಸ್‌ ವಾಹಿನಿ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಪ್ರತಿ ವರ್ಷ ಮಳೆಗಾಲ ಸಮಯದಲ್ಲಿ ಇದೇ ರೀತಿ ಸಮಸ್ಯೆಯನ್ನ ಅನುಭವಿಸುತ್ತಿದ್ದೇವೆ. ಪ್ರತಿ ಬಾರಿ ಮಳೆ ಬಂದ ವೇಳೆಯಲ್ಲಿ ದಲಿತ ಕಾಲೋನಿಯಲ್ಲಿ ಸುಮಾರು 8 ರಿಂದ 9 ಅಡಿ ನೀರು ಬರುತ್ತಿದೆ. ಹೀಗಾಗಿ ಇಲ್ಲಿನ ಜನರು ತಮ್ಮ ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಜೀವನ ಸಾಗಿಸುತ್ತಿದ್ದಾರೆ. 

ಬೀದರ್:  ಒಂದಾಗಿ ಬಾಳಬೇಕಾದ ಜೋಡಿ ಮೇಲೆ ಆರತಕ್ಷತೆ ದಿನವೇ ಅಟ್ಯಾಕ್!

ಚುನಾವಣೆ ಬಂದಾಗ ಮತ ಕೇಳಲು ಬರುವ ನಾಯಕರು ಕಷ್ಟದ ಕಾಲದಲ್ಲಿ ಇತ್ತ ಕಡೆ ಗಮನ ಹರಿಸದಿರುವುದೇ ದುರಂತದ ಸಂಗತಿಯಾಗಿದೆ ಎಂದು ಗ್ರಾಮದ ಬಹುತೇಕರು ದೂರಿದ್ದಾರೆ. ಇನ್ನಾದರೂ ಕೂಡ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಗ್ರಾಮದಲ್ಲಿ ಸಮಸ್ಯೆಯನ್ನ ಪರಿಹರಿಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. 
 

click me!