ಶಿಕ್ಷಣ ಸಚಿ​ವರ ಸಮಾ​ರಂಭಕ್ಕೆ ಕೇರಳ ಸೀರೆ ಉಡಲು ಆದೇಶ

By Kannadaprabha News  |  First Published Feb 27, 2020, 10:52 AM IST

ಶಿಕ್ಷಣ ಇಲಾಖೆಯ ನೂತನ ಕಚೇರಿ ಕಟ್ಟಡದ ಉದ್ಘಾಟನೆ ಸಮಾರಂಭಕ್ಕೆ ಸರ್ಕಾರಿ, ಅನುದಾನಿತ, ಅನುದಾನಿತ ರಹಿತ ಹಾಗೂ ಪ್ರೌಢಶಾಲಾ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಕೇರಳ ಮಾದರಿಯ ಉಡುಪು ಧರಿಸಿ ಬರುವಂತೆ ಆದೇಶ ಮಾಡುವ ಮೂಲಕ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದೆ.


ಉಡುಪಿ(ಫೆ.27): ಶಿಕ್ಷಣ ಇಲಾಖೆಯ ನೂತನ ಕಚೇರಿ ಕಟ್ಟಡದ ಉದ್ಘಾಟನೆ ಸಮಾರಂಭಕ್ಕೆ ಸರ್ಕಾರಿ, ಅನುದಾನಿತ, ಅನುದಾನಿತ ರಹಿತ ಹಾಗೂ ಪ್ರೌಢಶಾಲಾ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಕೇರಳ ಮಾದರಿಯ ಉಡುಪು ಧರಿಸಿ ಬರುವಂತೆ ಆದೇಶ ಮಾಡುವ ಮೂಲಕ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದೆ.

ಇದೇ ಫೆ. 28ರಂದು ಕ್ಷೇತ್ರ ಶಿಕ್ಷಣಾಧಿಕಾರಿಯ ನೂತನ ಕಚೇರಿ ಉದ್ಘಾಟನಾ ಸಮಾರಂಭ ಕಾರ್ಕ​ಳ​ದಲ್ಲಿ ನೆರವೇರಲಿದ್ದು, ಈ ಕಾರ್ಯಕ್ರಮಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಸಚಿವರು ಭಾಗವಹಿಸಲಿದ್ದಾರೆ. ಶಿಕ್ಷಕರು ಬಿಳಿ ಪಂಚೆ ಹಾಗೂ ಶಿಕ್ಷಕಿಯರು ಕೇರಳ ಓಣಂ ಪದ್ಧತಿಯ ಬಿಳಿ ಸೀರೆ ಉಟ್ಟುಕೊಂಡು ಬರುವಂತೆ ಕಡ್ಡಾಯ ಅದೇಶವನ್ನು ಶಿಕ್ಷಣಾಧಿಕಾರಿ ಜಿ.ಎಸ್‌. ಶಶಿಧರ್‌ ಹೊರಡಿಸಿದ್ದಾರೆ.

Latest Videos

undefined

ದಿವ್ಯಾಂಗ ಮಕ್ಕಳ ಶಾಲೆಗೆ ಕಂಬಳ ವೀರನ ಕೊಡುಗೆ

ಕೇರಳದ ನಾಡಹಬ್ಬದ (ಓಣಂ) ಸಂದರ್ಭ ಅಲ್ಲಿಯ ನಾಗರಿಕರು, ಅದರಲ್ಲೂ ಮಹಿಳೆಯು ಬಿಳಿ ಬಣ್ಣದ ಸೀರೆ ಉಡುತ್ತಾರೆ. ಅದೇ ಮಾದರಿಯ ಸೀರೆ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾ​ಖೆಗೂ ಅನ್ವಯವಾಗುತ್ತದೆಯೇ ಎಂಬ ಗೊಂದಲವು ಸಹಜವಾಗಿ ಕಾಡುತ್ತಿದೆಯಾದರೂ, ಈ ಕುರಿತು ಕಾರ್ಕಳ ಶಿಕ್ಷಣ ಇಲಾಖೆಯು ಆದೇಶಿಸಿರುವುದು ಬೆಳಕಿಗೆ ಬಂದಿದೆ.

KSRTC ದುಬಾರಿ: ಮಂಗಳೂರಿಂದ ಎಲ್ಲೆಲ್ಲಿಗೆ, ಎಷ್ಟೆಷ್ಟು ದರ..?

ನಾವು ಕರ್ನಾಟಕದಲ್ಲಿದ್ದು ಕೇರಳ ರಾಜ್ಯದ ಉಡುಗೆಗೆ ಪ್ರಾಶಸ್ತ್ಯ ನೀಡುವ ಅಗತ್ಯವೇನಿದೆ ಎಂದು ಹೆಸರು ಹೇಳ​ಲಿ​ಚ್ಚಿ​ಸದ ಶಿಕ್ಷ​ಕಿ​ಯೊ​ಬ್ಬರು ಪ್ರಶ್ನಿ​ಸಿ​ದ್ದಾ​ರೆ. ಈ ಕುರಿತು ಪ್ರತಿ​ಕ್ರಿಯೆ ಬಯ​ಸಿ​ದಾಗ ಶಿಕ್ಷ​ಣಾ​ಧಿ​ಕಾರಿ ಶಶಿ​ಧರ್‌ ಅವರು ಸೂಕ್ತ ಪ್ರತಿ​ಕ್ರಿಯೆ ನೀಡ​ಲಿ​ಲ್ಲ.

ಈ ರೀತಿ ವಸ್ತ್ರ​ಸಂಹಿತೆ ಕಡ್ಡಾಯ ಮಾಡುವುದು ಸರಿಯಲ್ಲ. ಲಭ್ಯವಿರುವವರು ಉಟ್ಟು ಬರಬಹುದು. ಇಳ್‌ಕಲ್‌ ಸೀರೆ, ಕಚ್ಚೆ ಹಾಕುವಂತದ್ದು ನಮ್ಮ ಸಂಸ್ಕೃತಿಯಲ್ಲೂ ಇದೆ ಎಂದು ಪುರಸಭೆ ಸದಸ್ಯೆ ಸುಮಾ ಕೇಶವ್‌ ಹೇಳಿದ್ದಾರೆ. ಈ ರೀತಿಯ ವಸ್ತ್ರ​ಸಂಹಿತೆ ಒಪ್ಪುವಂತದ್ದು ಅಲ್ಲ. ಒತ್ತಾಯ ಮಾಡುವುದು ಸರಿಯಲ್ಲ ಎಂದು ಬಿಜೆಪಿ ವಕ್ತಾ​ರ ಹರೀಶ್‌ ಶೆಣೈ ಹೇಳಿದ್ದಾರೆ.

ಬಾಂಗ್ಲಾ ವಲಸಿಗರೆಂದು ಒಕ್ಕಲೆಬ್ಬಿಸಿದವರಿಗೆ ಪುನರ್ವಸತಿ

ಶಿಕ್ಷಣ ಸಚಿವರು ಭಾಗ​ವ​ಹಿ​ಸುವ ಕಾರ್ಯಕ್ರಮದ ಮಾಹಿತಿ ಇದೆ. ಆದರೆ, ಇಂತ​ಹ​ದದೇ ಉಡುಪಿ ಧರಿಸಿ ಬರು​ವಂತೆ ಇಲಾಖೆ ಯಿಂದ ಯಾವುದೇ ಸೂಚನೆ ನೀಡಿಲ್ಲ. ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ನನ್ನ ಗಮ​ನಕ್ಕೆ ಬಂದಿಲ್ಲ. ನಿಮ್ಮಿಂದ ವಿಚಾರ ಬೆಳಕಿಗೆ ಬಂದಿದೆ. ಮಾತುಕತೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಷಶಯನ ಕಾರಿಂಜ ಹೇಳಿದ್ದಾರೆ.

-ಬಿ. ಸಂಪತ್‌ ನಾಯಕ್‌

click me!