ಉತ್ತರ ಹೇಳದ ವಿದ್ಯಾರ್ಥಿನಿಗೆ ಶಿಕ್ಷಕಿಯೋರ್ವರು 40 ಬಾರಿ ಗುಂಡು ಸೂಜಿಯಿಂದ ಚುಚ್ಚಿ ಹಿಂಸಿಸಿದ ಘಟನೆಯೊಂದು ನಡೆದಿದೆ. ಈ ಶಿಕ್ಷಕಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಲಿಂಗಸುಗೂರು[ಜ.10]: ಖಾಸಗಿ ಶಾಲೆಯ ಶಿಕ್ಷಕಿಯೋರ್ವಳು ವಿದ್ಯಾರ್ಥಿನಿಯ ಮುಂಗೈ ಮೇಲೆ ಬರೋಬ್ಬರಿ 40 ಬಾರಿ ಸೂಜಿ(ಗುಂಡುಪಿನ್)ಯಿಂದ ಚುಚ್ಚಿ ಶಿಕ್ಷೆಗೆ ಗುರಿಪಡಿಸಿದ ವಿಲಕ್ಷಣ ಘಟನೆ ಲಿಂಗಸುಗೂರಿನಲ್ಲಿ ಜರುಗಿದ್ದು, ಶಾಲೆ ವಿರುದ್ಧ ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಪಟ್ಟಣದ ಎಕ್ಸ್‌ಫರ್ಟ್ ಪಬ್ಲಿಕ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಅನುಶ್ರೀ ಶಾಲೆಯಲ್ಲಿ ಶಿಸ್ತು ಕಾಪಾಡುತ್ತಿಲ್ಲ. ಶಿಕ್ಷಕರು ಹೇಳಿದ ಪಾಠ-ಪ್ರವಚನ, ಮನೆಕೆಲಸಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದರ ಜೊತೆಗೆ ವರ್ಗ ಕೊಠಡಿಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ ಎಂದು ಆರೋಪ ಮಾಡಿ ತಮಿಳುನಾಡು ಮೂಲದ ಶಿಕ್ಷಕಿ ಪ್ರಸನ್ನ ಎಂಬಾಕೆ ವಿದ್ಯಾರ್ಥಿನಿಯ ಬಲಗೈಗೆ ಗುಂಡುಪಿನ್‌ನಿಂದ ಚುಚ್ಚಿದ್ದು ಇದರಿಂದ ರಕ್ತದಗುಳ್ಳೆಗಳಾಗಿವೆ.
undefined
ಶಾಲೆಗೆ ಬಂದು ನಿದ್ದೆ ಮಾಡೋದೇ ಈ ಶಿಕ್ಷಕನ ಕಾಯಕ..!...
ವಿದ್ಯಾರ್ಥಿನಿ ಕೈಗೆ ಆದ ಗಾಯ ಕಂಡು ಪಾಲಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಶಿಕ್ಷಕಿಯ ಶಿಕ್ಷೆಯ ವರ್ತನೆ ಕಂಡು ಎದೆಗುಂದಿರುವ ವಿದ್ಯಾರ್ಥಿನಿ ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾಳೆ ಎಂದು ಪಾಲಕರು ಆರೋಪಿಸಿದರು.
ಮಕ್ಕಳ ಮನವೊಲಿಸಿ ಪಾಠ-ಬೋಧನೆ ಮಾಡಬೇಕಿರುವ ಶಿಕ್ಷಕಿ ಈ ರೀತಿ ವಿದ್ಯಾರ್ಥಿನಿಯ ಕೈಗೆ ಗುಂಡು ಸೂಜಿಯಿಂದ ಚುಚ್ಚಿ ಗಾಯಗೊಳಿಸಿದ್ದು, ಪಾಲಕರು ಗಾಬರಿಗೊಂಡರೆ ಮಕ್ಕಳು ಹೌಹಾರಿದ್ದಾರೆ. ಶಿಕ್ಷಕಿ ಪ್ರಸನ್ನ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಗುಂಡುಪಿನ್ ಚುಚ್ಚುವ ಚಾಳಿ ರೂಢಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳ ಪಾಲಕರು ಆರೋಪಿಸಿದರು.