ತಾಯಿ ಕಣ್ಣೆದುರೇ ಮಗನನ್ನು ಕೊಂದು ಹಾಕಿದ ಚಿರತೆ..!

By Kannadaprabha News  |  First Published Jan 10, 2020, 8:25 AM IST

ಕರುಳ ಕುಡಿಯನ್ನು ಕಣ್ಣೆದುರೇ ಚಿರತೆ ಕೊಂದು ಹಾಕಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಹೆತ್ತ ತಾಯಿ ಎದುರೇ ಮಗನ ಮೇಲೆ ದಾಳಿ ನಡೆಸಿ ದಾರುಣವಾಗಿ ಕೊಂದ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.


ತುಮಕೂರು(ಜ.10): ನರಹಂತಕ ಚಿರತೆಯೊಂದು ಹೆತ್ತ ತಾಯಿ ಎದುರೇ ಮಗನ ಮೇಲೆ ದಾಳಿ ನಡೆಸಿ ದಾರುಣವಾಗಿ ಕೊಂದ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮಣಿಕುಪ್ಪೆ ಗ್ರಾಮದ ಬಳಿ ಗುರುವಾರ ಸಂಜೆ 5.30ರಲ್ಲಿ ನಡೆದಿದೆ.

5 ವರ್ಷದ ಸಮರ್ಥಗೌಡ ನರಹಂತಕ ಚಿರತೆ ಬಾಯಿಗೆ ತುತ್ತಾದ ಬಾಲಕ. ಈತ ಗುರುವಾರ ಸಂಜೆ ತನ್ನ ತಾಯಿ ಜೊತೆ ದನಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದ. ಈ ವೇಳೆ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಪೊದೆಯಲ್ಲಿದ್ದ ಚಿರತೆ ದಿಢೀರನೆ ಮಗುವಿನ ಮೇಲೆ ದಾಳಿ ಮಾಡಿ ಕುತ್ತಿಗೆ ಬಾಯಿ ಹಾಕಿ ರಕ್ತ ಹೀರಿದೆ.

Tap to resize

Latest Videos

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಆಟೋ: ಮೂವರು ಸ್ಥಳದಲ್ಲೇ ಸಾವು

ತನ್ನ ಕಣ್ಣೆದುರೇ ಚಿರತೆ ಮಗನ ಕುತ್ತಿಗೆಗೆ ಬಾಯಿ ಹಾಕಿದ್ದ ನೋಡಿದ ತಾಯಿ ರಂಗಮ್ಮ ಜೋರಾಗಿ ಕೂಗಿ ಚಿರತೆ ಬಳಿ ನುಗ್ಗಿದ್ದಾಳೆ. ಅಷ್ಟರಲ್ಲಾಗಲೇ ರಕ್ತ ಹೀರಿದ್ದ ಚಿರತೆ ಪೊದೆಗೆ ಹಾರಿ ಹೋಗಿದೆ. ಕಣ್ಣೆದುರೇ ತನ್ನ ಮಗ ಸಾವನ್ನಪ್ಪಿದನ್ನು ನೋಡಿದ ರಂಗಮ್ಮ ರೋದಿಸುತ್ತಿದ್ದದ್ದು ಮನಕಲಕುವಂತಿತ್ತು.

ಮಗುವಿನ ಕುತ್ತಿಗೆ ಭಾಗವನ್ನು ಕಚ್ಚಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಎರಡು ತಿಂಗಳಿನಿಂದ ನರಹಂತಕ ಚಿರತೆ ಇಬ್ಬರು ವ್ಯಕ್ತಿಗಳ ರಕ್ತ ಹೀರಿದ್ದು, ಈಗ ಮಗುವನ್ನು ಕೊಲ್ಲುವುದರ ಮೂಲಕ ನರಹಂತಕ ಚಿರತೆಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿದೆ.

ನಗರದಲ್ಲಿದ್ದ ಜಿಹಾದಿಗಳ ಪತ್ತೆಗೆ ಸಿಸಿಬಿ ಬಲೆ

click me!