ಶಾಲೆಗೆ ಬಂದು ನಿದ್ದೆ ಮಾಡೋದೇ ಈ ಶಿಕ್ಷಕನ ಕಾಯಕ..!

By Kannadaprabha NewsFirst Published Jan 3, 2020, 2:59 PM IST
Highlights

ತರಗತಿಯಲ್ಲಿ ವಿದ್ಯಾರ್ಥಿಗಳು ನಿದ್ರೀಸೋದು ಸಾಮಾನ್ಯ. ಎಲ್ಲರೂ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯಾದರೂ ತರಗತಿಯಲ್ಲಿ ನಿದ್ದೆ ಮಾಡಿರುತ್ತಾರೆ. ಆದರೆ ಕೋಲಾರದ ಮುಳಬಾಗಿಲಿನಲ್ಲಿ ಮಕ್ಕಳಿಗೆ ಪಾಠ ಮಾಡು ಅಂತ ಶಿಕ್ಷಕನನ್ನು ನೇಮಿಸಿದ್ರೆ ತರಗತಿಗೆ ಬಂದು ಆತನೇ ನಿದ್ರಿಸ್ತಾನೆ.

ಕೋಲಾರ(ಜ.03): ಮುಳಬಾಗಿಲು ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಶಾಲೆಗೆ ಹಾಜರಾದರು ಮಕ್ಕಳಿಗೆ ಪಾಠ ಮಾಡದೆ ಮಕ್ಕಳೊಂದಿಗೆ ತರಗತಿಯಲ್ಲಿ ನಿದ್ದೆ ಮಾಡುವುದೇ ಕಾಯಕವನ್ನಾಗಿ ಮಾಡಿಕೊಂಡಿದ್ದಾನೆ ಎಂದು ಗ್ರಾಮದ ಮುಖಂಡರು ಆರೋಪ ಮಾಡಿದ್ದಾರೆ.

ತಾಲೂಕಿನ ನಂಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರಸಮಂಗಳ ಗ್ರಾಮದಲ್ಲಿ 1200 ಜನಸಂಖ್ಯೆಯ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯದವರಿದ್ದಾರೆ. ಈ ಗ್ರಾಮಕ್ಕೆ ಸರ್ಕಾರದಿಂದ 1 ರಿಂದ 5ನೇ ತರಗತಿಯ ತನಕ ಕನ್ನಡ ಪ್ರಾಥಮಿಕ ಶಾಲೆಯನ್ನು ನೀಡಿದೆ. ಈ ಶಾಲೆಯಲ್ಲಿ 48ಜನ ಮಕ್ಕಳು ದಾಖಲಾಗಿದ್ದಾರೆ. ಈ ಮಕ್ಕಳ ಪೋಷಕರು ಕೂಲಿ ಕೆಲಸಗಳನ್ನು ಅರಿಸಿ ಪ್ರತಿದಿನ ಬೆಳಗ್ಗೆ ಹೊರಟರೆ ಸಂಜೆ ಮನೆಗೆ ಬಂದು ಜೀವನ ನಿರ್ವಹಣೆ ಮಾಡುವುದಕ್ಕೇ ಕಷ್ಟಪಡುತ್ತಾರೆ.

'ಡಿ. ಕೆ. ಶಿವಕುಮಾರ್ ಏಸು ಕುಮಾರ್ ಆಗೋಕೆ ಹೊರಟಿದ್ದಾರೆ'..!

ಇಂತಹ ಗ್ರಾಮದ ಶಾಲೆಗೆ ಶಿಕ್ಷಕರಾಗಿ ಬಂದಿರುವ ಇಬ್ಬರು ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬೋಧನೆ ಮಾಡದೆ ಕೆಲಸಕ್ಕೂ ಸರಿಯಾಗಿ ಹಾಜರಾಗುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಬಂದರೂ ಮಕ್ಕಳನ್ನು ತಮ್ಮ ಪಾಡಿಗೆ ಬಿಟ್ಟು, ನಿದ್ದೆ ಮಾಡುವುದನ್ನು ಕಾಯಕವನ್ನಾಗಿ ಮಾಡಿಕೊಂಡಿದ್ದಾರೆಂದು ಮಕ್ಕಳ ಪೋಷಕರು ದೂರಿದ್ದಾರೆ. ಗುರುವಾರ ತರಗತಿಯಲ್ಲಿ ಶಿಕ್ಷಕರು ನಿದ್ದೆ ಮಾಡುತ್ತಿರುವುದನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿದ್ದಾರೆ.

ಅಧಿಕಾರಿಗಳು ಕ್ರಮ ಕೈಗೊಳ್ಳಲಿ:

ಗ್ರಾಮದಲ್ಲಿ ಎಸ್‌ಸಿ ಸಮುದಾಯವೇ ಹೆಚ್ಚು ಇದ್ದು, ಅದರಲ್ಲೂ ಅನಕ್ಷರತೆಯಿಂದ ಇರುವವರು ಹೆಚ್ಚಿರುವುದನ್ನು ಅರಿತು ಶಾಲೆಗೆ ಬರುವ ಶಿಕ್ಷಕರು ತಮಗೆ ಇಷ್ಟ ಬಂದಾಗ ಶಾಲೆಗೆ ಬರುವುದು, ಹೋಗುವುದು, ಶಾಲೆಯಲ್ಲಿಯೇ ನಿದ್ದೆ ಮಾಡುವುದನ್ನು ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.

ಇಲಾಖೆ ಬಗ್ಗೆ ಪ್ರಶ್ನಿಸಿದ್ರೆ ಗರಂ ಆದ್ರು ಅಬಕಾರಿ ಸಚಿವ ನಾಗೇಶ್

ಗ್ರಾಮದ ಕೆಲವರು ಈ ಶೈಕ್ಷಣಿಕ ವರ್ಷದಲ್ಲಿ ಗ್ರಾಮದ ಶಾಲೆಗೆ ಮಕ್ಕಳನ್ನು ಸೇರಿಸದೆ ಪಕ್ಕದ ನಂಗಲಿ ಗ್ರಾಮದ ಸರ್ಕಾರಿ ಶಾಲೆಗೆ ದಾಖಲು ಮಾಡಿದ್ದಾರೆ ಎಂದು ಗ್ರಾಪಂ ಸದಸ್ಯೆ ಗಾಯತ್ರಿ ವೆಂಕಟರಾಮ್ ತಿಳಿಸಿದ್ದಾರೆ. ಈ ಬಗ್ಗೆ ಬಿಇಒ ಕೆಂಪರಾಮ್‌ಗೆ ಮೌಖಿಕ ದೂರು ನೀಡಿದ್ದೆವು. ಅವರು ಕ್ರಮ ತೆಗೆದುಕೊಳ್ಳುವ ಮೊದಲೇ ನಿವೃತ್ತಿಯಾದರು. ಈಗಿನ ಬಿಇಒ ಪಿ.ಸೋಮೇಶ್ ಅವರಿಗೆ ದೂರು ನೀಡಿದ್ದೇವೆ. ಅವರು ಗಮನ ಹರಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದ್ದಾರೆ.

click me!