'ಬಿಜೆಪಿಯಿಂದ ಮೋಸ - ಭಾವನಾತ್ಮಕ ವಿಚಾರ ಇಟ್ಟುಕೊಂಡು ಆಟ'

By Kannadaprabha News  |  First Published Jul 3, 2021, 1:31 PM IST
  • ಬಿಜೆಪಿಯ ಎಲ್ಲಾ ಭರವಸೆಗಳು ಬೊಗಳೆ ಎಂಬುದು ಜನತೆಗೆ ಗೊತ್ತಾಗಿದೆ
  •  ಮಾಜಿ ಸಚಿವ ಕಾಂಗ್ರೆಸ್ ಹಿರಿಯ ಮುಖಂಡ ಟಿ.ಬಿ.ಜಯಚಂದ್ರ ಲೇವಡಿ
  • ಉಪ ಚುನಾವಣೆ ನಡೆದು 9 ತಿಂಗಳು ಕಳೆದರೂ ಮದಲೂರು ಕೆರೆ ತುಂಬಿಲ್ಲ

ತುಮಕೂರು (ಜು.03): ಶಿರಾ ಉಪ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಸಚಿವರು ಶಾಸಕರು ಮುಖಂಡರು  ನೀಡಿದ ಎಲ್ಲಾ ಭರವಸೆಗಳು ಬೊಗಳೆ ಎಂಬುದು ಜನತೆಗೆ ಗೊತ್ತಾಗಿದೆ ಎಂದ ಮಾಜಿ ಸಚಿವ ಕಾಂಗ್ರೆಸ್ ಹಿರಿಯ ಮುಖಂಡ ಟಿ.ಬಿ.ಜಯಚಂದ್ರ ಲೇವಡಿ ಮಾಡಿದರು. 

ಅವರು ತುಮಕೂರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿ  ಶಿರಾ ಉಪ ಚುನಾವಣೆ ನಡೆದು 9 ತಿಂಗಳು ಕಳೆದರೂ ಮದಲೂರು ಕೆರೆ ತುಂಬಿಲ್ಲ. ಕಾಡುಗೊಲ್ಲರ ಅಭಿವೃದ್ಧಿ ನಿಗಮ ಜಾರಿಗೆ ಬಂದಿಲ್ಲ.  ಒಳಮೀಸಲಾತಿ  ಜಾರಿಯಾಗಿಲ್ಲ. ಕೇವಲ ಸುಳ್ಳು  ಭರವಸೆ ನೀಡಿ. ಜನತೆಗೆ  ಬಿಜೆಪಿ ಮೋಸಲ  ಮಾಡಿದೆ. ಅಲ್ಲದೇ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಮತದಾರರಿಗೆ  ಮಂಕುಬೂದಿ  ಎರಚಿದೆ. ಇದಕ್ಕೆ  ತಕ್ಕ ಪ್ರತ್ಯುತ್ತರವನ್ನು ಕ್ಷೇತ್ರದ ಜನರು ಮುಂದಿನ ಚುನಾವಣೆಯಲ್ಲಿ ನೀಡಲಿದ್ದಾರೆ ಎಂದು ಜಯಚಂದ್ರ ನುಡಿದರು. 

Tap to resize

Latest Videos

ಮಾಜಿ ಸಚಿವ ಜಯಚಂದ್ರ ಹೆಸರಿನಲ್ಲಿ ನಕಲಿ ಖಾತೆ, ಹಣ ಕೀಳುವ ಜಾಲ!

ಮದಲೂರು ಕೆರೆ  ನೀರು ತುಂಬಿಸುವ ಸಂಬಂಧ ಕೆರೆಯಲ್ಲಿದ್ದ ಸೀಮೆಜಾಲಿ ತೆಗೆಸಿದರು.  ಆದರೆ ಕೆಲಸ ಮಾಡಿದ ಜೆಸಿಬಿ ಮಾಲೀಕರಿಗೆ 9 ತಿಂಗಳಾದರೂ ದುಡ್ಡು ಕೊಟ್ಟಿಲ್ಲ. ಸುಮಾರು 80 ಲಕ್ಷ ರು. ಕಾಮಗಾರಿ ನಡೆದಿದ್ದು,  ದುಡ್ಡು ಕೊಡಿಸಿ ಎಂದು ಜೆಸಿಬಿ ಮಾಲಿಕರು ನನಗೆ ದುಂಬಾಲು ಬಿದ್ದಿದ್ದಾರೆ ಎಂದು ಟಿಬಿಜೆ ಹೇಳಿದರು. 

ಬಿಜೆಪಿಯವರೆ ಮೂಲತಃ ಪ್ರಚಾರ ಪ್ರಿಯರು. ಅವರು ಗದ್ದುಗೆಗೆ ಬಂದಿರೋದೆ ಪ್ರಚಾರದಿಂದ.

ವಾಸ್ತವಿಕತೆ  ಪ್ರಸ್ತುತ ವಿಚಾರವನ್ನ ಯಾವತ್ತೂ ಬಿಜೆಪಿ ಚರ್ಚೆ ಮಾಡಲ್ಲ. ಭಾವನಾತ್ಮಕವಾಗಿ ಇರೋ ವಿಚಾರವನ್ನು ಎತ್ತಿಕೊಂಡರು ಜನರಿಗೆ  ಮಂಕು ಬೂದಿ ಎರಚಿ, ಅಧಿಕಾರದ ಗದ್ದುಗೆ ಹಿಡಿಯೋ ಕೆಲಸ ಮಾಡುತ್ತಾರೆ ಎಂದು ಜಯಚಂದ್ರ ತಿಳಿಸಿದರು.

click me!