ಕಾಳಿ ನದಿಯಲ್ಲಿ ಕೊಚ್ಚಿ ಹೋಗಿದ್ದ ವೃದ್ಧ 3 ದಿನಗಳ ನಂತರ ಪ್ರತ್ಯಕ್ಷ

By Kannadaprabha News  |  First Published May 20, 2021, 7:05 AM IST
  • ತೌಕ್ಟೆ ಚಂಡಮಾರುತಕ್ಕೆ ಸಿಲುಕಿ ಬದುಕಿ ಬಂದ ವೃದ್ಧ
  • 3 ದಿನಗಳ ಕಾಲ ನೀರಿನಲ್ಲೇ ಇದ್ದ ವೃದ್ದ
  • ಕಾಳಿನದಿಯಲ್ಲಿ ಸಿಲುಕಿದ್ದ ವೃದ್ದನ ರಕ್ಷಣೆ

ಕಾರವಾರ (ಮೇ.20): ಭಾರಿ ಮಳೆಗೆ ಕಾಳಿ ನದಿಯ ಹಿನ್ನೀರಿನಲ್ಲಿ ಕೊಚ್ಚಿ ಹೋಗಿ ಕಳೆದ 3 ದಿನದಿಂದ ಗಿಡ ಹಿಡಿದುಕೊಂಡು ಸಾವು -ಬದುಕಿನ ಹೋರಾಟ ನಡೆಸುತ್ತಿದ್ದ ವೃದ್ಧ ಕೊನೆಗೂ ಸಾವನ್ನೇ ಗೆದ್ದು ಬಂದಿದ್ದಾರೆ. 

ತಾಲೂಕಿನ ಹಣಕೋಣದ ವೃದ್ಧ ವೆಂಕಟರಾಯ್‌ ಕೋಠಾರಕರ್‌ ಮೇ 16ರ ಸಂಜೆ ಕೋಣ ಹುಡುಕಿಕೊಂಡು ಬರುವುದಾಗಿ ತೌಕ್ಟೆ ಚಂಡಮಾರುತ ಅಬ್ಬರಿಸುತ್ತಿದ್ದ ವೇಳೆ ಅರಣ್ಯಕ್ಕೆ ತೆರಳಿದ್ದರು. 

Latest Videos

undefined

ಕಾರವಾರ: ಹಸಿರು ಬಣ್ಣಕ್ಕೆ ತಿರುಗಿದ ಗಂಗಾವಳಿ ನದಿ ನೀರು, ಆತಂಕದಲ್ಲಿ ಜನತೆ

ಆದರೆ ಸಂಜೆಯಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ದಾರೆ. ಕೊನೆಗೆ ಕಾಳಿ ನದಿ ತೀರದಲ್ಲಿ ಹುಡುಕುತ್ತಿದ್ದಾಗ ನದಿಯ ಹಿನ್ನೀರಿನಲ್ಲಿ ಮುಳುಗಿ ಸಣ್ಣ ಗಿಡ ಹಿಡಿದು ಆಶ್ರಯ ಪಡೆದದ್ದು ಕಂಡಿತ್ತು. ತಕ್ಷಣ ಊರಿನ ಕೆಲವರು ನದಿಗೆ ಇಳಿದು ಅವರನ್ನು ರಕ್ಷಣೆ ಮಾಡಿ ಮನೆಗೆ ಕರೆತಂದಿದ್ದಾರೆ.

click me!