ಕಾರವಾರ: ಅಂಕೋಲಾದ ಬಳಿ ಕಾಲುವೆಗೆ ಬಿದ್ದ ಟ್ಯಾಂಕರ್‌, ಚರಂಡಿಯಲ್ಲಿ ಹರಿದ ಆ್ಯಸಿಡ್..!

By Girish Goudar  |  First Published Aug 30, 2024, 8:59 PM IST

ಆ್ಯಸಿಡ್ ತುಂಬಿದ್ದ ಟ್ಯಾಂಕರ್‌ ಆಂಧ್ರದಿಂದ ಗೋವಾದತ್ತ ಸಾಗುತ್ತಿತ್ತು. ಟ್ಯಾಂಕರ್‌ನಲ್ಲಿ 34 ಟನ್ ಸಲ್ಫೂರಿಕ್ ಆ್ಯಸಿಡ್ ತುಂಬಿತ್ತು. ಟ್ಯಾಂಕರ್ ಪಲ್ಟಿಯಾದ ಪರಿಣಾಮ ಆ್ಯಸಿಡ್ ಚರಂಡಿಗೆ ಹರಿದಿದೆ. ಅಪಘಾತದ ಕಾರಣ ಟ್ಯಾಂಕರ್‌ನಿಂದ ಆ್ಯಸಿಡ್ ಸೋರಿಕೆಯಾಗಿದೆ. ಚರಂಡಿ ಮೂಲಕ ಆ್ಯಸಿಡ್ ಹಳ್ಳಕ್ಕೆ ಸೇರಿದೆ.  

ಕಾರವಾರ(ಆ.30):  ಚಾಲಕನ ನಿಯಂತ್ರಣ ತಪ್ಪಿ ಆ್ಯಸಿಡ್ ಟ್ಯಾಂಕರ್‌ವೊಂದು ಕಾಲುವೆಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲು ಬಳಿ ಇಂದು(ಶುಕ್ರವಾರ) ನಡೆದಿದೆ. 

ಆ್ಯಸಿಡ್ ತುಂಬಿದ್ದ ಟ್ಯಾಂಕರ್‌ ಆಂಧ್ರದಿಂದ ಗೋವಾದತ್ತ ಸಾಗುತ್ತಿತ್ತು. ಟ್ಯಾಂಕರ್‌ನಲ್ಲಿ 34 ಟನ್ ಸಲ್ಫೂರಿಕ್ ಆ್ಯಸಿಡ್ ತುಂಬಿತ್ತು. ಟ್ಯಾಂಕರ್ ಪಲ್ಟಿಯಾದ ಪರಿಣಾಮ ಆ್ಯಸಿಡ್ ಚರಂಡಿಗೆ ಹರಿದಿದೆ. ಅಪಘಾತದ ಕಾರಣ ಟ್ಯಾಂಕರ್‌ನಿಂದ ಆ್ಯಸಿಡ್ ಸೋರಿಕೆಯಾಗಿದೆ. ಚರಂಡಿ ಮೂಲಕ ಆ್ಯಸಿಡ್ ಹಳ್ಳಕ್ಕೆ ಸೇರಿದೆ.  

Tap to resize

Latest Videos

ಗಣಪತಿ ಬಪ್ಪನ ಸ್ವಾಗತಕ್ಕೆ ಸಿದ್ಧತೆ: ಖ್ಯಾತ ಕಲಾವಿದ ಜಿ.ಡಿ. ಭಟ್ಟರು ತಯಾರಿಸಿದ ಗಣಪನ ಮೂರ್ತಿಗಳ ಝಲಕ್‌..!

ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಸಿಬ್ಬಂದಿಯಿಂದ ಸೋರಿಕೆಗೆ ತಡೆ ಕಾರ್ಯಾಚರಣೆ ನಡೆಸುತ್ತಿದೆ. ಟ್ಯಾಂಕರ್ ಪಲ್ಟಿಯಿಂದ ಅಂಕೋಲಾ-ಯಲ್ಲಾಪುರ ಹೆದ್ದಾರಿಯಲ್ಲಿ ಕೆಲವು ಗಂಟೆ ಸಂಚಾರ ವ್ಯತ್ಯಯ ಉಂಟಾಗಿದೆ. 

click me!