ಟ್ಯಾಂಕರ್ ಪಲ್ಟಿಯಾಗಿ ಸೋರಿಕೆಯಾದ ವಿಷಯುಕ್ತ ರಾಸಾಯನಿಕದಿಂದ ಧಾರವಾಡ ಹೊರವಲಯದ ಮಮ್ಮಿಗಟ್ಟಿ ಗ್ರಾಮದ ಕೆರೆಯಲ್ಲಿ ಮೂರುಸಾವಿರಕ್ಕೂ ಮೀನುಗಳು ಸಾವನ್ನಪ್ಪಿದ ದುರಂತ ನಡೆದಿದೆ
ವರದಿ:ಪರಮೇಶ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಜು.19}: ನಗರದ ಹೊರವಲಯದ ಮುಮ್ಮಿಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತವೊಂದು ಜಲಚರಗಳಿಗೆ ಮಾರಕವಾಗಿ ಪರಿಣಮಿಸಿದೆ. ಟ್ಯಾಂಕರ್ ಪಲ್ಟಿಯಾಗಿ ಅದರಲ್ಲಿದ್ದ ರಾಸಾಯನಿಕ ಸೋರಿಕೆಯಾಗಿ ನರೇಂದ್ರ ಗ್ರಾಮದ ಹಿರೇಕೆರೆಯ ಮೀನುಗಳ ಮಾರಣಹೋಮಕ್ಕೆ ಕಾರಣವಾಗಿದೆ..
ಧಾರವಾಡ(Dharwada) ತಾಲೂಕಿನ ಮುಮ್ಮಿಗಟ್ಟಿ(Mammigatti) ಬಳಿ ನಾಲ್ಕು ದಿನಗಳ ಹಿಂದೆ ಟ್ಯಾಂಕರ್(Tanker) ಪಲ್ಟಿಯಾಗಿತ್ತು. ಚಾಲಕ ಸೇರಿ ಅದರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಅದರಲ್ಲಿದ್ದ ರಾಸಾಯನಿಕ ಸೋರಿಕೆ(Chemical leak)ಯಾಗಿದ್ದರೂ ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಿರಂತರ ಮಳೆಯಾಗುತ್ತಿರುವುದರಿಂದ ಮಳೆ ನೀರಿನೊಂದಿಗೆ ರಾಸಾಯನಿಕ ಸೇರಿ, ನರೇಂದ್ರ ಗ್ರಾಮದ ಹಿರೇಕೆರೆಗೆ ಸೇರಿದ. 2- 3 ದಿನಗಳಿಂದ ಕೆರೆಯಲ್ಲಿನ ಮೀನುಗಳು ಸತ್ತು ದಡ ಸೇರುತ್ತಿವೆ. ನರೇಂದ್ರ ಹಿರೇಕೆರೆ ಸುಮಾರು 100 ಎಕರೆಯಷ್ಟು ವಿಸ್ತಾರವಾಗಿದೆ.
ಇದನ್ನೂ ಓದಿ: ಮಾರ್ಕೊಪೋಲೋ ಟಾಟಾ ಮೋಟಾರ್ ಬಿಕ್ಕಟ್ಟು, ಬಹುತೇಕ ಇತ್ಯರ್ಥ
೧೦೦ ಎಕರೆಯಷ್ಟು ಜಲಾನಯನ ಪ್ರದೇಶ ಹೊಂದಿದೆ. ಮೇಲ್ಬಾಗದ ನೀರೆಲ್ಲ ಕೆರೆ ಸೇರುತ್ತದೆ. ಕೆರೆಯಲ್ಲಿ ದುರ್ವಾಸನೆ ಬರುತ್ತಿರುವ ಹಾಗೂ ಮೀನುಗಳು(Fishes) ಮೃತಪಟ್ಟ ಕುರಿತು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಕುರಿತು ಪಿಡಿಒ ಪರಶುರಾಮ ಕವಲೂರ ಸಭೆ ನಡೆಸಿದ್ದಾರೆ. ಅಧ್ಯಕ್ಷರು, ಸದಸ್ಯರ ಸೂಚನೆಯಂತೆ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಕೆರೆಯ ನೀರನ್ನು ಬಳಸದಂತೆ ಗ್ರಾಮದಲ್ಲಿ ಡಂಗುರ ಹೊಡೆಸಲಾಗಿದೆ. ಕಲುಷಿತ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ನೀರು ಬಳಸುವಂತೆ ಜಾಗೃತಿ ಮೂಡಿಸಲಾಗಿದೆ.
ಇದನ್ನೂ ಓದಿ: ಅಕ್ರಮ ಮರಳು ದಂಧೆ; ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ!
ಮುಮ್ಮಿಗಟ್ಟಿ ಬಳಿ ಬಿದ್ದಿದ್ದ ಟ್ಯಾಂಕ ನಿಂದ ರಾಸಾಯನಿಕ ಸೋರಿಕೆಯಾಗಿತ್ತು ಅದು ಮಳೆ ನೀರಿನೊಂದಿಗೆ ಹಿರೇಕೆರೆ ಸೇರಿದೆ. ಸಾವಿರಾರು ಮೀನಿನ ಮರಿ ಹಾಗೂ ದೊಡ್ಡ ಮೀನುಗಳು ಸತ್ತಿವೆ. ನಮಗೆ ತುಂಬ ಹಾನಿಯಾಗಿದೆ ನರೇಂದ್ರ ಗ್ರಾಮದ ಹಿರೇಕೆರೆಯಲ್ಲಿ ಮೀನುಗಳು ಸತ್ತಿರುವುದು. ನರೇಂದ್ರ ಗ್ರಾಮದ ಹಿರೇಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಕೆರೆಗೆ ರಾಸಾಯನಿಕ ಸೇರಿದ್ದು ಮೀನುಗಳ ಸಾವಿಗೆ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕಲುಷಿತ ನೀರಿನ ಮಾದರಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಸುವಂತೆ ಗ್ರಾ.ಪಂ. ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೀನುಗಾರರ ಸಂಘಕ್ಕೆ ಇಲಾಖೆಯಿಂದ ಯಾವುದೇ ರೀತಿಯ ಹಾನಿ ಪರಿಹಾರ ಕೊಡಲು ಬರುವುದಿಲ್ಲ.
ಅಧ್ಯಕ್ಷರು, ಸದಸ್ಯರ ಸೂಚನೆಯಂತೆ ಸಭೆ ಜರುಗಿಸಿ ಜಾಗೃತಿ ಕೈಗೊಳ್ಳಲಾಗಿದೆ. ಕೆರೆಗೆ ಜಾನುವಾರುಗಳನ್ನು ಬಿಡದಂತೆ ಗ್ರಾಮದಲ್ಲಿ ಡಂಗುರ ಸಾರಲಾಗಿದೆ. ಕೆರೆ ನೀರಿನ ಮಾದರಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ..
ಆದಷ್ಡೂ ಬೇಗ ಪರಿಸರ ಮಾಲಿನ್ಯ ಇಲಾಖೆಯಿಂದ ವರದಿಯನ್ನ ತಂದು ಕೊಟ್ಟು ನೀರನ್ನ ಬಳಸಬೇಕೋ ಬೇಡವೂ ಎಂಬುದರ ಬಗ್ಗೆ ಅಧಿಕಾರಿಗಳು ಮತ್ತು ಪಂಚಾಯತಿ ಪಿಡಿಓಗಳ ಸಾರ್ವಜನಿಕರಿಗೆ ತಿಳಿಸಬೇಕಿದೆ..