ವೈದ್ಯಕೀಯ ಸಂಶೋಧನೆಗೆ ಪೂರ್ಣ ಸಹಕಾರ

By Kannadaprabha News  |  First Published Jul 19, 2022, 2:55 PM IST

ದೇಶದಲ್ಲಿ ಅತಿ ಹೆಚ್ಚು ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಪ್ರಥಮ ರಾಜ್ಯ ನಮ್ಮದು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಸಂಶೋಧನೆಗೆ ಸರ್ಕಾರ ಭರವಸೆ


ಚಿಕ್ಕಬಳ್ಳಾಪುರ (ಜು.19): ದೇಶದಲ್ಲಿ ಅತಿ ಹೆಚ್ಚು ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಪ್ರಥಮ ರಾಜ್ಯ ನಮ್ಮದು ಎಂಬ ಹಿರಿಮೆಯಿದೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಸಂಶೋಧನೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆಯೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

ತಾಲೂಕಿನ ಮುದ್ದೇನಹಳ್ಳಿಯ(Muddenahalli) ಸತ್ಯಸಾಯಿಗ್ರಾಮದ ಶ್ರೀ ಸತ್ಯಸಾಯಿ(Sri satyasai) ಪ್ರೇಮಾಮೃತಂ ಸಭಾಭವನದಲ್ಲಿ ನಡೆದ ವಿಶ್ವ ಜಾಗತಿಕ ಸಮಾವೇಶದ ಸಮಾರೋಪದಲ್ಲಿ ಸೋಮವಾರ ಸಂಜೆ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಮೊದಲ ಸರ್ಕಾರಿ ಆಯುಷ್‌ ವಿಶ್ವವಿದ್ಯಾಲಯನ್ನು(Govt Ayush University) ಶಿವಮೊಗ್ಗದಲ್ಲಿ ಪ್ರಾರಂಭಿಸಲು ರಾಜ್ಯ ಸಚಿವ ಸಂಪುಟವು ಅನುಮತಿ ನೀಡಿದೆ ಎಂದರು.

Tap to resize

Latest Videos

ರಾಜ್ಯದಲ್ಲಿ 700 ಮಂದಿಗೆ ಒಬ್ಬ ವೈದ್ಯ: ರಾಜ್ಯದಲ್ಲಿ 1.5 ಲಕ್ಷ ವಿದ್ಯಾರ್ಥಿಗಳು ಪ್ರತಿನಿತ್ಯ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರದಲ್ಲಿ ಪೂರಕ ಶಿಕ್ಷಣ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಿಯಾದ ಸಂಶೋಧನೆ, ಪ್ರತಿಪಾದನೆ, ದಾಖಲೀಕರಣ ಮಾಡುವುದು ಅಗತ್ಯ. ಕೋವಿಡ್‌ ಸಂದರ್ಭವನ್ನು ಸಮರ್ಥವಾಗಿ ಎದುರಿಸುವ ಕೆಲಸವನ್ನು ನಮ್ಮ ಸರಕಾರ ಮಾಡಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ಸೇವಾ ಮನೋಭಾವದ ವೈದ್ಯಕೀಯ ಸಿಬ್ಬಂದಿಯಾಗಿದ್ದಾರೆ ಎಂದು ಹೇಳಲು ಹೆಮ್ಮೆಯೆನಿಸಿದೆ. ಒಂದು ಅವಧಿಯಲ್ಲಿ 1722 ಜನಸಂಖ್ಯೆಗೆ ಒಬ್ಬರು ವೈದ್ಯರಿದ್ದರು. ಈಗ ನಮ್ಮ ಸರಕಾರದಲ್ಲಿ ಪ್ರತಿ 700 ಮಂದಿ ಜನಸಂಖ್ಯೆಗೆ ಒಬ್ಬ ವೈದ್ಯರು ಲಭ್ಯರಿದ್ದಾರೆ ಎನ್ನುವುದು ಸಾಮಾನ್ಯ ಸಾಧನೆಯಲ್ಲ.

ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಸಾರ್ವಜನಿಕರ ಆರೋಗ್ಯ ಸುಧಾರಣೆ ಕ್ಷೇತ್ರದಲ್ಲಿ ಅತ್ಯಂತ ಮುಂಚೂಣಿಯಲ್ಲಿ ನಿಂತಿರುವ ಸಂಸ್ಥೆಯಾಗಿದೆ.ಇಲ್ಲಿ ನೀಡುವ ಗುಣಾತ್ಮಕ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದೆ. ಇದು ಭಾರತದವಾಗಲಿ ಅಥವಾ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೊದಿ ಹೇಳುವಂತೆ ಸರ್ವರ ವಿಕಾಸವೇ ನಮ್ಮ ವಿಕಾಸ ಎನ್ನುವ ಮನುಕುಲದ ಮಹಾ ಧ್ಯೇಯವಾಕ್ಯವನ್ನು ಅಕ್ಷರಶಃ ಪರಿಪಾಲಿಸುವ ಕೆಲಸವನ್ನು ಇಲ್ಲಿ ಪ್ರಾಯೋಗಿಕವಾಗಿ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.

ವೈದ್ಯಕೀಯ ಶಿಕ್ಷಣ ಸೇವಾ ಕ್ಷೇತ್ರವಾಗಲಿ: ಸದ್ಗುರು ಶ್ರೀ ಮಧುಸೂಧನ್‌ ಸಾಯಿ ಮಾತನಾಡಿ, ಸರ್ಕಾರ ಮಾತ್ರವೇ ಆರೋಗ್ಯ ಕ್ಷೇತ್ರವೂ ಸೇರಿದಂತೆ ಇತರೆ ಸೇವಾ ಕಾರ್ಯಗಳನ್ನು ಸಾರ್ವಜನಿಕರಿಗೆ ಒದಗಿಸಲು ಸಾಧ್ಯವಿಲ್ಲ. ಸಮಾಜ ಸುಧಾರಣೆಯ ಮನೋಭಾವವುಳ್ಳ ಸೇವಾ ಸಂಸ್ಥೆಗಳ ನೆರವಿದ್ದರೆ ಮಾತ್ರ ಎಲ್ಲರಿಗೂ ಸಕಾಲದಲ್ಲಿ ಕೊಡಲು ಸಾಧ್ಯ. ಆರೋಗ್ಯ ಸುಧಾರಣಾ ಶಿಕ್ಷಣವು ಹೆಚ್ಚೆಚ್ಚು ಬಲವರ್ಧನೆ ಆಗುವ ಅಗತ್ಯವಿದೆ. ಏಕೆಂದರೆ ಆರೋಗ್ಯ ಶಿಕ್ಷಣವು ಲಾಭದಾಯಕ ಕ್ಷೇತ್ರದಿಂದ ಹೊರಬಂದು ಸೇವಾಕ್ಷೇತ್ರವಾಗಿ ಬದಲಾಗುವ ಅಗತ್ಯವಿದೆ. ನಮ್ಮ ಸಂಸ್ಥೆಯು ತಾಯಿ ಮತ್ತು ಮಗುವಿನ ಆರೋಗ್ಯ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮುಂಬೈ ಐಐಟಿ ಜತೆ ಒಡಂಬಡಿಕೆ ಮಾಡಿಕೊಳ್ಳಲಿದೆ. ಆರೋಗ್ಯ ಸುಧಾರಣೆ ಸೇವೆಯಾಗಿದೆಯೇ ವಿನಃ ವ್ಯಾಪಾರವಲ್ಲ ಎಂದರು.

ವೇದಿಕೆಯಲ್ಲಿ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಬಿ.ಎನ್‌ ನರಸಿಂಹ ಮೂರ್ತಿ,(BN Narasimha murthy) ಉಪಕುಲಪತಿ ಡಾ.ಶ್ರೀಕಂಠಮೂರ್ತಿ(Dr Shrikanth murthy ),ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು,

ನಂದಿ ರೈಲ್ವೆ ನಿಲ್ದಾಣ ಮೇಲ್ದರ್ಜೇಗೇರಿಸಿ : ನಂದಿಯ ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಈ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರವನ್ನು ಕೋರಲಾಗಿದೆ. ಸತ್ಯಸಾಯಿ ಗ್ರಾಮದಲ್ಲಿ ಆರೋಗ್ಯ ಸುಧಾರಣೆಗಾಗಿ ಉತ್ತರ ಭಾರತದ ರೋಗಿಗಳು ಇಲ್ಲಿಗೆ ಬರುತ್ತಿದ್ದಾರೆ. ಇವರೆಲ್ಲರಿಗೂ ಅನುಕೂಲ ಆಗಬೇಕಿದೆ. ನೆರೆಯ ರಾಜ್ಯ ರಾಷ್ಟಗಳ ಜನತೆಯೂ ಇಲ್ಲಿಗೆ ಬರುವ ಕಾರಣ ಆದಷ್ಟುಬೇಗ ಇಲ್ಲಿ ಈ ಕೆಲಸ ಆಗಲಿ ಎಂದು ಸರಕಾರ ಪ್ರತಿನಿಧಿಯಾಗಿ ಭಾಗವಹಿಸಿದ್ದ ಸಚಿವರಲ್ಲಿ ಸದ್ಗುರು ಮಧುಸೂಧನ್‌ ಸಾಯಿ ಮನವಿ ಮಾಡಿದರು. 

click me!