Chikkamagaluru Utsav: ಎತ್ತಿನಗಾಡಿ ಮೆರವಣಿಗೆಯಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಭಾಗಿ

By Gowthami K  |  First Published Jan 19, 2023, 3:02 PM IST

ಚಿಕ್ಕಮಗಳೂರು ಹಬ್ಬ ಅಂಗವಾಗಿ ಗುರುವಾರ ನಗರದಲ್ಲಿ ಆಯೋಜಿಸಿದ್ದ   ಎತ್ತಿನಗಾಡಿ ಮೆರವಣಿಗೆಯಲ್ಲಿ  ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ  ಅಣ್ಣಾಮಲೈ  ಪಾಲ್ಗೊಂಡಿದ್ದರು.


ಚಿಕ್ಕಮಗಳೂರು (ಜ.19): ಚಿಕ್ಕಮಗಳೂರು ಹಬ್ಬ ಅಂಗವಾಗಿ ಗುರುವಾರ ನಗರದಲ್ಲಿ ಆಯೋಜಿಸಿದ್ದ   ಎತ್ತಿನಗಾಡಿ ಮೆರವಣಿಗೆಯಲ್ಲಿ  ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ  ಅಣ್ಣಾಮಲೈ  ಪಾಲ್ಗೊಂಡಿದ್ದರು. ಇವರಿಗೆ ಶಾಸಕ ಸಿ.ಟಿ. ರವಿ ಸಾಥ್ ನೀಡಿದರು.  ಉತ್ಸವಕ್ಕೆ ಆಗಮಿಸಿದ ಅಣ್ಣಾಮಲೈ ಅವರನ್ನು  ಶಾಸಕ ಸಿ.ಟಿ. ರವಿ ಆತ್ಮೀಯವಾಗಿ ಬರಮಾಡಿಕೊಂಡು ಬಳಿಕ ಎತ್ತಿನಗಾಡಿ ಮೆರವಣಿಗೆಯಲ್ಲಿ  ಸಾಗಿದರು. ಕಾರ್ಯಕ್ರಮದ ಬಳಿಕ ಅಣ್ಣಾಮಲೈ ಅವರು  ಕೃಷಿ ಮೇಳದಲ್ಲಿ ಭಾಗಿಯಾದರು.  

ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ  ಎತ್ತಿನಗಾಡಿ ಮೆರವಣಿಗೆಯಲ್ಲಿ ಸಿ.ಟಿ.ರವಿ ಗಾಡಿ ಓಡಿಸಿ ಗಮನ ಸೆಳೆದರು.  ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯಲ್ಲಿ ಸಿ.ಟಿ.ರವಿ ಎತ್ತಿನ ಗಾಡಿ ಓಡಿಸಿದರು. ಎಂ.ಜಿ.ರಸ್ತೆಯಿಂದ ಡಿಸಿ ಕಚೇರಿವರೆಗೂ ಎತ್ತಿನ ಗಾಡಿ ಮೆರವಣಿಗೆ ನಡೆಯಿತು.

Tap to resize

Latest Videos

 ಸ್ವಿಜರ್‌ಲ್ಯಾಂಡ್‌ ರೀತಿ ಕೊಡಗು, ಚಿಕ್ಕಮಗ್ಳೂರು ಅಭಿವೃದ್ಧಿ: ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯ ಟ್ವೀಟ್ ಗೆ ರವಿ ಪ್ರತಿಕ್ರಿಯೆ: ಮೋದಿ ನ್ಯಾಯ ಕೊಡಿ, ಸಿದ್ದರಾಮಯ್ಯ ಸರಣಿ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿ, ತನ್ನದೇ ಪಕ್ಷದ ನಾಯಕರನ್ನ ಸೋಲಿಸಿ ಅನ್ಯಾಯ ಮಾಡಿದ್ದು ಮೋದಿ ಅಲ್ಲ. ನನ್ನನ್ನ ಸೋಲಿಸಿದವರನ್ನ ಸೋಲಿಸಿ ನ್ಯಾಯ ಕೊಡಿ ಎಂದು ಪರಮೇಶ್ವರ್ ಕೇಳಬೇಕು. ನ್ಯಾಯ ಕೇಳಬೇಕಿರೋದು ಪರಮೇಶ್ವರ್-ಖರ್ಗೆಯವರು, ಸಿದ್ದರಾಮಯ್ಯ ಅಲ್ಲ. ಸಿದ್ದರಾಮಯ್ಯ ಯಾವ ರೀತಿ ನ್ಯಾಯ ಬಯಸುತ್ತಿದ್ದಾರೆ ನನಗೆ ಗೊತ್ತಾಗ್ತಿಲ್ಲ. ಅಧಿಕಾರ ಇದ್ರೆ ಇರ್ತೀನಿ, ಇಲ್ಲ ಬೇರೆ ಪಕ್ಷಕ್ಕೆ ಹೋಗ್ತೀನಿ ಅನ್ನೋರು ಮೋದಿ ಅಲ್ಲ. ಎಸ್.ಡಿ.ಪಿ.ಐ-ಪಿಎಫ್‍ಐ ಕೇಸ್ ಹಿಂಪಡೆದು ಸರಣಿ ಕೊಲೆಗೆ ಕಾರಣವಾಗಿದ್ದು ನೀವು, ಅದಕ್ಕೆ ಜನ ನ್ಯಾಯ ಕೊಟ್ಟಿದ್ದು. ರಿಡ್ಯೂ ಹೆಸರಲ್ಲಿ ಸಾವಿರಾರು ಕೋಟಿ ಹಗರಣ ಮಾಡಿದ್ದಕ್ಕೆ ಜನ ನ್ಯಾಯ ಕೊಟ್ಟಿದ್ದು. ಸಮಾಜವಾದಿ ಹೆಸರಲ್ಲಿ ಮಜಾವಾದಿ ರಾಜಕಾರಣ ಮಾಡಿದ್ದಕ್ಕೆ ಜನ ನ್ಯಾಯ ಕೊಟ್ಟಿದ್ದು ಎಂದು ಹೇಳಿಕೆ ನೀಡಿದ್ದಾರೆ.

ದೇವರು ಹೆಚ್ಚು ಪ್ರೀತಿಸುವ ನಾಡು ಕರ್ನಾಟಕ: ಸಿಎಂ ಬೊಮ್ಮಾಯಿ

click me!