ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಶೀಘ್ರದಲ್ಲೇ ಹಿರಿಯೂರಿನ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸುವ ಭರವಸೆ ನೀಡಿದ್ದಾರೆ.ಈ ಹಿನ್ನೆಲೆ ಕೋಟೆನಾಡಿನ ರೈತರು ಕಬ್ಬು ಬೆಳೆಯಲು ಉತ್ಸಾಹ ತೋರಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜ.19) : ಅದೊಂದು ಬರ ಪೀಡಿತ ಪ್ರದೇಶ. ಅಲ್ಲಿನ ಜನರು ಹನಿ ನೀರಿಗೂ ಪರದಾಡ್ತಿದ್ದ ಕಾಲವಿತ್ತು. ಆದ್ರೆ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗ್ತಿದ್ದಂತೆ ಅಲ್ಲಿನ ರೈತರಲ್ಲಿ ಕಬ್ಬು ಬೆಳೆಯುವ ಉತ್ಸಾಹ ಮೂಡಿದೆ. ಹೀಗಾಗಿ ಮುಚ್ಚಿರೋ ಶುಗರ್ ಫ್ಯಾಕ್ಟರಿಯನ್ನು ಆರಂಭಿಸುವಂತೆ ಸರ್ಕಾರದ ಬೆನ್ನತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಸರ್ಕಾರವೂ ಸಕ್ಕರೆ ಕಾರ್ಖನೆ ತೆರೆಯಲು ಚಿಂತನೆ ನಡೆಸಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
undefined
ನೋಡಿ ಹೀಗೆ ಮುಚ್ಚಿರೋ ಸಕ್ಕರೆ ಕಾರ್ಖಾನೆ(Sugar factory). ತುಕ್ಕು ಹಿಡಿಯುತ್ತಿರೋ ಕಾರ್ಖಾನೆಯ ಬೃಹತ್ ಯಂತ್ರಗಳು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ(Chitradurga) ಜಿಲ್ಲೆ ಹಿರಿಯೂರು ಪಟ್ಟಣದಲ್ಲಿನ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ(Vani vilas Sugar factory).
Chitradurga : ಮಠದ ಕೆರೆನೀರು ಮೋಟಾರು ಪಂಪ್ ಇಟ್ಟು ಖಾಲಿ ಮಾಡ್ತಾರಂತೆ!
ಹೌದು,1976 ರಲ್ಲಿ ಈ ಭಾಗದ ರೈತರ(Farmers) ಕೈ ಬಲಪಡಿಸಲು ಸರ್ಕಾರ ಆರಂಭಿಸಲಾಗಿದ್ದ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಲಾಗದೇ 2002 ರಲ್ಲಿ ಮುಚ್ಚಲಾಯಿತು. ಅಂದಿನಿಂದ ಇಂದಿನವರೆಗೆ ಈ ಭಾಗದಲ್ಲಿ ಕಬ್ಬು ಬೆಳೆಯಲ್ಲವೆಂಬ ನೆಪವೊಡ್ಡಿ ಈ ಕಾರ್ಖಾನೆ ಆರಂಭಿಸಲು ಸರ್ಕಾರ ಮುಂದಾಗಿಲ್ಲ. ಹೀಗಾಗಿ ಈ ಭಾಗದ ರೈತರು ಸತತ 10 ವರ್ಷಗಳಿಂದ ಯಾವುದೇ ಬೆಳೆ ಬೆಳೆದರೂ,ತೀವ್ರ ನಷ್ಟ ಅನುಭವಿಸಿ ಸುಸ್ತಾಗಿದ್ದಾರೆ. ದಾಳಿಂಬೆ,ಅಡಿಕೆ ಸೇರಿದಂತೆ ಇತರೆ ಬೆಳೆಗಳು ರೈತರ ಕೈ ಸುಟ್ಟಿದ್ದೂ, ಕೋಟೆನಾಡಿನ ರೈತರನ್ನು ಸಾಲದ ಸುಳಿಗೆ ಸಿಲುಕಿಸಿವೆ. ಇಂತಹ ವೇಳೆ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನಲೆಯಲ್ಲಿ ರೈತರಲ್ಲಿ ಕಬ್ಬು(Sugar cane) ಬೆಳೆಯುವ ಉತ್ಸಾಹ ಮೂಡಿದೆ. ಆದ್ದರಿಂದ ಸರ್ಕಾರವು ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸಿ,ಈ ಭಾಗದ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಒತ್ತಾಯಿಸಿದ್ದಾರೆ.
ಇನ್ನು ರೈತರ ಒತ್ತಡಕ್ಕೆ ಮಣಿದ ಸಿಎಂ ಬೊಮ್ಮಾಯಿ(Basavaraj Bommai) ನೇತೃತ್ವದ ಸರ್ಕಾರ ಶೀಘ್ರದಲ್ಲೇ ಹಿರಿಯೂರಿನ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸುವ ಭರವಸೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಡಿ.ಸುಧಾಕರ್(D.Sudhakar,ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆ ಯಲ್ಲಿ ಹೇಳಿದ ಒಂದು ಅಶ್ವಾಸನೆ ಸಹ ಈಡೇರಿಸಿಲ್ಲ. ಆದರೆ ಇದೀಗ ಸಕ್ಕರೆ ಕಾರ್ಖಾನೆ ರೀ ಓಪನ್ ಹೆಸರಲ್ಲಿ ರೈತರ ಕಣ್ಣೊರೆಸುವ ತಂತ್ರ ಅನುಸರಿಸುವಂತಿದೆ. ಇದು ಕೇವಲ ಚುನಾವಣೆ ಗಿಮಿಕ್ ಆಗದಿರಲೆಂದು ವ್ಯಂಗ್ಯ ಮಾಡಿದರು.
88 ವರ್ಷಗಳ ಬಳಿಕ ವಾಣಿ ವಿಲಾಸ ಸಾಗರ ಡ್ಯಾಂ ಕೋಡಿ, ಹರಿದು ಬರ್ತಿರೋ ಜನಸಾಗರ
ಒಟ್ಟಾರೆ ವಾಣಿ ವಿಲಾಸ ಸಾಗರ ಭರ್ತಿಯಾಗಿ ನೀರು ಭೋರ್ಗರೆಯುತ್ತಿರುವ ಪರಿಣಾಮ ಹಿರಿಯೂರಿನ ರೈತರು ಕಬ್ಬು ಬೆಳೆಯುವ ಉತ್ಸಾಹದಲ್ಲಿದ್ದಾರೆ. ಹೀಗಾಗಿ ರೈತರ ಬವಣೆ ನೀಗಿಸಲು ಸರ್ಕಾರ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸಿದ್ರೆ ಕೋಟೆನಾಡಿನ ಅನ್ನದಾತರಿಗೆ ಅನುಕೂಲವಾಗಲಿದೆ.