ಸಿಎಂ, ಡಿಸಿಎಂ ಮತ್ತು ಮದುವೆ: ರಮೇಶ್, ಶ್ರೀರಾಮುಲು ಪ್ಲ್ಯಾನ್ ಏನು?

By Web DeskFirst Published 11, Sep 2018, 12:08 PM IST
Highlights

ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವ ವಿಚಾರ! ರಮೇಶ್, ಶ್ರೀರಾಮುಲು ನಡುವೆ ಗೌಪ್ಯ ಮಾತುಕತೆ! ಸತೀಶ್ ಸಿಎಂ, ಶ್ರೀರಾಮುಲು ಡಿಸಿಎಂ ಮಾಡುವ ಪ್ಲ್ಯಾನ್! ರಮೇಶ್ ಅವರನ್ನೇ ಡಿಸಿಎಂ ಮಾಡುವ ಪ್ರಸ್ತಾವ ಇಟ್ಟ ಶ್ರೀರಾಮುಲು! ಬೀಗರಾಗ್ತಾರಾ ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು
 

ಬೆಳಗಾವಿ(ಸೆ.11): ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ಕುರಿತು ರಮೇಶ್ ಜಾರಕಿಹೊಳಿ ಬಿಜೆಪಿ ಶಾಸಕ ಶ್ರೀರಾಮುಲು ಅವರನ್ನು 3 ಬಾರಿ ಭೇಟಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶ್ರೀರಾಮುಲು ಡಿಸಿಎಂ ಮತ್ತು ಸತೀಶ್ ಜಾರಕಿಹೊಳಿ ಸಿಎಂ ಮಾಡುವ ಪ್ರಸ್ತಾವವನ್ನು ರಮೇಶ್ ಜಾರಕಿಹೊಳಿ ಶ್ರೀರಾಮುಲು ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಶ್ರೀರಾಮುಲು ಕೂಡ ಪ್ರತಿಕ್ರಿಯೆ ನೀಡಿದ್ದು, ರಮೇಶ್ ಬಿಜೆಪಿಗೆ ಬಂದರೆ ಹೈಕಮಾಂಡ್ ಮನವೋಲಿಸಿ ಅವರನ್ನೇ ಡಿಸಿಎಂ ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

"

ಆದರೆ ಡಿಸಿಎಂ ಪಟ್ಟಕ್ಕೆ ಒಲವು ತೋರದ ರಮೇಶ್, ಸಹೋದರ ಸತೀಶ್ ಅವರನ್ನು ಸಿಎಂ ಮತ್ತು ಶ್ರೀರಾಮುಲು ಅವರನ್ನು ಡಿಸಿಎಂ ಮಾಡುವ ಪ್ರಸ್ತಾವ ಇಟ್ಟಿದ್ದಾರೆ.

ಇಷ್ಟೇ ಅಲ್ಲದೇ ಪರಸ್ಪರ ಬೀಗರಾಗುವ ಕುರಿತು ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಶ್ರೀರಾಮುಲು ಮಗಳು ತಮ್ಮ ಪುತ್ರನ ಮದುವೆಗೆ ರಮೇಶ್ ಒಲುವು ತೋರಿದ್ದು, ಈ ಕುರಿತು ಊಭಯ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 

Last Updated 19, Sep 2018, 9:22 AM IST