ಬಂದ್ ಎಫೆಕ್ಟ್: ರೈಲಲ್ಲಿ ಒದ್ದಾಡಿ ಮಗು ಹೆತ್ತ ತಾಯಿ!

By Web DeskFirst Published 10, Sep 2018, 3:55 PM IST
Highlights

ರೈಲಿನಲ್ಲೇ ಮಗುವಿಗೆ ಜನ್ಮವಿತ್ತ ತಾಯಿ! ಭಾರತ್ ಬಂದ್ ಹಿನ್ನೆಲೆಯಲ್ಲಿ ಬಸ್ ಸೇವೆ ಸ್ಥಗಿತ! ಕೊಲ್ಹಾಪುರದಿಂದ ರಾಯಬಾಗಕ್ಕೆ ಬರುತ್ತಿದ್ದ ಯಲ್ಲವ್ವ! ತೀವ್ರ ಹೆರಿಗೆ ನೋವಿನಿಂದ ರೈಲಿನಲ್ಲೇ ಮಗುವಿಗೆ ಜನನ

ರಾಯಬಾಗ(ಸೆ.10): ತೈಲದರ ಖಂಡಿಸಿ ಇಂದು ದೇಶಾದ್ಯಂತ ಭಾರತ್ ಬಂದ್ ಆಚರಿಸಲಾಗುತ್ತಿದೆ. ಈ ಮಧ್ಯೆ ಬಸ್ ಸಿಗದ ಕಾರಣಕ್ಕೆ ರೈಲಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೋರ್ವಳು, ರೈಲಲ್ಲೆ ಮಗುವಿಗೆ ಜನ್ಮ ನೀಡಿದ ಘಟನೆ ರಾಯಬಾಗದಲ್ಲಿ ನಡೆದಿದೆ.

ಇಲ್ಲಿನ ಯಲ್ಲವ್ವ ಮಹೇಶ್ ಗಾಯಕವಾಡ್ ಎಂಬ ಮಹಿಳೆ ಕೊಲ್ಹಾಪುರದಿಂದ ರಾಯಬಾಗಕ್ಕೆ ಬರುತ್ತಿದ್ದರು. ಆದರೆ ಭಾರತ್ ಬಂದ್ ಹಿನ್ನೆಲೆಯಲ್ಲಿ ಯಲ್ಲವ ಅವರಿಗೆ ಬಸ್ ಸಿಗಲಿಲ್ಲ. ಈ ಕಾರಣಕ್ಕೆ ಕೊಲ್ಹಾಪುರದಿಂದ ರೈಲಲ್ಲಿ ಪ್ರಯಾಣಿಸಿದ ಯಲ್ಲವ್ವ ಅವರಿಗೆ, ರೈಲು ರಾಯಬಾಗಕ್ಕೆ ಬರುವ ಮೊದಲೇ ಹೆರಿಗೆ ನೋವು ಶುರುವಾಗಿದೆ.

ತೀವ್ರ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಯಲ್ಲವ್ವ ಅವರಿಗೆ ಸಹಪ್ರಯಾಣಿಕರು ಸಹಾಯ ಮಾಡಿದ್ದು, ಆಕೆ ರೈಲಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನು ರೈಲು ರಾಯಬಾಗಕ್ಕೆ ಬರುತ್ತಿದ್ದಂತೇ ಯಲ್ಲವ್ವ ಮತ್ತು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ

Last Updated 19, Sep 2018, 9:22 AM IST