ನಾ ಸಿಎಂ ಆಗೋಕೆ 10 ವರ್ಷ ಬೇಕು: ಸತೀಶ್ ಜಾರಕಿಹೊಳಿ!

By Web DeskFirst Published 10, Sep 2018, 6:46 PM IST
Highlights

ರಮೇಶ್ ಬಿಜೆಪಿ ಸೇರುವ ವಿಚಾರ ಗೊತ್ತಿಲ್ಲ! ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆ! ನಾನು ಸಿಎಂ ಆಗಲು 10 ವರ್ಷ ಬೇಕೆಂದ ಸತೀಶ್! ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕದನ ಮುಗಿದ ಅಧ್ಯಾಯ
 

ಬೆಳಗಾವಿ(ಸೆ.10): ಸಹೋದರ, ಸಚಿವ ರಮೇಶ ಜಾರಕಿಹೊಳಿ ಬಿಜೆಪಿ ಸೇರ್ಪಡೆ ವಿಚಾರ ಕುರಿತು ತಮಗೆ ಮಾಹಿತಿ ಇಲ್ಲ ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್, ರಮೇಶ ಜಾರಕಿಹೊಳಿ ಬಿಜೆಪಿ ಸೇರುವ ಕುರಿತು ತಮ್ಮಲ್ಲಿ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ತಾವು ಸಚಿವರಾಗಲು ಇನ್ನೂ ಎರಡು ವರ್ಷದ ಕಾಲಾವಕಾಶ ಇದೆ ಎಂದು ಹೇಳಿದ ಸತೀಶ್, ಸಿಎಂ ಆಗಲು ಏನಿಲ್ಲವೆಂದರೂ 10 ವರ್ಷ ಟೈಮ್ ಇದೆ ಎಂದು ಹೇಳಿದ್ದಾರೆ.

ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ತಮ್ಮ ನಡುವಿನ ಭಿನ್ನಾಭಿಪ್ರಾಯ ವಿಚಾರಕ್ಕೆ ಸಂಬಂಧಿಸಿದ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸತೀಶ್, ಅದು ಮುಗಿದ ಅಧ್ಯಾಯ ಎಂದು ಮಾರ್ಮಿಕವಾಗಿ ಹೇಳಿದರು.

Last Updated 19, Sep 2018, 9:22 AM IST