ಚುನಾವಣೆ ಹೊಸ್ತಿಲಲ್ಲಿ ಶ್ರೀರಾಮುಲು ಮತ್ತು ಮಾಜಿ ಸಚಿವರ ಜಟಾಪಟಿ, ಶಾಲೆ ನಿರ್ಮಾಣ ವಿಚಾರದಲ್ಲಿ ಗಲಾಟೆ

By Suvarna News  |  First Published Feb 12, 2023, 6:53 PM IST

ಚುನಾವಣೆಗೂ ಮುನ್ನ ಬಳ್ಳಾರಿಯಲ್ಲಿ ರೆಬಲ್ ರಾಜಕೀಯ ಚದುರಂಗದಾಟಕ್ಕೆ ನಾಂದಿ ಹಾಡಲಾಗುತ್ತಿದೆ. ಶಾಲೆಯೊಂದರ ಗ್ರೌಂಡ್ನಲ್ಲಿ ಹೊಸ ಶಾಲೆ ನಿರ್ಮಾಣ ಮಾಡಬೇಕೆನ್ನುತ್ತಿದ್ದಾರೆ ಹಾಲಿ ಸಚಿವರು. ಆದ್ರೇ ಗ್ರೌಂಡ್ ನಲ್ಲಿ ಈಗಾಗಲೇ ದುಸ್ತಿಯಲ್ಲಿರೋ  ಇರೋ ಶಾಲೆ ಪುನರ್ ನಿರ್ಮಾಣ ಮಾಡಿ ಎನ್ನುತ್ತಿದ್ದಾರೆ ಮಾಜಿ ಸಚಿವರು.  ಇದು ಮಾಜಿ ಸಚಿವ ದಿವಾಕರ ಬಾಬು ವರ್ಸಸ್ ಶ್ರೀರಾಮುಲು ನಡುವಿನ ಟಾಕ್ ವಾರ್


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ಬಳ್ಳಾರಿ (ಫೆ.12): ಚುನಾವಣೆಗೂ ಮುನ್ನ ಬಳ್ಳಾರಿಯಲ್ಲಿ ರೆಬಲ್ ರಾಜಕೀಯ ಚದುರಂಗದಾಟಕ್ಕೆ ನಾಂದಿ ಹಾಡಲಾಗುತ್ತಿದೆ. ಶಾಲೆಯೊಂದರ ಗ್ರೌಂಡ್ನಲ್ಲಿ ಹೊಸ ಶಾಲೆ ನಿರ್ಮಾಣ ಮಾಡಬೇಕೆನ್ನುತ್ತಿದ್ದಾರೆ ಹಾಲಿ ಸಚಿವರು. ಆದ್ರೇ ಗ್ರೌಂಡ್ ನಲ್ಲಿ ಈಗಾಗಲೇ ದುಸ್ತಿಯಲ್ಲಿರೋ  ಇರೋ ಶಾಲೆ ಪುನರ್ ನಿರ್ಮಾಣ ಮಾಡಿ ಎನ್ನುತ್ತಿದ್ದಾರೆ ಮಾಜಿ ಸಚಿವರು. ಚುನಾವಣೆಗೂ ಮುನ್ನ ಹಳೇ ಗುರು ಶಿಷ್ಯರ ಕದನ ಕೂತೂಹಲಕ್ಕೆ ಕಾರಣವಾಗುತ್ತಿದೆ ಬಳ್ಳಾರಿ ರಾಜಕೀಯ ನೆಲ. 
ಹೌದು, ಶಾಲೆ ನಿರ್ಮಾಣ ವಿಚಾರದಲ್ಲಿ ಬಳ್ಳಾರಿಯಲ್ಲಿ ದಿವಾಕರ ಬಾಬು ವರ್ಸಸ್ ಶ್ರೀರಾಮುಲು ಟಾಕ್ ವಾರ್ ಪ್ರಾರಂಭವಾಗಿದೆ.  

Tap to resize

Latest Videos

undefined

ಹೊಸ ಶಾಲೆ ನಿರ್ಮಾಣ ವಿಚಾರದಲ್ಲಿ ಭಿನ್ನಾಭಿಪ್ರಾಯ:
ಬಳ್ಳಾರಿ ನಗರದ ಹೃದಯ ಭಾಗದಲ್ಲಿರೋ ಶ್ರೀರಾಂಪುರ ಕಾಲೋನಿಯ ಶಾಲೆ ವಿಚಾರದಲ್ಲಿ ಮುಸುಕಿನ ಗುದ್ದಾಟ ಆರಂಭ ವಾಗಿದೆ. ಶಾಲೆಯ ಆವರಣದಲ್ಲಿ ಐದು ಎಕರೆಗಳಷ್ಟು ಗ್ರೌಂಡ್ ಇದೆ. ಶಾಲೆ ಒಂದು ತುದಿಯಲ್ಲಿ ಹಳೇಯ ಶಾಲೆ ಇದೆ. ಇದೀಗ ಮತ್ತೊಂದು ತುದಿಯಲ್ಲಿ ಹೊಸ ಶಾಲೆ ನಿರ್ಮಾಣ ಮಾಡಬೇಕೆಂದು ಸಚಿವ ಶ್ರೀರಾಮುಲು ನಿರ್ಧಾರ ಮಾಡಿದ್ದು, ಇದಕ್ಕಾಗಿ ಶಾಲಾ ಗ್ರೌಂಡ್ ಆವರಣದಲ್ಲಿ ಕೆಲಸ ಪ್ರಾರಂಭಿಸಲಾಗಿದೆ. ಹೆಚ್ಚು ಕಡಿಮೆ ಮೂರುವರೆ ಕೋಟಿ ರೂಪಾಯಿ ಡಿಎಂಎಫ್ ಫಂಡ್ ನಲ್ಲಿ  ಹೈಟೆಕ್ ಮಾದರಿಯ  ಶಾಲೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ. ಬಡ ಮತ್ತು ದಲಿತ ಮಕ್ಕಳು ಇರೋ ಈ ಕಾಲೋನಿಯಲ್ಲಿ ಹೊಸ ಕಟ್ಟಡ ‌ನಿರ್ಮಾಣದಿಂದ ಮಕ್ಕಳಿಗೆ ಹೆಚ್ಚು ಸಹಕಾರ ಸಿಗಲಿದೆ ಎಂದು ಶ್ರೀರಾಮುಲು ಹೇಳುತ್ತಿದ್ದಾರೆ.

 ಅಲ್ಲದೇ, ಹಳೇ ಶಾಲೆಯನ್ನು ಕೆಡವಿ ಕಟ್ಟಡ ನಿರ್ಮಾಣ ಮಾಡಲು ಮುಂದಾದ್ರೇ ವರ್ಷಗಳ ಕಾಲ‌‌ ಮಕ್ಕಳು ಎಲ್ಲಿ‌ ವಿದ್ಯಾಭ್ಯಾಸ ಮಾಡಬೇಕು. ಅಲ್ಲದೇ ಚುನಾವಣೆ ಹಿನ್ನೆಲೆ ಈ ಶಾಲೆಯಲ್ಲಿ ಎಂಟು ಮತಗಟ್ಟೆ ನಿರ್ಮಾಣ ಮಾಡಲಾಗಿದೆ ದಿಡೀರನೇ ಕಟ್ಟಡ ನೆಲಸಮ ಮಾಡಿದ್ರೇ ಮತದಾನಕ್ಕೆ ತೊಂದರೆಯಾಗ್ತದೆ. ಹೀಗಾಗಿ ಗ್ರೌಂಡ್ ಮತ್ತೊಂದು ಕಡೆ ಶಾಲೆ ನಿರ್ಮಾಣ ಮಾಡಿದ ಬಳಿಕ ಈಗಿರೋ ಹಳೇಯ ಶಾಲೆ ಕಟ್ಟಡ ತೆರವು ಮಾಡೋದಾಗಿ ಶ್ರೀರಾಮುಲು ಹೇಳ್ತಿದ್ದಾರೆ. ಇದರಲ್ಲಿ ದಯವಿಟ್ಟು ರಾಜಕೀಯ ಮಾಡಬೇಡಿ ಎನ್ನುತ್ತಿದ್ದಾರೆ.

ಎಚ್‌.ಡಿ.ಕುಮಾರಸ್ವಾಮಿಯಿಂದ ಜಾತಿಗಳ ನಡುವೆ ವಿಷಬೀಜ: ಸಚಿವ ಶ್ರೀರಾಮುಲು

ಬಿಲ್ಡಿಂಗ್ ಕಟ್ಟೋದು ಕೆಡವಿ ಬಿಡೋದು ಇದು ಕಮಿಷನ್ ಸರ್ಕಾರ:
ಇನ್ನೂ ಇಂದು ಶಾಲೆ ಆವರಣದಲ್ಲಿನ ಗ್ರೌಂಡ್ ನಲ್ಲಿ ಕಟ್ಟಡ ನಿರ್ಮಾಣ ಕೆಲಸವನ್ನು ಸ್ಥಗಿತಗೊಳಿಸಿದ ಮಾಜಿ ಸಚಿವ ದಿವಾಕರ ಬಾಬು, ಮೊದಲು ಗ್ರೌಂಡ್ ಉಳಿಸಿ, ದುಸ್ತಿಯಲ್ಲಿರೋ ಹಳೇ ಶಾಲೆಯನ್ನು  ದುರಸ್ತಿ ಮಾಡಿ ಅಲ್ಲಿಯೇ ( ಹಳೇಯ ಸ್ಥಳದಲ್ಲಿ )  ಹೊಸ ಶಾಲೆ ಕಟ್ಟಿ ಎನ್ನುತ್ತಿದ್ದಾರೆ.
ಇದರಲ್ಲಿ ರಾಜಕೀಯ ಲಾಭ ಪಡೆಯಲು ಯಾರು ಮುಂದಾಗ್ತಿಲ್ಲ. ಇರೋ ಕಟ್ಟಡ ಬಿಟ್ಟು ಹೊಸ ಕಟ್ಟಡ ಯಾಕೆ ಮಾಡ್ತಿರಾ..?  ಈಗಾಗಲೇ ಒಂದಷ್ಟು ಗ್ರೌಂಡ್ ಸ್ಥಳ ಒತ್ತುವರಿಯಾಗಿದೆ. ಶಾಲೆ ಕಟ್ಟಡ ಆ ಕಡೆ ಈ ಕಡೆ ಮಾಡೋ ಭರದಲ್ಲಿ ಮತ್ತೊಂದಿಷ್ಟಿ ಸ್ಥಳ ಒತ್ತುವರಿಯಾಗೋ ಭೀತಿ ಇದೆ.  ಹೀಗಾಗಿ ಮೊದಲು ಇದ್ದ ಸ್ಥಳದಲ್ಲಿನ ಶಾಲೆ ಅಭಿವೃದ್ಧಿ ಮಾಡಿ ಎನ್ನುತ್ತಿದ್ದಾರೆ. ಸದ್ಯ ಕೆಲಸ ಮಾಡಲು ಬಂದಿರೋ ಜೆಸಿಬಿ ವಾಪಸ್ ಕಳುಹಿಸಿರೋ ದಿವಾಕರ ಬಾಬು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

 

ಪುನರ್‌ಜನ್ಮ ನೀಡಿದ ಮೊಳಕಾಲ್ಮುರನ್ನು ಎಂದಿಗೂ ಮರೆಯೋಲ್ಲ; ಶ್ರೀರಾಮುಲು

ಮಧ್ಯ ಪ್ರವೇಶ ಮಾಡ್ತಾರಂತೆ ಜಿಲ್ಲಾಧಿಕಾರಿ: ಇನ್ನೂ ವಿಷಯದ ಗಂಭೀರತೆ ಅರಿತ ಜಿಲ್ಲಾಧಿಕಾರಿ ಪವನ್ ಮಾಲ್ಪಾಟಿ ಮಾಜಿ ಸಚಿವ‌‌ ದಿವಾಕರ ಬಾಬು ಅವರನ್ನು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಕರೆದಿದ್ದು, ಕಟ್ಟಡ ನಿರ್ಮಾಣ, ಶಾಲೆ ಸ್ಥಳಾಂತರದ ಬಗ್ಗೆ ವಿವರಣೆ ನೀಡಲಿದ್ದಾರೆ.

click me!