National Lok Adalat ಒಂದೇ ದಿನದಲ್ಲಿ ಒಟ್ಟು 42,687  ಪ್ರಕರಣ ಇತ್ಯರ್ಥ!

By Ravi JanekalFirst Published Feb 12, 2023, 1:19 PM IST
Highlights

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ದಿನಾಂಕ 11-02-2023 ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತನ್ನು ಆಯೋಜಿಸಲಾಗಿತ್ತು. ಒಂದೇ ದಿನ ಒಟ್ಟು 42,687  ಪ್ರಕರಣಗಳನ್ನು ಇತ್ಯರ್ಥ ಮಾಡಲಾಯ್ತು.

ಉಡುಪಿ (ಫೆ.12) : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ದಿನಾಂಕ 11-02-2023 ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತನ್ನು ಆಯೋಜಿಸಲಾಗಿತ್ತು. ಒಂದೇ ದಿನ ಒಟ್ಟು 42,687  ಪ್ರಕರಣಗಳನ್ನು ಇತ್ಯರ್ಥ ಮಾಡಲಾಯ್ತು.

ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ -22, ಚೆಕ್ಕು ಅಮಾನ್ಯ ಪ್ರಕರಣ-244, ಬ್ಯಾಂಕ್ / ಹಣ ವಸೂಲಾತಿ ಪ್ರಕರಣ-7, ಎಂ.ವಿ.ಸಿ ಪ್ರಕರಣ-150, ಕಾರ್ಮಿಕ ನಷ್ಟ ಪರಿಹಾರ ಪ್ರಕರಣ-1, ಎಂ.ಎಂಆರ್.ಡಿ ಆಕ್ಟ್ ಪ್ರಕರಣ-8, ವೈವಾಹಿಕ ಪ್ರಕರಣ-4, ಸಿವಿಲ್ ಪ್ರಕರಣ-187, ಇತರೇ ಕ್ರಿಮಿನಲ್ ಪ್ರಕರಣ-2587 ಹಾಗೂ ವ್ಯಾಜ್ಯ ಪೂರ್ವ ದಾವೆ-39477 ಇತ್ಯರ್ಥಗೊಂಡಿತು.

ಧಾರವಾಡ: ಕಾನೂನಿಗೆ ಗೌರವ ಕೊಡಬೇಕು, ಹೆದರುವ ಅಗತ್ಯವಿಲ್ಲ: ನ್ಯಾ.ಕೆ.ಜಿ. ಶಾಂತಿ

ರಾಜೀ ಮುಖಾಂತರ ಇತ್ಯರ್ಥಪಡಿಸಿ ರೂ.20,47,37,959/- ಪರಿಹಾರದ ಮೊತ್ತವನ್ನು ಘೋಷಿಸಲಾಯಿತು. 

ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ(District Legal Services Authority), ತಾಲೂಕು ಕಾನೂನು ಸೇವೆಗಳ ಸಮಿತಿ,  ವಕೀಲರ ಸಂಘ, ಉಡುಪಿ(Udupi), ಕುಂದಾಪುರ(Kundapur) ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು  ಹಾಗೂ ಇತರ ಸರ್ಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತ್(Lok adalat) ನ್ನು ಯಶಸ್ವಿಗೊಳಿಸಲಾಗಿದೆ.

ರಾಷ್ಟ್ರೀಯ ಲೋಕ ಅದಾಲತ್‌: ದಾಖಲೆ 14.8 ಲಕ್ಷ ಕೇಸ್‌ ಇತ್ಯರ್ಥ

click me!