ತಾಲಿಬಾನ್ ಸಂಸ್ಕೃತಿ ಕರ್ನಾಟಕದಲ್ಲಾಗಲಿ, ಭಾರತದಲ್ಲಾಗಲಿ ಬರಲು ಬಿಡುವುದಿಲ್ಲ: ಸಚಿವ ಬಿ.ಸಿ ಪಾಟೀಲ್

By Govindaraj SFirst Published May 6, 2022, 5:18 PM IST
Highlights

ತಾಲಿಬಾನ್ ಸಂಸ್ಕೃತಿ ಕರ್ನಾಟಕದಲ್ಲಾಗಲಿ, ಭಾರತದಲ್ಲಾಗಲಿ ಬರಲು ನಾವ್ಯಾರೂ ಅವಕಾಶ ಕೊಡೋದಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು. 

ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

ಹಾವೇರಿ (ಮೇ.06): ತಾಲಿಬಾನ್ ಸಂಸ್ಕೃತಿ (Taliban Culture) ಕರ್ನಾಟಕದಲ್ಲಾಗಲಿ (Karnataka), ಭಾರತದಲ್ಲಾಗಲಿ (India) ಬರಲು ನಾವ್ಯಾರೂ ಅವಕಾಶ ಕೊಡೋದಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ (BC Patil) ಹೇಳಿದರು. ಇಂದು ಹಿರೇಕೇರೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಬಿ.ಸಿ ಪಾಟೀಲ್ ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಕೆಲ ಸಂಘಟನೆಗಳಿಂದ ತಾಲಿಬಾನಿ ಸಂಸ್ಕೃತಿ ಹೇರಿಕೆ ವಿಚಾರವಾಗಿ ಕಿಡಿಕಾರಿದರು. ತಾಲಿಬಾನ್ ಸಂಸ್ಕೃತಿ ಕರ್ನಾಟಕದಲ್ಲಾಗಲಿ, ಭಾರತದಲ್ಲಾಗಲಿ ಬರಲಿಕ್ಕೆ ನಾವ್ಯಾರೂ ಅವಕಾಶ ಕೊಡೋದಿಲ್ಲ. ಮುಲಾಜಿಲ್ಲದೇ ಕ್ರಮ ತಗೊಳ್ತೇವೆ. ಇದು ಭಾರತ. ಇಲ್ಲಿ ತಾಲಿಬಾನ್ ಆಗೋಕೆ ಬಿಡೋದಿಲ್ಲ. ನಮ್ಮ ದೇಶ ನಮ್ಮ ದೇಶವಾಗೇ ಉಳಿಯುತ್ತೆ ಎಂದು ಹೇಳಿದರು.

ಕಾಂಗ್ರೆಸ್‌ವರು (Congress) ಆಪಾದನೆ ಮಾಡೋದೇ ನಮ್ಮ ಮೂಲಭೂತ ಕರ್ತವ್ಯ ಅಂತ ತಿಳಿದುಕೊಂಡು ಬಾಯಿಗೆ ಬಂದಂಗೆ ಆಪಾದನೆ ಮಾಡ್ತಿದ್ದಾರೆ. ಪಿಎಸ್‌ಐ ಅಕ್ರಮ (PSI Recruitment Scam) ವಿಚಾರದಲ್ಲಿ ಕಾಂಗ್ರೆಸ್‌ನವರು ಗಾಳಿಯಲ್ಲಿ ಗುಂಡು ಹೊಡೆದಿಲ್ಲ, ಸಾಕ್ಷಿ ಸಮೇತ ಆರೋಪ ಮಾಡಲಾಗಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಸಚಿವರು, ಡಿಕೆಶಿಯವರದ್ದು ದಿವ್ಯಾ ಹಾಗರಗಿ ಜೊತೆಗೆ ಫೋಟೋ ಇದೆ. ಪ್ರಿಯಾಂಕ ಖರ್ಗೆ ಆಪಾದನೆ ಮಾಡ್ತಾರೆ. ಆದರೆ ವಿಚಾರಣೆಗೆ ಕರೆದರೆ ಸಾಕ್ಷಿ ಕೊಡಿ ಅಂತ ಹೇಳಿದರೆ ಸಾಕ್ಷಿ ಕೊಡಲ್ಲ. ಸುಮ್ನೆ ಆಪಾದನೆ ಮಾಡೋದಲ್ಲ.

Karnataka Politics: ಶಾಸಕ ಯತ್ನಾಳರೇನು ಬಿಜೆಪಿ ಹೈಕಮಾಂಡಾ?: ಸಚಿವ ಬಿ.ಸಿ.ಪಾಟೀಲ್ ಪ್ರಶ್ನೆ

ಗಾಳಿಯಲ್ಲಿ ಗುಂಡು ಹೊಡೆದಂತೆ ಆಪಾದನೆ ಮಾಡೋದಲ್ಲ. ಆಪಾದನೆ ಮಾಡೋದೇ  ನಮ್ಮ ಮೂಲಭೂತ ಕರ್ತವ್ಯ ಅಂತ ತಿಳಿದುಕೊಂಡು ಬಾಯಿಗೆ ಬಂದಂಗೆ ಆಪಾದನೆ ಮಾಡಿಕೊಂಡು ಹೋಗಬಾರದು. ಸಾಕ್ಷ್ಯಾಧಾರಗಳಿದ್ದರೆ ಕೊಡಲಿ. ಮುಲಾಜಿಲ್ಲದೇ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತೆ. ಈಗಾಗಲೇ ಕೇಸ್ ದಾಖಲು ಮಾಡಿ 26 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಯಾರ ಕೈವಾಡವೂ ಇಲ್ಲ. ಬಿಜೆಪಿಯ ಕೈವಾಡವೂ ಇಲ್ಲ. ಕಳ್ಳದಂಧೆ ಮಾಡಿದವರ ವಿರುದ್ದ ಕಠಿಣ ಕ್ರಮ ಜರುಗಿಸುತ್ತಿದ್ದೇವೆ ಎಂದರು.

ಪ್ರಭು ಚೌಹಾಣ್ ಮಾಹಿತಿ ಕೊಟ್ಟಿದ್ರೆ ತಪ್ಪೇನಿಲ್ಲ: ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರವಾಗಿ ಸಚಿವ ಪ್ರಭು ಚೌಹಾಣ್ ಮಾಹಿತಿ ನೀಡಿದ್ದಾರೆ ಎಂದರೆ ಅದನ್ನು ನಾವು ಸ್ವಾಗತ ಮಾಡುತ್ತೇವೆ. ಪ್ರಭು ಚೌಹಾಣ್ ಈ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಅಕ್ರಮ ಆಗಿದೆ ಅಂತ ಮಾಹಿತಿ ಕೊಟ್ಟಿದ್ದರೆ ಇದನ್ನು ನಾವು ಸ್ವಾಗತ ಮಾಡ್ತೀವಿ, ಕ್ರಮ ಜರುಗಿಸ್ತೀವಿ ಎಂದರು.

ಮೈಸೂರು ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್‌

ಧರ್ಮ ಇರೋವರೆಗೂ ಧರ್ಮ ಯುದ್ಧ ನಡೆಯುತ್ತೆ: ಹಿಜಾಬ್ ವಿಚಾರದಲ್ಲಿ ಶ್ರೀರಾಮ ಸೇನೆ ಅಭಿಯಾನವನ್ನು  ಸಮರ್ಥಿಸಿಕೊಂಡ ಬಿ.ಸಿ ಪಾಟೀಲ್, ನಮ್ಮ ಧರ್ಮವನ್ನು ರಕ್ಷಣೆ ಮಾಡಿಕೊಳ್ಳೋಕೆ ಯಾರ ಅಪ್ಪಣೆಯೂ ಬೇಡ. ನಮ್ಮ ಧರ್ಮದ ತತ್ವಗಳನ್ನು, ಸಿದ್ದಾಂತಗಳನ್ನು ಪಠ್ಯ ಮಾಡಲಿಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಶ್ರೀರಾಮ ಸೇನೆಯವರು ನಮ್ಮ ಧರ್ಮ ಪ್ರತಿಪಾಧಕರಾಗಿ ಧರ್ಮ ರಕ್ಷಣೆ ಕೆಲಸ ಮಾಡಿದರೆ ನಾವು ಅದನ್ನು ಸ್ವಾಗತ ಮಾಡುತ್ತೇವೆ. ಅವರು ಹಿಜಾಬ್ ಯಾಕೆ ತಗಿಸೋಕೆ ಹೋಗ್ತಾರೆ. ಕಾನೂನೇ ಇದೆ, ನ್ಯಾಯಾಲಯ ತೀರ್ಪು ಕೂಡಾ ನೀಡಿದೆ. ಸರ್ಕಾರ ನಿಗದಿ ಪಡಿಸಿರೋ ಸಮವಸ್ತ್ರ ಹಾಕಿಕೊಂಡು ಬರಬೇಕು ಅಂತ ಆದೇಶವೂ ಇದೆ. ಅದಕ್ಕೆ ಎಲ್ಲರೂ ಕೂಡಾ ತಲೆ ಬಾಗಬೇಕು ಎಂದರು.

click me!