BBMP ನೂತನ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ

By Suvarna NewsFirst Published May 6, 2022, 4:00 PM IST
Highlights
  • ಬಿಬಿಎಂಪಿ ನೂತನ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ನೇಮಕ 
  • ಅಧಿಕಾರ ಹಸ್ತಾಂತರ ಮಾಡಿದ ನಿರ್ಗಮಿತ ಮುಖ್ಯ ಆಯುಕ್ತ ಗೌರವ್ ಗುಪ್ತ
  • ಸಂಪ್ರದಾಯದಂತೆ ಬೆಳ್ಳಿ ದಂಡ, ಕೆಎಂಸಿ ಕಾಯ್ದೆ ಪುಸ್ತಕ ನೀಡಿ ಅಧಿಕಾರ ಹಸ್ತಾಂತರ

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು(ಮೇ.6): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (Bruhat Bengaluru Mahanagara Palike) ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ( BBMP Chief Commissioner Tushar Girinath) ಅಧಿಕಾರ ಸ್ವೀಕರಿಸಿದರು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಿರ್ಗಮಿತ ಆಯುಕ್ತ ಗೌರವ್ ಗುಪ್ತಾ (Gaurav Gupta) , ಬಿಬಿಎಂಪಿ ಸಂಪ್ರದಾಯದಂತೆ ಬೆಳ್ಳಿ ದಂಡ, ಕೆಎಂಸಿ ಕಾಯ್ದೆ ಪುಸ್ತಕ ನೀಡಿ ಅಧಿಕಾರ ಹಸ್ತಾಂತರಿಸಿದರು. ಇದೇ ವೇಳೆ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಗೌರವ್ ಗುಪ್ತಾರಿಗೆ ಸನ್ಮಾನ ಮಾಡಲಾಯ್ತು. 

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಮ್ಮ ಮುಂದೆ ಸವಾಲು ದೊಡ್ಡದಿದೆ. ಜನಸೇವೆಗೆ ಬದ್ಧವಾಗಿದ್ದೇವೆ ಅಂದ್ರು. ಕೊರೋನಾ ನಾಲ್ಕನೇ ಅಲೆ ಎದುರಿಸಲು ಸಿದ್ಧರಾಗಿದ್ದೇವೆ. ಮಳೆಗಾಲ, ರಸ್ತೆ ಗುಂಡಿ, ಘನತ್ಯಾಜ್ಯ ವಿಲೇವಾರಿ ನಮ್ಮ ಮೊದಲ ಆದ್ಯತೆ ಅಂತ ತುಷಾರ್ ಗಿರಿನಾಥ್ ಹೇಳಿದ್ರು. ನನ್ನ ಕಾರ್ಯವೈಖರಿ ಬಗ್ಗೆ ನಾನು ಹೇಳಲ್ಲ ನೀವೇ ನೋಡುತ್ತಿರಿ ಎಂದಿದ್ದಾರೆ.

ಇಲ್ಲಿನ ಅಗತ್ಯಕ್ಕೆ ಅನುಗುಣವಾಗಿ ಕೆಲಸ ಮಾಡ್ತೇವೆ. ನಾಗರೀಕರಿಗೆ ಉತ್ತಮ ಸೇವೆ ಕೊಡುತ್ತೇವೆ. ನಾಗರೀಕರು ನಮ್ಮೊಂದಿಗೆ ಸಹಕರಿಸ್ತಾರೆ. ನಮಗೆ ದೊಡ್ಡ ಹುದ್ದೆ ಸಿಕ್ಕಿದೆ ಅಂತಾ ಇಲ್ಲಿ ಬಂದಿಲ್ಲ, ಸರ್ಕಾರ ನೇಮಕ ಮಾಡಿದೆ ಕೆಲಸ ಮಾಡಲು ಬಂದಿದ್ದೇನೆ. ನಾನು ಸಕ್ಸಸ್ ಆಗ್ತೇನೆ ಫೇಲ್ಯೂರ್ ಆಗ್ತೇನೆ ಅನ್ನೋದು ಅಲ್ಲ. ಇದೇ ವ್ಯವಸ್ಥೆಯಲ್ಲಿ ನಾವು ಕೆಲಸ‌ ಮಾಡಬೇಕು ಅಂತ ಹೇಳಿದರು. 

UDUPI FLOATING BRIDGE ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ, ದೇಶದಲ್ಲೇ ಎರಡನೆಯದು!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ಬಂದಾಗ ಹುಮ್ಮಸ್ಸು ಕಡಿಮೆ ಆಗುತ್ತೆ ಅಂತಾ ಇಲ್ಲ. ಉತ್ಸಾಹ ಸದಾ ಇದ್ದೆ ಇರುತ್ತೆ. ನಾನು 30 ವರ್ಷ ಸೇವೆಯಲ್ಲಿ ಇದ್ದೀನಿ. ಬೇರೆ ಇಲಾಖೆಯಲ್ಲಿ ಇದ್ದಾಗ ನನ್ನ ಕಾರ್ಯವೈಖರಿಯನ್ನ ನೀವೇ ನೋಡಿದ್ದೀರಿ ಎಂದರು. ಸರ್ಕಾರ ನಮ್ಮನ್ನ ನಿಯೋಜಿಸಿ ಜನರ ಸೇವೆಗೆಂದು ಕಳುಹಿಸಿದೆ. ರಸ್ತೆ ಗುಂಡಿ ಮುಚ್ಚುವುದು ದೊಡ್ಡ ಸವಾಲಾಗಿದೆ. ಇಲಾಖೆಗಳ ನಡುವೆ ಸಮನ್ವಯ ಕಾಯ್ದುಕೊಳ್ಳೋ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ತುಷಾರ್ ಗಿರಿನಾಥ್ ಹೇಳಿದರು. 

ಕಮಿಷನರ್ ಸಿಂಗಲ್ ಮ್ಯಾನ್ ಆರ್ಮಿ ಅಲ್ಲ: ನಮ್ಮಲ್ಲಿ ದೊಡ್ಡ  ಸೈನ್ಯ ಇದೆ ಅದರ ಸಹಯೋಗದಲ್ಲಿ ಕೆಲ್ಸ ಮಾಡ್ಬೇಕಿದೆ. ಕ್ರಿಯಾಶೀಲರಾಗಿ ಜನ್ರಿಗೆ ಉತ್ತಮವಾಗೋ ಕೆಲ್ಸ ಮಾಡ್ಬೇಕಿದೆ. ಬಿಬಿಎಂಪಿಯಲ್ಲಿ ಕಮಿಷನರ್ ಸಿಂಗಲ್ ಆರ್ಮಿ ಆಗಿ ಕೆಲಸ ಮಾಡಲು ಸಾಧ್ಯವಿಲ್ಲ. ನಮ್ಮಲ್ಲಿರುವ ಅಧಿಕಾರಿಗಳನ್ನ ಬಳಸಿಕೊಂಡು ನಾನು ಲೀಡ್ ಮಾಡಬೇಕಿದೆ. ಇದರ ಜೊತೆಗೆ ನಾಗರೀಕರ ಸಹಕಾರ ಕೂಡ ಮುಖ್ಯ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದರು.

ಮರ್ಯಾದೆಯಿಂದ ವಾಪಸ್ ಹೋಗಲೇ....PSIಗೆ ಮೂಡಿಗೆರೆ ಶಾಸಕನ ಅವಾಜ್!

ಬಿಬಿಎಂಪಿ ಕಾಲ್ ಸೆಂಟರ್ ಇನ್ನಷ್ಟು ಕಾರ್ಯಪ್ರವೃತ್ತರಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಮಳೆಗಾಲದಲ್ಲಿ ಅನಾಹುತ ಆಗದಂತೆ ಮುಂಜಾಗ್ರತೆ ವಹಿಸುತ್ತೇವೆ. ನಾನು ಕಚೇರಿಯಲ್ಲಿ ಕೂರುವ ಬದಲು ಜನರ ಬಳಿ ಹೋಗ್ತೀನಿ. ಅಲ್ಲಿಯೇ ಸಾರ್ವಜನಿಕರ ಸಮಸ್ಯೆಯನ್ನ ಬಗೆಹರಿಸೋ ಕೆಲ್ಸ ಮಾಡ್ತೀವಿ. ನಮ್ಮಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾರೆ ಅದನ್ನ ಸಮರ್ಪಕವಾಗಿ ಬಳಕೆ ಮಾಡ್ತೀವಿ ಅಂತ ತುಷಾರ್ ಗಿರಿನಾಥ್ ಹೇಳಿದರು

ಅಧಿಕಾರ ಸ್ವೀಕಾರಕ್ಕೆ ಮೂರು ಬಾರಿ ಸಮಯ ಬದಲು: ಬಿಬಿಎಂಪಿ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮದ ಸಮಯ ಪದೇ‌ ಪದೇ ಬದಲಾಗಿ ಗೊಂದಲ ಮೂಡಿಸಿದ್ದಂತೂ ಸತ್ಯ. ಇಂದು ಬೆಳಿಗ್ಗೆ 9:45 ಕ್ಕೆ ಅಧಿಕಾರ ಸ್ವೀಕರಿಸುತ್ತಾರೆ ಎಂದು ಹೇಳಲಾಗಿತ್ತು. ಬಳಿಕ ಸಮಯ ಬದಲಾವಣೆ ಆಗಿ ಬೆಳಗ್ಗೆ 11:30 ಕ್ಕೆ ಮುಂದೂಡಲಾಯ್ತು. ಕೊನೆಗೆ 12:30 ಕ್ಕೆ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕರಿಸಿದರು. ಪದೇ ಪದೇ ಸಮಯ ಬದಲಾವಣೆಗೆ 12 ಗಂಟೆ ತನಕ ರಾಹುಕಾಲ ಇದ್ದಿದ್ದೇ ಕಾರಣ ಅಂತ ಬಿಬಿಎಂಪಿಯಲ್ಲಿ ಗುಸು ಗುಸು ಕೇಳಿಬಂತೇ ವಿನಃ, ಕಾರಣ ಮಾತ್ರ ಸ್ಪಷ್ಟವಾಗಿಲ್ಲ.

click me!