ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಪ್ರವಾಸಿ ಸ್ಥಳಗಳಿಗೆ ಸಮೀಪದ ಪ್ರವಾಸಿ ಕೇಂದ್ರ ಬಿಂದುವಾಗಿ ಜಾಗತಿಕ ಮಟ್ಟದಲ್ಲಿ ತಲಕಾಡು ಗುರುತಿಸಿಕೊಂಡಿದ್ದರು ಸಮಗ್ರ ಅಭಿವೃದ್ದಿಯಿಂದ ವಂಚಿತವಾಗಿದೆ.
ತಲಕಾಡು : ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಪ್ರವಾಸಿ ಸ್ಥಳಗಳಿಗೆ ಸಮೀಪದ ಪ್ರವಾಸಿ ಕೇಂದ್ರ ಬಿಂದುವಾಗಿ ಜಾಗತಿಕ ಮಟ್ಟದಲ್ಲಿ ತಲಕಾಡು ಗುರುತಿಸಿಕೊಂಡಿದ್ದರು ಸಮಗ್ರ ಅಭಿವೃದ್ದಿಯಿಂದ ವಂಚಿತವಾಗಿದೆ.
ಪ್ರಸ್ತುತ ಇಲ್ಲಿನ ಪ್ರಸಿದ್ದ ಪಂಚಲಿಂಗ ದೇವಾಲಯಗಳ ಬಳಿ ಹಾಗೂ ನದಿತೀರದ ಅರಣ್ಯ ನಿಸರ್ಗಧಾಮ ಅಭಿವೃದ್ದಿ ಕುಂಠಿತಗೊಂಡು ಹತ್ತು ವರ್ಷ ಹಿಂದಕ್ಕೆ ಸರಿದಿದೆ.
undefined
ನಿಸರ್ಗಧಾಮದಲ್ಲಿ ಪ್ರವಾಸಿಗರು ವಿಶ್ರಮಿಸುವ ಸಿಮೆಂಟ್ ಕಟ್ಟೆಗಳು ಪದೇ ಪದೇ ಪ್ರವಾಹದಿಂದ ಸಂಪೂರ್ಣ ಹಾನಿಗೀಡಾಗಿವೆ. ಮರಳುಗುಡ್ಡದ ಮೇಲಿನ ಶ್ರೀ ಪಾತಾಳೇಶ್ವರ, ಶ್ರೀ ಮರಳೇಶ್ವರ ದೇವಾಲಯಗಳಿಗೆ ತೆರಳುವ ಯಾತ್ರಿಕರಿಗೆ ನೆರಳು ನೀಡಲೆಂದು (2009 ರಲ್ಲಿ) ಅಳವಡಿಸಿದ್ದ ಎರಡು ಕಿ.ಮೀ ಉದ್ದದ ಜಂಗ್ ಶೀಟ್ ಶೆಡ್ ಬಹುತೇಕ ಗುಜರಿ ಸೇರುವ ದುಸ್ಥಿತಿಗೆ ತಲುಪಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾಗ್ಯಗಳ ಭರಾಟೆಯಲ್ಲಿ, ಕ್ಷೇತ್ರದಲ್ಲಿ ಅಭಿವೃದ್ದಿ ಕಾಮಗಾರಿಗಳು ಹಿನ್ನಡೆ ಅನುಭವಿಸಿವೆ.
ಇಲ್ಲಿಯ ಯುವಕರ ವೃತ್ತಿ ಕೌಶಲ್ಯ ಕನಿಷ್ಡ ವಿದ್ಯಾರ್ಹತೆಗೆ ಅನುಸಾರ ಉದ್ಯೋಗ ಅಥವಾ ಉದ್ಯಮಕ್ಕೆ ನೆರವು ಕಲ್ಪಿಸಿಕೊಡುವ ಮಹತ್ವದ ಜವಾಬ್ದಾರಿ ಆಡಳಿತ ನಡೆಸುವ ಸರ್ಕಾರ ಹಾಗೂ ಕ್ಷೇತ್ರದ ಶಾಸಕದ್ದಾಗಿದೆ.
ಹೋಬಳಿ ಕೇಂದ್ರದಲ್ಲಿ 100 ಹಾಸಿಗೆಯ ನೂತನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು, ಹೋಬಳಿ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರೈಮರಿ ಹೆಲ್ತ್ ಕೇರ್ ಸೆಂಟರ್ ತೆರೆಯುವುದು, ಹೊಳೆ ಸಾಲು ತಡಿ ಮಾಲಂಗಿ, ಮಾದಾಪುರದಲ್ಲಿರುವ ಪ್ರಾಥಮಿಕಆರೋಗ್ಯ ಕೇಂದ್ರಗಳ ಸೇವೆಯನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಮಹತ್ವದ ಕೆಲಸ ಜರೂರಾಗಿ ಆಗಬೇಕಿದೆ.
ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ದಿ, ಪ್ರಾಚ್ಯವಸ್ತು ಸಂಗ್ರಹಾಲಯ ತೆರೆಯುವುದು ಸೇರಿದಂತೆ ಇನ್ನೂ ಹತ್ತು ಹಲವಾರು ಸಮಗ್ರ ಅಭಿವೃದ್ದಿ ಪರ್ವವೇ ಹೋಬಳಿಯಲ್ಲಿ ನಡೆಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಕ್ಷೇತ್ರದ ಜನತೆ.
ಪ್ರವಾಸಿಗರಿಗೆ ವಿಮಾ ಸೌಲಭ್ಯ
ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರ ಹಿತದೃಷ್ಟಿಯಿಂದ ಇದೇ ಮೊದಲ ಬಾರಿಗೆ ವಿಮೆ ಜಾರಿಗೊಳಿಸಲಾಗಿದೆ ಎಂದು ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್ ಚಿಕ್ಕನರಗುಂದ ಹೇಳಿದ್ದಾರೆ.
ಶ್ರೀಮಂತ ಜೀವ ವೈವಿದ್ಯತೆಯನ್ನು ಹೊಂದಿರುವ ನಾಗರಹೊಳೆ ಉದ್ಯಾನವನದಲ್ಲಿ ಈ ಹಿಂದಿನಿಂದಲೂ ವನ್ಯಜೀವಿ ಪ್ರವಾಸೋದ್ಯಮವನ್ನು ಕಿಯಾಶೀಲ ಚಟುವಟಿಕೆಗಳೊಂದಿಗೆ ಅನುಷ್ಠಾನಗೊಳಿಸುತ್ತ ಖ್ಯಾತಿ ಗಳಿಸಿದೆ. ಪ್ರವಾಸಿಗರ ಮೆಚ್ಚಿನ ತಾಣವಾಗಿರುವ ನಾಗರಹೊಳೆ ಉದ್ಯಾನವನಕ್ಕೆ ಪ್ರತಿವರ್ಷ ಸುಮಾರು 1.25 ಲಕ್ಷಗಳಿಂದ 1.50 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ.
ಹುಲಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ಬಂಡೀಪುರ ನಂಬರ್ ಒನ್, ನಾಗರಹೊಳೆ ಸೆಕೆಂಡ್
ಉದ್ಯಾನವನದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಸಫಾರಿ ಆಯೋಜಿಸಲಾಗುತ್ತದೆ. ಇದೀಗ ಪ್ರವಾಸಿಗರ ಹಿತರಕ್ಷಣೆಯಿಂದ ಸಫಾರಿ ವೇಳೆ ಆಗಬಹುದಾದ ಅನಾಹುತಗಳನ್ನು ಸರಿ ದೂಗಿಸಲು ಇಲಾಖೆಯು ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ ಕಂಪನಿಯ (ವಿಮೆ ಸಂಖ್ಯೆ 0706022723107894900) ಸಹಯೋಗದಲ್ಲಿ ಉದ್ಯಾನವನಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರಿಗೂ ತಲಾ 5 ಲಕ್ಷ ರು. ಗಳ ವಿಮಾ ಸೌಲಭ್ಯ ಕಲ್ಪಿಸಲುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಇಲಾಖೆಯು ಒಂದು ಕೋಟಿ ರು. ಗಳನ್ನು ಮೀಸಲಿಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ನಾಗರಹೊಳೆಯಲ್ಲಿ ವನ್ಯಜೀವಿ ಸಪ್ತಾಹ
69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಾಗರಹೊಳೆ ವಲಯ ಕೇಂದ್ರದಲ್ಲಿ ಅ. 8ರಂದು ವನ್ಯಜೀವಿ ಸಂರಕ್ಷಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ನಿವಾರಣೆಯಲ್ಲಿ ಪತ್ರಿಕಾ ಮತ್ತು ಮಾಧ್ಯಮದ ಪಾತ್ರದ ಕುರಿತು ಕಾರ್ಯಾಗಾರ ಆಯೋಜಿಸಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಹೇಳಿದ್ದಾರೆ.
ನಾಗರಹೊಳೆ: ಕಾಡಂಚಿನ ಜಮೀನಿನಲ್ಲಿ ಹುಲಿಹೆಜ್ಜೆ ಪತ್ತೆ; ಗ್ರಾಮಸ್ಥರಲ್ಲಿ ಆತಂಕ!
ಬೆಳಗ್ಗೆ 11ಕ್ಕೆ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಉದ್ಘಾಟಿಸಲಿದ್ದು, ಮುಖ್ಯಅತಿಥಿಯಾಗಿ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ಕುಮಾರ್ ತ್ರಿಪಾಠಿ ಭಾಗವಹಿಸಲಿದ್ದಾರೆ. ಮೈಸೂರು ಜಿಲ್ಲಾಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ಜಿಲ್ಲಾ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ ಕೆ. ದೀಪಕ್, ಹುಣಸೂರು, ಕೊಡಗು, ಎಚ್.ಡಿ. ಕೋಟೆ ಪತ್ರಕರ್ತರ ಸಂಘದ ಅಧ್ಯಕ್ಷರು, ವಿವಿಧ ಗ್ರಾಪಂ ವರಿಷ್ಠರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಡಿಸಿಎಫ್ ತಿಳಿಸಿದ್ದಾರೆ.