ಒಂದೇ ದಿನ 36 ಕೇಸ್‌: ರಾಜ್ಯಕ್ಕೆ ತಬ್ಲೀಘಿ ಶಾಕ್‌..!

By Kannadaprabha NewsFirst Published Apr 17, 2020, 10:13 AM IST
Highlights

ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕು ಗುರುವಾರ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ‘ಸ್ಫೋಟಿಸಿದೆ’. ಒಂದೇ ದಿನ ದಾಖಲೆಯ 36 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 315ಕ್ಕೇರಿದೆ. ಬುಧವಾರವಷ್ಟೇ 19 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗಿನ ದಾಖಲೆಯಾಗಿತ್ತು.

ಬೆಂಗಳೂರು(ಏ.17): ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕು ಗುರುವಾರ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ‘ಸ್ಫೋಟಿಸಿದೆ’. ಒಂದೇ ದಿನ ದಾಖಲೆಯ 36 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 315ಕ್ಕೇರಿದೆ. ಬುಧವಾರವಷ್ಟೇ 19 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗಿನ ದಾಖಲೆಯಾಗಿತ್ತು.

ಈ ಮಧ್ಯೆ, ಮಾ.9ಕ್ಕೆ ರಾಜ್ಯದಲ್ಲಿ ಮೊದಲ ಪ್ರಕರಣ ದೃಢಪಟ್ಟ25 ದಿನಗಳ ಬಳಿಕ 150ನೇ ಸೋಂಕು ಖಚಿತಗೊಂಡಿತ್ತು. ಇದೀಗ 10 ದಿನಗಳಲ್ಲಿ ಆ ಸಂಖ್ಯೆ ದ್ವಿಗುಣಗೊಂಡಿದೆ.

20ಕ್ಕೆ ಸಂಪುಟ ಸಭೆ: ಮದ್ಯ ಮಾರಾಟ ಬಗ್ಗೆ ನಿರ್ಧಾರ?

ಆತಂಕಕಾರಿ ಸಂಗತಿ ಎಂದರೆ, ಗುರುವಾರ ಬೆಳಗಾವಿಯೊಂದರಲ್ಲೇ 17 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 36ಕ್ಕೇರಿದೆ. ಅವರೆಲ್ಲ ದೆಹಲಿಯ ತಬ್ಲೀಘಿ ಜಮಾತ್‌ನಲ್ಲಿ ಪಾಲ್ಗೊಂಡವರು ಅಥವಾ ಅವರ ಸಂಪರ್ಕ ಹೊಂದಿದವರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ತಬ್ಲೀಘಿ ನಂಟಿನ ಪ್ರಕರಣಗಳ ಸಂಖ್ಯೆ 94ಕ್ಕೇರಿದೆ. ಇನ್ನು ವಿಜಯಪುರದಲ್ಲಿ 7, ಬೆಂಗಳೂರಿನಲ್ಲಿ 5, ಮೈಸೂರು, ಕಲಬುರಗಿಯಲ್ಲಿ ತಲಾ 3 ಹಾಗೂ ಗದಗದಲ್ಲಿ 1 ಸೋಂಕು ಪ್ರಕರಣ ದೃಢಪಟ್ಟಿದೆ ಎಂದು ಸಚಿವ ಎಸ್‌.ಸುರೇಶ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ಸಿಗದ ಎಣ್ಣೆ, ಹೌದೋ ಹುಲಿಯಾ ಪೀರಪ್ಪ ಕುಡಿತ ಬಿಟ್ಟ..!

ಇದು ರಾಜ್ಯದ ಜನರನ್ನು ಮತ್ತಷ್ಟುಭಯಭೀತರನ್ನಾಗಿಸಿದ್ದು, ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದೆ ಸಮುದಾಯಕ್ಕೆ ಹಬ್ಬಿದೆಯೇ ಎಂಬ ತೀವ್ರ ಆತಂಕ ಸೃಷ್ಟಿಸಿದೆ. ಆದರೆ, ಸರ್ಕಾರ ಮಾತ್ರ ರಾಜ್ಯದಲ್ಲಿ ಕೊರೋನಾ ಸೋಂಕು ಸಮುದಾಯಕ್ಕೆ ಹಬ್ಬುವ ಮಟ್ಟಕ್ಕೆ ಹೋಗಿಲ್ಲ ಎಂದು ಸಮರ್ಥಿಸಿಕೊಂಡಿದೆ.

94 ಕೇಸಿಗೆ ತಬ್ಲೀಘಿ ನಂಟು:

ರಾಜ್ಯದಲ್ಲಿ 315 ಪ್ರಕರಣಗಳಲ್ಲಿ 94 ಪ್ರಕರಣಗಳು ದೆಹಲಿಯ ನಿಜಾಮುದ್ದೀನ್‌ನ ತಬ್ಲೀಘಿ ಜಮಾತ್‌ನಲ್ಲಿ ಭಾಗಿಯಾಗಿದ್ದವರು ಮತ್ತು ಅವರ ಸಂಪರ್ಕ ಪಡೆದವರದ್ದಾಗಿವೆ. ಗುರುವಾರ ಬೆಳಗಾವಿಯಲ್ಲಿ ಹೊಸದಾಗಿ ಪತ್ತೆಯಾಗಿರುವ 17ರಲ್ಲಿ ಐದು ಪ್ರಕರಣಗಳು ದೆಹಲಿಗೆ ಹೋಗಿ ಬಂದ ತಬ್ಲೀಘಿಗಳಲ್ಲಿ ಪತ್ತೆಯಾಗಿದೆ. ಹೀಗಾಗಿ, ನೇರವಾಗಿ ಜಮಾತ್‌ನಲ್ಲಿ ಪಾಲ್ಗೊಂಡು ಬಂದ 46 ಜನರು ಮತ್ತು ಅವರ ಸಂಪರ್ಕ ಪಡೆದ 48 ಮಂದಿ ಸೇರಿ ಒಟ್ಟು 94 ಜನರಿಗೆ ರಾಜ್ಯದಲ್ಲಿ ಸೋಂಕು ದೃಢಪಟ್ಟಂತಾಗಿದೆ ಎಂದು ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಇನ್ನು, ಗುರುವಾರ ನಂಜನಗೂಡಿನ ಜ್ಯುಬಿಲಿಯೆಂಟ್‌ ಫಾರ್ಮಾ ಕಂಪನಿಯ ಮತ್ತಿಬ್ಬರು ನೌಕರರಿಗೆ ಸೋಂಕು ದೃಢಪಟ್ಟಿದ್ದು, ಆ ಕಂಪನಿಯ ಒಟ್ಟು 49 ಜನರಿಗೆ ಸೋಂಕು ದೃಢಪಟ್ಟಂತಾಗಿದೆ. ಒಟ್ಟಾರೆ ರಾಜ್ಯದ 315 ಪ್ರಕರಣಗಳಿಗೆ ನೇರ ಸಂಪರ್ಕ ಹೊಂದಿರುವ 2816 ಜನ, ದ್ವಿತೀಯ ಸಂಪರ್ಕದ ಒಟ್ಟು 6416 ಜನರನ್ನು ಗುರುತಿಸಿ ಪರಿಶೀಲನೆಯಲ್ಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಬಳ ನೀಡಲು ಹಣ ಕೊಡಿ: ಸರ್ಕಾರಕ್ಕೆ KSRTC ಬೇಡಿಕೆ

ಇಲ್ಲಿಯವರೆಗೆ 82 ಜನ ಡಿಸ್ಚಾಜ್‌ರ್‍: ಕೊರೋನಾ ಸೋಂಕಿತರ ಪೈಕಿ ಮತ್ತೆ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಒಟ್ಟು 315 ಸೋಂಕಿತರ ಪೈಕಿ ಇದುವರೆಗೆ 82 ಜನರು ಬಿಡುಗಡೆಯಾದಂತಾಗಿದೆ. ಉಳಿದ 220 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಜನ ಸೋಂಕಿತರು ಮೃತಪಟ್ಟಿದ್ದಾರೆ.

click me!