ಲಾಕ್‌ಡೌನ್‌ ಎಫೆಕ್ಟ್‌: ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಛಲ, ತೋಟದ ತೊಟ್ಟಿಯಲ್ಲೇ ಈಜುಪಟು ಅಭ್ಯಾಸ

By Kannadaprabha NewsFirst Published Apr 17, 2020, 9:33 AM IST
Highlights

ಲಾಕ್‌ಡೌನ್‌ನಿಂದಾಗಿ ಪುತ್ತೂರಿನಲ್ಲಿರುವ ಕರ್ನಾಟಕದ ಲಿಖಿತ್‌| ತೋಟದ ನೀರಿನ ತೊಟ್ಟಿಯಲ್ಲೇ ಈಜು ಅಭ್ಯಾಸ| ವಾರಕ್ಕೆ 4 ಬಾರಿ ನೀರಾವರಿಗಾಗಿ ಬಳಸುವ ತೊಟ್ಟಿಯಲ್ಲೇ ಅಭ್ಯಾಸ| ಪ್ರಕೃತಿ ಮಡಿಲಿನಲ್ಲಿ ಮಾನಸಿಕ ಸದೃಢತೆ ಹೆಚ್ಚಿಸಿಕೊಳ್ಳುತ್ತಿರುವ ಈಜುಪಟು| 

ಬೆಂಗಳೂರು(ಏ.17): ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಉತ್ಸಾಹದಲ್ಲಿರುವ ಕರ್ನಾಟಕದ ಈಜುಪಟು ಎಸ್‌.ಪಿ.ಲಿಖಿತ್‌, ಲಾಕ್‌ಡೌನ್‌ನಿಂದಾಗಿ ತೋಟದ ನೀರಿನ ತೊಟ್ಟಿಯಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ. 

ಪುತ್ತೂರಿನಲ್ಲಿರುವ ತಮ್ಮ ಕೋಚ್‌ ಪಾರ್ಥ ಅವರ ತೋಟಕ್ಕೆ ಫೆ.25ರಂದು ತೆರಳಿದ್ದ ಲಿಖಿತ್‌, ಲಾಕ್‌ಡೌನ್‌ ಜಾರಿಯಾದ ಕಾರಣ ಬೆಂಗಳೂರಿಗೆ ವಾಪಸಾಗಲು ಸಾಧ್ಯವಾಗಿಲ್ಲ. ವಾರಕ್ಕೆ 4 ಬಾರಿ ನೀರಾವರಿಗಾಗಿ ಬಳಸುವ ತೊಟ್ಟಿಯಲ್ಲೇ ಅಭ್ಯಾಸ ನಡೆಸುತ್ತಿದ್ದು, ಪ್ರಕೃತಿ ಮಡಿಲಿನಲ್ಲಿ ಮಾನಸಿಕ ಸದೃಢತೆ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿರುವುದಾಗಿ 21 ವರ್ಷದ ಈಜುಪಟು ತಿಳಿಸಿದ್ದಾರೆ.

ಕಳೆದ 20 ದಿನದಿಂದ ನಿಸಾನ್ ಮೈಕ್ರಾ ಕಾರಿನಲ್ಲೇ ದ.ಕ ಜಿಲ್ಲೆಯ ಇಬ್ಬರ ಜೀವನ!

ಲಾಕ್‌ಡೌನ್‌ ಮುಗಿದು ಬೆಂಗಳೂರಿಗೆ ವಾಪಸಾದ ಬಳಿಕ 100 ಮೀ. ಬ್ರೆಸ್ಟ್‌ಸ್ಟೊರೕಕ್‌ನಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಯತ್ನಿಸುವುದಾಗಿ ತಿಳಿಸಿದ್ದಾರೆ.
 

click me!