
ಬೆಂಗಳೂರು (ಆ.22): ಗಣೇಶ ಚತುರ್ಥಿ, ದಸರಾ, ದೀಪಾವಳಿ ಮತ್ತು ಛತ್ ಹಬ್ಬಗಳಿಗೆ ನಿಯಮಿತ ರೈಲುಗಳ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆ (SWR) ಬೆಂಗಳೂರಿನಿಂದ ವಿವಿಧ ನಗರಗಳಿಗೆ ವಿಶೇಷ ರೈಲುಗಳನ್ನು ಓಡಿಸಲಿದೆ. ಬೆಂಗಳೂರಿನಿಂದ ಹೊರರಾಜ್ಯಗಳ ನಗರಗಳಿಗೆ ಮಾತ್ರವಲ್ಲದೆ, ಬೀದರ್ ಹಾಗೂ ಕರಾವಳಿ ಭಾಗಕ್ಕೂ ವಿಶೇಷ ರೈಲು ಓಡಲಿದೆ.
ರೈಲು ಸಂಖ್ಯೆ 06549 ಆಗಸ್ಟ್ 26 ರಂದು ರಾತ್ರಿ 9.15 ಕ್ಕೆ SMVT ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 11.30 ಕ್ಕೆ ಬೀದರ್ ತಲುಪಲಿದೆ.
ರೈಲು ಸಂಖ್ಯೆ 06550 ಆಗಸ್ಟ್ 27 ರಂದು ಮಧ್ಯಾಹ್ನ 2.30 ಕ್ಕೆ ಬೀದರ್ ನಿಂದ ಹೊರಟು ಮರುದಿನ ಬೆಳಿಗ್ಗೆ 4.30 ಕ್ಕೆ SMVT ಬೆಂಗಳೂರು ತಲುಪಲಿದೆ.
ಈ ರೈಲು 22 ಕೋಚ್‌ಗಳೊಂದಿಗೆ ಚಲಿಸಲಿದ್ದು, ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ ಮತ್ತು ಹುಮನಾಬಾದ್ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಯಾಗಲಿದೆ.
ರೈಲು ಸಂಖ್ಯೆ 06241 ಆಗಸ್ಟ್ 26 ರಂದು ರಾತ್ರಿ 8.15 ಕ್ಕೆ ಮೈಸೂರಿನಿಂದ ಹೊರಟು ಮರುದಿನ ಬೆಳಿಗ್ಗೆ 10.50 ಕ್ಕೆ ತಿರುನೆಲ್ವೇಲಿ ತಲುಪಲಿದೆ.
ರೈಲು ಸಂಖ್ಯೆ 06242 ಆಗಸ್ಟ್ 27 ರಂದು ಮಧ್ಯಾಹ್ನ 3.40 ಕ್ಕೆ ತಿರುನೆಲ್ವೇಲಿಯಿಂದ ಹೊರಟು ಮರುದಿನ ಬೆಳಿಗ್ಗೆ 5.50 ಕ್ಕೆ ಮೈಸೂರಿಗೆ ಆಗಮಿಸಲಿದೆ.
ಎರಡೂ ರೈಲುಗಳು ಬೆಂಗಳೂರು ಮೂಲಕ ಚಲಿಸುತ್ತವೆ. ರೈಲು 20 ಕೋಚ್‌ಗಳನ್ನು ಹೊಂದಿದ್ದು, ಮಂಡ್ಯ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾನಕಲ್, ಕರೂರ್, ದಿಂಡಿಗಲ್, ಮಧುರೈ, ವಿರುದ್‌ನಗರ ಮತ್ತು ಸತೂರ್ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಯಾಗಲಿದೆ.
ರೈಲು ಸಂಖ್ಯೆ 06569 ಆಗಸ್ಟ್ 26 ರಂದು ಮಧ್ಯಾಹ್ನ 1 ಗಂಟೆಗೆ SMVT ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 5.30 ಕ್ಕೆ ಮಡ್‌ಗಾಂವ್ ತಲುಪಲಿದೆ.
ರೈಲು ಸಂಖ್ಯೆ 06570 ಆಗಸ್ಟ್ 27 ರಂದು ಬೆಳಿಗ್ಗೆ 6.30 ಕ್ಕೆ ಮಡ್‌ಗಾಂವ್ ನಿಂದ ಹೊರಟು ಅದೇ ದಿನ ರಾತ್ರಿ 11.40 ಕ್ಕೆ ಬೆಂಗಳೂರಿನ SMVT ತಲುಪಲಿದೆ.
16 ಬೋಗಿಗಳಲ್ಲಿ ಸಂಚರಿಸುವ ರೈಲು ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಕಾರವಾರದ ಎರಡೂ ದಿಕ್ಕಿನ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ರೈಲು ಸಂಖ್ಯೆ 06563 ಯಶವಂತಪುರ-ಧನಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಸ್ಟ್ 23 ರಿಂದ ಡಿಸೆಂಬರ್ 27 ರವರೆಗೆ ಪ್ರತಿ ಶನಿವಾರ ಸಂಚರಿಸಲಿದೆ. ಇದು ಯಶವಂತಪುರದಿಂದ ಬೆಳಿಗ್ಗೆ 7.30 ಕ್ಕೆ ಹೊರಟು ಸೋಮವಾರ ಬೆಳಿಗ್ಗೆ 11 ಗಂಟೆಗೆ ಧನಬಾದ್ ತಲುಪಲಿದೆ.
ರೈಲು ಸಂಖ್ಯೆ 06564 ಧನಬಾದ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಸ್ಟ್ 25 ರಿಂದ ಡಿಸೆಂಬರ್ 29 ರವರೆಗೆ ಪ್ರತಿ ಸೋಮವಾರ ಸಂಚರಿಸಲಿದೆ. ಇದು ಧನಬಾದ್‌ನಿಂದ ರಾತ್ರಿ 8.45 ಕ್ಕೆ ಹೊರಟು ಬುಧವಾರ ರಾತ್ರಿ 9.30 ಕ್ಕೆ ಯಶವಂತಪುರ ತಲುಪಲಿದೆ. ಎರಡೂ ರೈಲುಗಳು ಪ್ರತಿ ದಿಕ್ಕಿನಲ್ಲಿ 19 ಟ್ರಿಪ್‌ಗಳನ್ನು ಮಾಡುತ್ತವೆ.
ರೈಲು ಸಂಖ್ಯೆ 06529 SMVT ಬೆಂಗಳೂರು-ಗೋಮತಿ ನಗರ (ಲಕ್ನೋ) ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಸ್ಟ್ 25 ರಿಂದ ನವೆಂಬರ್ 3 ರವರೆಗೆ ಪ್ರತಿ ಸೋಮವಾರ ಚಲಿಸುತ್ತದೆ. ಇದು SMVT ಬೆಂಗಳೂರಿನಿಂದ ಸಂಜೆ 7 ಗಂಟೆಗೆ ಹೊರಟು ಗುರುವಾರ ರಾತ್ರಿ 11.30 ಕ್ಕೆ ಗೋಮತಿ ನಗರ ತಲುಪುತ್ತದೆ.
ರೈಲು ಸಂಖ್ಯೆ 06530 ಗೋಮತಿ ನಗರ-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಸ್ಟ್ 29 ರಿಂದ ನವೆಂಬರ್ 7 ರವರೆಗೆ ಪ್ರತಿ ಶುಕ್ರವಾರ ಚಲಿಸುತ್ತದೆ. ಇದು ಗೋಮತಿ ನಗರದಿಂದ ಬೆಳಗಿನ ಜಾವ 12.20 ಕ್ಕೆ ಹೊರಟು ಸೋಮವಾರ ಬೆಳಿಗ್ಗೆ 8.15 ಕ್ಕೆ SMVT ಬೆಂಗಳೂರು ತಲುಪುತ್ತದೆ. ಎರಡೂ ರೈಲುಗಳು ಪ್ರತಿ ದಿಕ್ಕಿನಲ್ಲಿ 12 ಟ್ರಿಪ್‌ಗಳನ್ನು ಮಾಡುತ್ತವೆ.