ಬೆಂಗಳೂರು-ಮಂಗಳೂರು-ಕಾರವಾರ ವ್ಯಾಪ್ತಿಯ ಈ 7 ರೈಲುಗಳಿಗೆ ಮಹತ್ವದ ಬದಲಾವಣೆ! ವಂದೇ ಭಾರತ್ ವಿಳಂಬ?

Kannadaprabha News   | Kannada Prabha
Published : Oct 13, 2026, 05:23 AM IST
Mangaluru bengaluru AC Train

ಸಾರಾಂಶ

ರಾಜಧಾನಿ ಬೆಂಗಳೂರು-ಮಡ್ಗಾಂವ್‌ ನಡುವೆ ವಯಾ ಮಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು(Mangaluru Vande bharat express train) ಸಂಚಾರಕ್ಕೆ ವೇಳಾಪಟ್ಟಿ ಸಿದ್ಧತೆ ನಡೆದಿದೆ. ಈಗ ಈ ಮಾರ್ಗದಲ್ಲಿ ಸಂಚರಿಸುವ ಡೀಸೆಲ್‌ ಇಂಧನ ಎಲ್ಲ ರೈಲುಗಳನ್ನು ಎಲೆಕ್ಟ್ರಿಕ್‌ ಎಂಜಿನ್‌ಗೆ ಬದಲಾಯಿಸಿ ಓಡಿಸಲು ಸಜ್ಜು

ಆತ್ಮಭೂಷಣ್‌

ಮಂಗಳೂರು (ಅ.13): ರಾಜಧಾನಿ ಬೆಂಗಳೂರು-ಮಡ್ಗಾಂವ್‌ ನಡುವೆ ವಯಾ ಮಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು(Mangaluru Vande bharat express train) ಸಂಚಾರಕ್ಕೆ ವೇಳಾಪಟ್ಟಿ ಸಿದ್ಧತೆ ನಡೆದಿದೆ. ಈಗ ಈ ಮಾರ್ಗದಲ್ಲಿ ಸಂಚರಿಸುವ ಡೀಸೆಲ್‌ ಇಂಧನ ಎಲ್ಲ ರೈಲುಗಳನ್ನು ಎಲೆಕ್ಟ್ರಿಕ್‌ ಎಂಜಿನ್‌ಗೆ ಬದಲಾಯಿಸಿ ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ಬೆಂಗಳೂರು-ಮಂಗಳೂರು ನಡುವೆ 7 ರೈಲುಗಲಿಗೆ ಎಸಿ ಎಂಜಿನ್

ಬೆಂಗಳೂರು-ಮಂಗಳೂರು-ಕಾರವಾರ ವ್ಯಾಪ್ತಿಯ ಈ ಮಾರ್ಗದಲ್ಲಿ ಸಂಚರಿಸುವ ಏಳು ರೈಲುಗಳಿಗೆ ಎಸಿ ವಿದ್ಯುತ್‌ ಎಂಜಿನ್‌ ಬಳಸಲು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ.

ಆರಂಭದಿಂದ ಕೊನೆ ನಿಲ್ದಾಣ ವರೆಗೆ ಈ ರೈಲುಗಳು ವಿದ್ಯುತ್‌ ಎಂಜಿನ್‌ ಬಳಸಿ ಓಡಾಟ ನಡೆಸಲಿವೆ. ಎರಡು WAG-9HC(ಬಹು ಎಂಜಿನ್‌ ಘಟಕ) ವಿದ್ಯುತ್ ಎಂಜಿನ್‌ಗಳನ್ನು ಜೋಡಿಸಿ ರೈಲುಗಳ ಸಂಚಾರಕ್ಕೆ ಅಗತ್ಯವಿರುವ ಬ್ಯಾಕಿಂಗ್ ಮತ್ತು ಬ್ರೇಕರ್‌ಗಳನ್ನು ನಿರ್ವಹಿಸುವ ಯೋಜನೆ ಇದು. ಘಟ್ಟ ಪ್ರದೇಶಗಳ ಇಳಿಜಾರಿನಲ್ಲಿ ರೈಲುಗಳ ಸಂಚಾರಕ್ಕೆ ಹೆಚ್ಚುವರಿ ಶಕ್ತಿಯ ನೆರವು ಒದಗಿಸುವ ಉದ್ದೇಶ ಈ ವ್ಯವಸ್ಥೆಯ ಹಿಂದಿದೆ.

ಯಾವುದೆಲ್ಲ ರೈಲುಗಳು?:

16585/16586-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್‌ ರೈಲು, 16511/16512- ಬೆಂಗಳೂರು-ಕೋಯಿಕ್ಕೋಡ್-ಬೆಂಗಳೂರು ಎಕ್ಸ್‌ಪ್ರೆಸ್, 16515/16516-ಯಶವಂತಪುರ-ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್, 16575/16576- ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್, 16539/16540- ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್‌, 16595/16596- ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್, 17377/17378-ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್ ರೈಲುಗಳು ವಿದ್ಯುತ್‌ ರೈಲು ಆಗಿ ಸಂಚಾರ ನಡೆಸಲಿವೆ. ಮೊದಲ ಹಂತದಲ್ಲಿ ಒಂದು ರೈಲನ್ನು ವಿದ್ಯುತ್‌ ರೈಲ್ ಆಗಿ ಪ್ರಾಯೋಗಿಕವಾಗಿ ಎರಡು ವಾರಗಳ ಕಾಲ ಓಡಿಸಲಿದ್ದು, ನಂತಹ ಉಳಿದ ರೈಲುಗಳೂ ಓಡಾಟ ನಡೆಸಲಿವೆ.

ತಾಂತ್ರಿಕ ತಪಾಸಣೆಗೆ ಸಿದ್ಧತೆ:

ಮಂಗಳೂರು-ಹಾಸನ ರೈಲು ಮಾರ್ಗ ಈಗಾಗಲೇ ವಿದ್ಯುದೀಕರಣಗೊಂಡಿದೆ. ಅದರಲ್ಲೂ ಘಾಟ್‌ ಪ್ರದೇಶ ಲೈನ್‌ ಇತ್ತೀಚೆಗೆ ವಿದ್ಯದೀಕರಣಗೊಂಡಿತ್ತು. ಆ ಬಳಿಕ ಪರೀಕ್ಷಾರ್ಥ ಮೆಮು ರೈಲು ಓಡಾಟ ನಡೆಸಿತ್ತು. ಆ ಬಳಿಕ ಎರಡು ಬಾರಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಪ್ರಾಯೋಗಿಕ ಓಡಾಟ ನಡೆಸಿದೆ.

ಮೊದಲ ಪ್ರಾಯೋಗಿಕ ಓಡಾಟದ ವೇಳೆ ಸಿರಿಬಾಗಿಲು ಬಳಿ ಎಲೆಕ್ಟ್ರಿಕ್‌ನ ತಾಂತ್ರಿಕ ಕಾರಣಕ್ಕೆ ರೈಲು ಗಂಟೆಗಳ ಕಾಲ ನಿಲುಗಡೆಯಾಗಿತ್ತು. ಮುಂದೆ ನಿಗದಿತ ಸಂಚಾರ ಆರಂಭವಾದ ಬಳಿಕ ವಂದೇ ಭಾರತ್‌ ರೈಲು ಘಾಟ್‌ ಪ್ರದೇಶ ಮಾತ್ರವಲ್ಲ ಎಲ್ಲಿಯೂ ವಿದ್ಯುತ್‌ ತಾಂತ್ರಿಕ ಕಾರಣಕ್ಕೆ ನಿಲುಗಡೆಯಾಗಬಾರದು. ಹೀಗಾಗಿ ಇತರೆ ರೈಲುಗಳನ್ನು ಎಲೆಕ್ಟ್ರಿಕ್‌ನಲ್ಲಿ ಸಂಚಾರ ನಡೆಸಿದ ಬಳಿಕವೇ ವಂದೇ ಭಾರತ್‌ ಸಂಚಾರಕ್ಕೆ ಅವಕಾಶ ನೀಡುವುದೇ ಉತ್ತಮ ಎಂಬ ತೀರ್ಮಾನಕ್ಕೆ ರೈಲ್ವೆ ಅಧಿಕಾರಿಗಳು ಬಂದಿದ್ದಾರೆ. ಈಗಾಗಲೇ ಮಂಗಳೂರು ಸೆಂಟ್ರಲ್‌-ಸುಬ್ರಹ್ಮಣ್ಯ ಮಾರ್ಗ ನಡುವೆ ಎಲೆಕ್ಟ್ರಿಕ್‌ ಎಂಜಿನ್‌ ಪ್ಯಾಸೆಂಜರ್‌ ರೈಲು 2025 ಸೆಪ್ಟೆಂಬರ್‌ನಿಂದಲೇ ನಿತ್ಯ ಓಡಾಟ ನಡೆಸುತ್ತಿದೆ.

ವಂದೇ ಭಾರತ್‌ ವಿಳಂಬ?

ಬೆಂಗಳೂರು-ಮಂಗಳೂರು-ಮಡ್ಗಾಂವ್‌ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭ ತುಸು ವಿ‍ಳಂಬವಾಗುವ ಸಾಧ್ಯತೆ ಹೇಳಲಾಗಿದೆ.

ಕೆಲವು ದಿನಗಳ ಕಾಲ ಈ ಮಾರ್ಗದಲ್ಲಿ ಎಲೆಕ್ಟ್ರಿಕ್‌ ರೈಲುಗಳು ಓಡಾಟ ನಡೆಸಬೇಕು. ಯಾವುದೇ ಅಡಚಣೆ ಇಲ್ಲದೆ ಈ ರೈಲುಗಳು ಓಡಾಟ ನಡೆಸಿದ ಬಳಿಕವೇ ವಂದೇ ಭಾರತ್‌ ರೈಲು ಓಡಾಟಕ್ಕೆ ಹಸಿರು ನಿಶಾನೆ ದೊರಕಲಿದೆ.

ವಂದೇ ಭಾರತ್‌ ರೈಲಿನ ವೇಳಾಪಟ್ಟಿ ಇನ್ನಷ್ಟೆ ಸಿದ್ಧವಾಗಬೇಕಾಗಿದೆ. ಬಳಿಕ ಮತ್ತೊಮ್ಮೆ ಬೆಂಗಳೂರು-ಮಂಗಳೂರು-ಮಡ್ಗಾಂವ್‌ ನಡುವೆ ಪ್ರಾಯೋಗಿಕ ಓಡಾಟ ನಡೆಸುವ ನಿರೀಕ್ಷೆ ಇದೆ. ನವೆಂಬರ್‌ ಅಥವಾ ಡಿಸೆಂಬರ್‌ ಒಳಗೆ ವಂದೇ ಭಾರತ್‌ ರಾಜಧಾನಿ ಬೆಂಗಳೂರು ನಡುವೆ ಓಡಾಟ ನಡೆಸಲಿದೆ ಎನ್ನುತ್ತವೆ ರೈಲ್ವೆ ಮೂಲ.

ಪ್ರಸ್ತಾವನೆಯಲ್ಲಿರುವ WAG-9HC ವಿದ್ಯುತ್ ಎಂಜಿನ್‌ಗಳು ಬ್ಯಾಕಿಂಗ್ ಹಾಗೂ ಬ್ರೇಕರ್ ಕರ್ತವ್ಯಗಳನ್ನು ನಿರ್ವಹಿಸಲಿವೆ. ವಿಶೇಷವಾಗಿ ಘಟ್ಟ ಪ್ರದೇಶಗಳಲ್ಲಿ ರೈಲುಗಳ ಎಳೆತ ಸಾಮರ್ಥ್ಯ ಮತ್ತು ಸಂಚಾರ ನಿರ್ವಹಣೆಗೆ ಈ ವ್ಯವಸ್ಥೆ ನೆರವಾಗುವ ನಿರೀಕ್ಷೆಯಿದೆ. ಆದಷ್ಟು ಶೀಘ್ರದಲ್ಲೇ ಈ ಮಾರ್ಗದಲ್ಲಿ ಎಲೆಕ್ಟ್ರಿಕ್‌ ರೈಲುಗಳು ಓಡಾಟ ನಡೆಸಲಿವೆ.

ಹಿರಿಯ ರೈಲ್ವೆ ಅಧಿಕಾರಿ, ಮೈಸೂರು ವಿಭಾಗ

PREV
Read more Articles on
click me!

Recommended Stories

Mysuru: 750KG ಚಿನ್ನದ ಅಂಬಾರಿ ಹೊರುವ 'ಕ್ಯಾಪ್ಟನ್' ಯಾರು? ರೇಸ್‌ನಲ್ಲಿ ಪ್ರಶಾಂತ, ಸುಗ್ರೀವ, ಧನಂಜಯ ಪೈಪೋಟಿ
ಪ್ರೀತಿಸಿ ಮದ್ವೆ ಆಗಿದ್ದ ಮಹಿಳೆ ಅನುಮಾನಾಸ್ಪದ ಸಾವು; ಚಿತ್ರದುರ್ಗದಲ್ಲಿ 'ಲವ್ ಜಿಹಾದ್' ಆರೋಪ, ಮಗು ಅನಾಥ