
ಮೈಸೂರು (ಅ.7): ಮೈಸೂರು ದಸರಾ ಹಬ್ಬ(Mysuru dasara festival)ದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆ(South Western Railway)ಯು ವಿವಿಧ ನಿಲ್ದಾಣಗಳ ನಡುವೆ ಕೆಳಗಿನ ಹೆಚ್ಚುವರಿ ಕಾಯ್ದಿರಿಸದ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಕೆಎಸ್ಆರ್ ಬೆಂಗಳೂರು– ಅಶೋಕಪುರಂ ನಡುವೆ 3 ಟ್ರಿಪ್ ಕಾಯ್ದಿರಿಸದ ವಿಶೇಷ ರೈಲು ಸಂಚಾರ (06285/ 06286)-ರೈಲು ಸಂಖ್ಯೆ 06285 ಕೆಎಸ್ಆರ್ ಬೆಂಗಳೂರು– ಅಶೋಕಪುರಂ ಕಾಯ್ದಿರಿಸದ ವಿಶೇಷ ರೈಲು ಅ.19, 20 ಮತ್ತು 21 ರಂದು 12:15 ಗಂಟೆಗೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಅದೇ ದಿನ 15:40 ಗಂಟೆಗೆ ಅಶೋಕಪುರಂ ತಲುಪಲಿದೆ.
ಮರು ಪ್ರಯಾಣದಲ್ಲಿ ರೈಲು ಸಂಖ್ಯೆ 06286 ಅಶೋಕಪುರಂ– ಕೆಎಸ್ಆರ್ ಬೆಂಗಳೂರು ಕಾಯ್ದಿರಿಸದ ವಿಶೇಷ ರೈಲು ದಿನಾಂಕ ಅ.19, 20 ಮತ್ತು 21 ರಂದು 16:10 ಗಂಟೆಗೆ ಅಶೋಕಪುರಂನಿಂದ ಹೊರಟು, ಅದೇ ದಿನ 20:00 ಗಂಟೆಗೆ ಕೆಎಸ್ಆರ್ ಬೆಂಗಳೂರು ತಲುಪಲಿದೆ.
8 ಮೆಮು ಬೋಗಿಗಳನ್ನು ಹೊಂದಿರುವ ಈ ವಿಶೇಷ ರೈಲುಗಳು, ಎರಡೂ ಮಾರ್ಗಗಳಲ್ಲಿ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಎಲಿಯೂರು, ಬ್ಯಾಡರಹಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿ, ಮೈಸೂರು ಹಾಗೂ ಚಾಮರಾಜಪುರಂ ನಿಲ್ದಾಣಗಳಲ್ಲಿ ನಿಲ್ಲಲಿವೆ.
ಕೆಎಸ್ಆರ್ ಬೆಂಗಳೂರು– ಮೈಸೂರು ನಡುವೆ 6 ಟ್ರಿಪ್ ಕಾಯ್ದಿರಿಸದ ವಿಶೇಷ ರೈಲು ಸಂಚಾರ (06287/06288)- ರೈಲು ಸಂಖ್ಯೆ 06287 ಕೆಎಸ್ಆರ್ ಬೆಂಗಳೂರು– ಮೈಸೂರು ಕಾಯ್ದಿರಿಸದ ವಿಶೇಷ ರೈಲು ದಿನಾಂಕ ಅ.16, 17, 18, 19, 20 ಮತ್ತು 21 ರಂದು 21:15 ಗಂಟೆಗೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಮರುದಿನ 00:20 ಗಂಟೆಗೆ ಮೈಸೂರು ತಲುಪಲಿದೆ.
ಮರುಪ್ರಯಾಣದಲ್ಲಿ ರೈಲು ಸಂಖ್ಯೆ 06288 ಮೈಸೂರು– ಕೆಎಸ್ಆರ್ ಬೆಂಗಳೂರು ಕಾಯ್ದಿರಿಸದ ವಿಶೇಷ ರೈಲು ಅ.17, 18, 19, 20, 21 ಮತ್ತು 22 ರಂದು 00:30 ಗಂಟೆಗೆ ಮೈಸೂರಿನಿಂದ ಹೊರಟು, ಅದೇ ದಿನ 03:30 ಗಂಟೆಗೆ ಕೆಎಸ್ಆರ್ ಬೆಂಗಳೂರು ತಲುಪಲಿದೆ.
8 ಮೆಮು ಬೋಗಿಗಳನ್ನು ಹೊಂದಿರುವ ಈ ವಿಶೇಷ ರೈಲುಗಳು, ಎರಡೂ ಮಾರ್ಗಗಳಲ್ಲಿ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಪಾಂಡವಪುರ ನಿಲ್ದಾಣಗಳಲ್ಲಿ ನಿಲ್ಲಲಿವೆ. ರೈಲು ಸಂಖ್ಯೆ 06285/ 06286 ಮತ್ತು 06287/ 06288 ಎಂಟು ಮೆಮು ಕಾರ್ ಬೋಗಿಗಳನ್ನು ಹೊಂದಿರಲಿವೆ.
ಮೈಸೂರು– ಕೆಎಸ್ಆರ್ ಬೆಂಗಳೂರು ನಡುವೆ 6 ಟ್ರಿಪ್ ಕಾಯ್ದಿರಿಸದ ವಿಶೇಷ ರೈಲು ಸಂಚಾರ (06297/06298)- ರೈಲು ಸಂಖ್ಯೆ 06297 ಮೈಸೂರು– ಕೆಎಸ್ಆರ್ ಬೆಂಗಳೂರು ಕಾಯ್ದಿರಿಸದ ವಿಶೇಷ ರೈಲು ದಿನಾಂಕ ಅ.16, 17, 18, 19, 20 ಮತ್ತು 21 ರಂದು 23:15 ಗಂಟೆಗೆ ಮೈಸೂರಿನಿಂದ ಹೊರಟು, ಮರುದಿನ 02:50 ಗಂಟೆಗೆ ಕೆಎಸ್ಆರ್ ಬೆಂಗಳೂರು ತಲುಪಲಿದೆ.
ಮರುಪ್ರಯಾಣದಲ್ಲಿ ರೈಲು ಸಂಖ್ಯೆ 06298 ಕೆಎಸ್ಆರ್ ಬೆಂಗಳೂರು– ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅ.17, 18, 19, 20, 21 ಮತ್ತು 22 ರಂದು 03:15 ಗಂಟೆಗೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಅದೇ ದಿನ 06:30 ಗಂಟೆಗೆ ಮೈಸೂರು ತಲುಪಲಿದೆ. 19 ಬೋಗಿಗಳನ್ನು ಹೊಂದಿರುವ ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ಶ್ರೀರಂಗಪಟ್ಟಣ, ಪಾಂಡವಪುರ, ಬ್ಯಾಡರಹಳ್ಳಿ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ನಿಲ್ಲಲಿವೆ.
ಮೈಸೂರು– ಚಾಮರಾಜನಗರ ನಡುವೆ 1 ಟ್ರಿಪ್ ಕಾಯ್ದಿರಿಸದ ವಿಶೇಷ ರೈಲು ಸಂಚಾರ (06293/06294)- ರೈಲು ಸಂಖ್ಯೆ 06293 ಮೈಸೂರು– ಚಾಮರಾಜನಗರ ಕಾಯ್ದಿರಿಸದ ವಿಶೇಷ ರೈಲು ಅ.21 ರಂದು 21:30 ಗಂಟೆಗೆ ಮೈಸೂರಿನಿಂದ ಹೊರಟು, ಅದೇ ದಿನ 23:20 ಗಂಟೆಗೆ ಚಾಮರಾಜನಗರ ತಲುಪಲಿದೆ. ಮರುಪ್ರಯಾಣದಲ್ಲಿ ರೈಲು ಸಂಖ್ಯೆ 06294 ಚಾಮರಾಜನಗರ– ಮೈಸೂರು ಕಾಯ್ದಿರಿಸದ ವಿಶೇಷ ರೈಲು ದಿನಾಂಕ ಅ.21 ರಂದು 23:50 ಗಂಟೆಗೆ ಚಾಮರಾಜನಗರದಿಂದ ಹೊರಟು, ಮರುದಿನ 01:50 ಗಂಟೆಗೆ ಮೈಸೂರು ತಲುಪಲಿದೆ. 20 ಬೋಗಿಗಳನ್ನು ಹೊಂದಿರುವ ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ಚಾಮರಾಜಪುರಂ, ಅಶೋಕಪುರಂ, ಕಡಕೊಳ, ತಾಂಡವಪುರ ಹಾಲ್ಟ್, ಸುಜಾತಾಪುರ ಹಾಲ್ಟ್, ನಂಜನಗೂಡು ಟೌನ್, ಚಿನ್ನದಗುಡಿಹುಂಡಿ ಹಾಲ್ಟ್, ನರಸಾಂಬುಧಿ ಹಾಲ್ಟ್, ಕವಲಂದೆ ಹಾಲ್ಟ್, ಕೊಣನೂರು ಹಾಲ್ಟ್, ಬದನಗುಪ್ಪೆ ಹಾಲ್ಟ್ ಮತ್ತು ಮರಿಯಾಲ ಗಂಗವಾಡಿ ಹಾಲ್ಟ್ ನಿಲ್ದಾಣಗಳಲ್ಲಿ ನಿಲ್ಲಲಿವೆ.
ಮೈಸೂರು– ಚಾಮರಾಜನಗರ ನಡುವೆ 1 ಟ್ರಿಪ್ ಕಾಯ್ದಿರಿಸದ ವಿಶೇಷ ರೈಲು ಸಂಚಾರ (06289/06290)- ಅ.21 ರಂದು 00:10 ಗಂಟೆಗೆ ಮೈಸೂರಿನಿಂದ ಹೊರಟು, ಅದೇ ದಿನ 02:00 ಗಂಟೆಗೆ ಚಾಮರಾಜನಗರ ತಲುಪಲಿದೆ. ಮರು ಪ್ರಯಾಣದಲ್ಲಿ ರೈಲು ಸಂಖ್ಯೆ 06290 ಚಾಮರಾಜನಗರ– ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅ.21 ರಂದು 02:30 ಗಂಟೆಗೆ ಚಾಮರಾಜನಗರದಿಂದ ಹೊರಟು ಅದೇ ದಿನ 04:15 ಗಂಟೆಗೆ ಮೈಸೂರು ತಲುಪಲಿದೆ. 19 ಬೋಗಿಗಳನ್ನು ಹೊಂದಿರುವ ಈ ರೈಲುಗಳು ಎರಡೂ ಮಾರ್ಗಗಳಲ್ಲಿ ಚಾಮರಾಜಪುರಂ, ಅಶೋಕಪುರಂ, ಕಡಕೊಳ, ತಾಂಡವಪುರ ಹಾಲ್ಟ್, ಸುಜಾತಾಪುರ ಹಾಲ್ಟ್, ನಂಜನಗೂಡು ಟೌನ್, ಚಿನ್ನದಗುಡಿಹುಂಡಿ ಹಾಲ್ಟ್, ನರಸಾಂಬುಧಿ ಹಾಲ್ಟ್, ಕವಲಂದೆ ಹಾಲ್ಟ್, ಕೊಣನೂರು ಹಾಲ್ಟ್, ಬದನಗುಪ್ಪೆ ಹಾಲ್ಟ್ ಮತ್ತು ಮರಿಯಾಲ ಗಂಗವಾಡಿ ಹಾಲ್ಟ್ ನಿಲ್ದಾಣಗಳಲ್ಲಿ ನಿಲ್ಲಲಿವೆ.