ಶಿಕ್ಷೆಗೆ ಒಳಗಾದ ಸಿಬ್ಬಂದಿ ಪ್ರತಿನಿತ್ಯ ತಡವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಈ ಕುರಿತು ಕಳೆದ 5-6 ತಿಂಗಳಿನಿಂದಲೂ ತಹಸೀಲ್ದಾರ ಮೇಲಿಂದ ಮೇಲೆ ಕಚೇರಿಗೆ ನಿಗದಿತ ಸಮಯಕ್ಕೆ ಹಾಜರಾಗುವಂತೆ ತಿಳಿಸಿದರೂ ಅವರು ಪ್ರತಿನಿತ್ಯ ತಡವಾಗಿ ಬರುವುದು ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಕಸಗುಡಿಸುವ ಶಿಕ್ಷೆ ವಿಧಿಸಲಾಯಿತು.
ಬಸವನಬಾಗೇವಾಡಿ(ಜು.05): ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪೈಕಿ ತಡವಾಗಿ ಬರುತ್ತಿದ್ದ ಕೆಲ ಸಿಬ್ಬಂದಿಗೆ ಪದೇಪದೇ ಸೂಚನೆ ನೀಡಿದ ಹೊರತಾಗಿಯೂ ಅವರಿಗೆ ಸೋಮವಾರ ಕರ್ತವ್ಯಕ್ಕೆ ತಡವಾಗಿ ಬಂದ ಕಾರಣ ತಹಸೀಲ್ದಾರರು ಅವರಿಗೆ ಕಚೇರಿ ಆವರಣದಲ್ಲಿ ಕಸಗುಡಿಸುವ ಶಿಕ್ಷೆ ವಿಧಿಸಿದರು.
ಶಿಕ್ಷೆಗೆ ಒಳಗಾದ ಸಿಬ್ಬಂದಿ ಪ್ರತಿನಿತ್ಯ ತಡವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಈ ಕುರಿತು ಕಳೆದ 5-6 ತಿಂಗಳಿನಿಂದಲೂ ತಹಸೀಲ್ದಾರ ಮೇಲಿಂದ ಮೇಲೆ ಕಚೇರಿಗೆ ನಿಗದಿತ ಸಮಯಕ್ಕೆ ಹಾಜರಾಗುವಂತೆ ತಿಳಿಸಿದರೂ ಅವರು ಪ್ರತಿನಿತ್ಯ ತಡವಾಗಿ ಬರುವುದು ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಕಸಗುಡಿಸುವ ಶಿಕ್ಷೆ ವಿಧಿಸಲಾಯಿತು.
ಕರ್ನಾಟಕದಲ್ಲಿರುವುದು ಸುಳ್ಳುರಾಮಯ್ಯ ಸರ್ಕಾರ: ಮಾಜಿ ಶಾಸಕ ನಡಹಳ್ಳಿ
ಈ ಕುರಿತು ತಹಸೀಲ್ದಾರ ದುಂಡಪ್ಪ ಕೋಮಾರ ಪ್ರತಿಕ್ರಿಯಿಸಿ, ಶಿಕ್ಷೆಗೆ ಒಳಗಾದ ಸಿಬ್ಬಂದಿ ಪ್ರತಿನಿತ್ಯ ಕಚೇರಿ ಕರ್ತವ್ಯಕ್ಕೆ ತಡವಾಗಿ ಆಗಮಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರಲ್ಲಿ ಅರಿವು ಮೂಡಿಸಲು ಕಚೇರಿ ಸ್ವಚ್ಛಗೊಳಿಸುವ ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ, ಕರ್ತವ್ಯಕ್ಕೆ ತಡವಾಗಿ ಹಾಜರಾಗುವ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ ಎಂದು ಅವರಿಗೆ ಎಚ್ಚರಿಕೆಯನ್ನೂ ನೀಡಿದ್ದೇನೆ. ಅವರು ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದು, ಮಂಗಳವಾರ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು.