ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ರೈತರು ಪ್ರಾರಂಭಿಕ ಹಾಗೂ ಪ್ರಾತ್ಯಕ್ಷಿಕೆಯಾಗಿ ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಸಿಂಪಡಿಸಲು ಡ್ರೋಣ್ ಸ್ಪ್ರೇಯರ್ ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಈ ಭಾಗದ ರೈತರು ಅಚ್ಚರಿಗೊಳ್ಳುವ ಜತೆಗೆ ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬಹುದು ಎಂದು ಜಾಗೃತಗೊಳ್ಳುತ್ತಿದ್ದಾರೆ.
ಜಗದೀಶ ವಿರಕ್ತಮಠ
ಬೆಳಗಾವಿ(ಜು.05): ಸ್ಪರ್ಧಾತ್ಮಕ ಜಗತ್ತಿನಲ್ಲಿ ದಿನ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳನ್ನು ಕಂಡು ಹಿಡಿಯುವುದು ಹಾಗೂ ಉಪಯೋಗಿಸಲಾಗುತ್ತಿದೆ. ಅದರಂತೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ರೈತರು ಡ್ರೋಣ್ ಮೂಲಕ ರಾಸಾಯನಿಕ ಗೊಬ್ಬರದ ದ್ರವವನ್ನು ಸಿಂಪಡಿಸುವ ಡ್ರೋಣ್ ಸ್ಪ್ರೇಯರ್ ಬಳಕೆ ಆರಂಭಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ರೈತರು ಪ್ರಾರಂಭಿಕ ಹಾಗೂ ಪ್ರಾತ್ಯಕ್ಷಿಕೆಯಾಗಿ ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಸಿಂಪಡಿಸಲು ಡ್ರೋಣ್ ಸ್ಪ್ರೇಯರ್ ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಈ ಭಾಗದ ರೈತರು ಅಚ್ಚರಿಗೊಳ್ಳುವ ಜತೆಗೆ ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬಹುದು ಎಂದು ಜಾಗೃತಗೊಳ್ಳುತ್ತಿದ್ದಾರೆ.
ಮುಂಗಾರು ವಿಳಂಬ: ಜಲಾಶಯ, ನದಿಗಳು ಭಣ ಭಣ, ಭೀಕರ ಬರಗಾಲದ ಛಾಯೆ?
ಅಗ್ರಿ ಕಿಸಾನ್ ಡ್ರೋಣ್ ತಯಾರಿಕೆಯಲ್ಲಿ ತೊಡಗಿರುವ ಗರುಡಾ ಏರೋಸ್ಪೇಸ್ ರಸಗೊಬ್ಬರ ತಯಾರಿಕಾ ಕಂಪನಿಯಾದ ಇಪ್ಕೋನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ರೈತರಲ್ಲಿ ಡ್ರೋಣ್ ಸಿಂಪಡಿಸುವ ಯಂತ್ರಗಳನ್ನು ಪರಿಚಯಿಸುವ ಪ್ರಾಯೋಗಿಕ ಯೋಜನೆ ಪ್ರಾರಂಭಿಸಿದೆ. ಈಚೇಗೆ ಚೆನ್ನೈನ ಗರುಡಾ ಏರೋಸ್ಪೆಸ್‌ನ ಡ್ರೋಣ್ ಪೈಲಟ್ ಅಶ್ವಿನ್ ಅವರನ್ನೊಳಗೊಂಡ ತಂಡವು ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಕಬ್ಬಿನ ಬೆಳೆಗೆ ಅಗ್ರಿ ಕಿಸಾನ್ ಡ್ರೋಣ್ ಬಳಸಿ ರಾಸಾಯನಿಕ ಗೊಬ್ಬರ ಸಿಂಪಡಣೆಯ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದೆ.
ಸ್ಪ್ರೇಯರ್ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ. ಒಂದು ಎಕರೆಗೆ ದ್ರವರೂಪದ ಗೊಬ್ಬರ ಸಿಂಪಡಿಸಲು ಕೇವಲ ಹತ್ತು ಲೀಟರ್ ನೀರು ಬೇಕಾಗುತ್ತದೆ. ಇದು ರಸಗೊಬ್ಬರ, ನೀರಿನ ವ್ಯರ್ಥವನ್ನು ಕಡಿಮೆ ಮಾಡುತ್ತದೆ ಮತ್ತು ರೈತರ ಸಮಯವನ್ನು ಉಳಿಸುತ್ತದೆ. ಡ್ರೋಣ್‌ಗೆ 10 ಲೀಟರ್ ಸಾಮರ್ಥ್ಯದ ಟ್ಯಾಂಕ್ ಇದ್ದು, ಒಂದು ಎಕರೆ ಪ್ರದೇಶದ ಬೆಳೆಗಳಿಗೆ ಇದು ಸಾಕಾಗುತ್ತದೆ.
ಕಬ್ಬು ಬೆಳಗಾರರಿಗೆ ಸಿಹಿ ಸುದ್ದಿ: ಎಫ್‌ಆರ್‌ಪಿ ದರ ಹೆಚ್ಚಿಸಿದ ಕೇಂದ್ರ ಸರ್ಕಾರ
ಅಲ್ಲದೇ, ಕೇವಲ 15 ನಿಮಿಷಗಳಲ್ಲಿ ಒಂದು ಎಕರೆ ಪ್ರದೇಶದಲ್ಲಿನ ಬೆಳೆಗಳಿಗೆ ರಾಸಾಯಣಿಕ ಗೊಬ್ಬರ ದ್ರವವನ್ನು ಸಿಂಪಡನೆ ಮಾಡಲಿದೆ. ನಾವು ಕರ್ನಾಟಕದಾದ್ಯಂತ ಈ ಪ್ರಾತ್ಯಕ್ಷಿಕೆಯನ್ನು ಮಾಡುತ್ತಿದ್ದೇವೆ ಮತ್ತು ಈ ತಂತ್ರಜ್ಞಾನವನ್ನು ಬಳಸಲು ರೈತರಿಗೆ ತಿಳಿಸಲಾಗುತ್ತಿದೆ ಎಂದು ಡ್ರೋಣ್ ಪೈಲಟ್ ಅಶ್ವಿನ್ ತಿಳಿಸಿದರು.
ರೈತ ರಮೇಶ ಮಾಯಣ್ಣವರ ಮಾತನಾಡಿ, ಡ್ರೋಣ್ ಸ್ಪ್ರೇಯರ್ ಮೂಲಕ ಗೊಬ್ಬರವನ್ನು ಹೊಲಕ್ಕೆ ನೀಡುವುದು ಎಷ್ಟುಸುಲಭ ಎಂದು ನೋಡಿ ಖುಷಿಪಡುತ್ತೇವೆ. ಇದು ಸಾಕಷ್ಟುಶ್ರಮ ಮತ್ತು ಸಮಯವನ್ನು ಉಳಿಸುತ್ತದೆ. ಫಲಿತಾಂಶಗಳು ಉತ್ತಮವಾಗಿ ಬಂದರೆ, ನಾವು ಎಲ್ಲಾ ಬೆಳೆಗಳಿಗೆ ಈ ಡ್ರೋಣ್ ಸ್ಪ್ರೇಯರ್ ಅನ್ನೇ ಬಳಸಲು ಪ್ರಾರಂಭಿಸುತ್ತೇವೆ. ಇಪ್ಕೋ ಕಂಪನಿಯ ಡಿಎಪಿ, ಯುರಿಯಾ ಮುಂತಾದ ನ್ಯಾನೊ ಗೊಬ್ಬರಗಳನ್ನು ಬಳಸಿದ್ದೇವೆ ಎಂದು ತಿಳಿಸಿದ್ದಾರೆ.