ನಿತ್ಯಪ್ರಯಾಣಿಕರಿಗೆ ವಾರಕ್ಕೊಮ್ಮೆ ಸ್ವಾಬ್‌ ಟೆಸ್ಟ್‌ ಕಡ್ಡಾಯ! ಒಮ್ಮೆ ಪರೀಕ್ಷೆಗೆ 4 ಸಾವಿರ ಖರ್ಚು

By Kannadaprabha NewsFirst Published Aug 11, 2020, 9:12 AM IST
Highlights

ಕಾಸರಗೋಡು-ಮಂಗಳೂರು ಮಧ್ಯೆ ನಿತ್ಯ ಪ್ರಯಾಣಿಸುವವರಿಗೆ ಕೋವಿಡ್‌ ಪಾಸ್‌ ಕಡ್ಡಾಯಗೊಳಿಸಿದರೂ ವಾರಕ್ಕೊಮ್ಮೆ ಸ್ವಾಬ್‌ ಟೆಸ್ಟ್‌ ಪಾಸ್‌ ಆಗಿರಬೇಕು ಎಂಬ ನಿಬಂಧನೆಯನ್ನು ವಿಧಿಸಲಾಗಿದೆ.

ಮಂಗಳೂರು(ಆ.11): ಕಾಸರಗೋಡು-ಮಂಗಳೂರು ಮಧ್ಯೆ ನಿತ್ಯ ಪ್ರಯಾಣಿಸುವವರಿಗೆ ಕೋವಿಡ್‌ ಪಾಸ್‌ ಕಡ್ಡಾಯಗೊಳಿಸಿದರೂ ವಾರಕ್ಕೊಮ್ಮೆ ಸ್ವಾಬ್‌ ಟೆಸ್ಟ್‌ ಪಾಸ್‌ ಆಗಿರಬೇಕು ಎಂಬ ನಿಬಂಧನೆಯನ್ನು ವಿಧಿಸಲಾಗಿದೆ.

ಇದರಿಂದಾಗಿ ನಿತ್ಯ ಪ್ರಯಾಣಿಕರು ವಾರಕ್ಕೊಮ್ಮೆ ಕಡ್ಡಾಯ ರಾರ‍ಯಪಿಡ್‌ ಟೆಸ್ಟ್‌ಗೆ ಹಣ ತೆತ್ತು ಸರದಿಯಲ್ಲಿ ಕಾಯಬೇಕಾಗಿದೆ. ಇದೇ ವೇಳೆ ಸ್ವಾಬ್‌ ಟೆಸ್ಟ್‌ಗೆ ನಿಗದಿತ ಶುಲ್ಕ ಪಡೆಯಲು ಕಾರಸಗೋಡು ಜಿಲ್ಲಾಡಳಿತ ನಿರ್ಧರಿಸಿದೆ.

ರಾಜಸ್ಥಾನದ ಬಂಡಾಯ ನಾಯಕ ಪೈಲಟ್‌ ದಾರಿ ಬದಲಿಸಿದ್ದೇಕೆ?

ಪ್ರಯಾಣಿಕರು ಖಾಸಗಿ ಆಸ್ಪತ್ರೆಯಲ್ಲಿ ಸ್ವಾಬ್‌ ಟೆಸ್ಟ್‌ ಮಾಡಿಸಬೇಕು. ಟೆಸ್ಟ್‌ನಲ್ಲಿ ನೆಗೆಟಿವ್‌ ಬಂದರೆ ಮಾತ್ರ  ಪ್ರಯಾಣಕ್ಕೆ ಅನುಮತಿ ಸಿಗಲಿದೆ. ಕಾಸರಗೋಡಿನಿಂದ ಮಂಗಳೂರಿಗೆ ನಿತ್ಯ 2 ಸಾವಿರಕ್ಕೂ ಅಧಿಕ ಮಂದಿ ಉದ್ಯೋಗ ನಿಮಿತ್ತ ಪ್ರಯಾಣಿಸುತ್ತಾರೆ.

ಟೆಸ್ಟ್‌ಗೆ ಅಂದಾಜು 4000 ರು. ಶುಲ್ಕ!

ಇದೇ ಮೊದಲ ಬಾರಿಗೆ ನೆರೆಯ ರಾಜ್ಯಗಳ ನಡುವೆ ನಿತ್ಯ ಓಡಾಟ ನಡೆಸುವವರಿಗೆ ಸ್ವಾಬ್‌ ಟೆಸ್ಟ್‌ನ್ನು ಕೇರಳ ಸರ್ಕಾರ ಕಡ್ಡಾಯಗೊಳಿಸಿದೆ. ವಾರಕ್ಕೊಮ್ಮೆ ಟೆಸ್ಟ್‌ ನಡೆಸಬೇಕಾದರೆ ನಿಗದಿತ ಮೊತ್ತ ಪಾವತಿಸಬೇಕಾಗುತ್ತದೆ. ಇತ್ತ ದ.ಕ. ಜಿಲ್ಲಾಡಳಿತ ನಿತ್ಯ ಸಂಚಾರಿಗಳಿಗೆ ಸೆ.8ರ ವರೆಗೆ ಸಂಚಾರಕ್ಕೆ ಅನುಮತಿ ನೀಡಿದೆ.

click me!