ಹಾಕಿ ಆಟಗಾರರ ಅಮಾನತು : ಮೂರ್ನಾಡು ಕೊಡವ ಸಮಾಜ ಅಸಮಾಧಾನ

By Kannadaprabha News  |  First Published Dec 2, 2022, 9:18 AM IST

 ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾಹಬ್ಬದಲ್ಲಿ ಮೂರ್ನಾಡು ಕೊಡವ ಸಮಾಜದ ಹಾಕಿ ತಂಡವನ್ನು ಹಾಕಿ ಕೂಗ್‌ರ್‍ ಸಂಸ್ಥೆ ಅಮಾನತುಗೊಳಿಸಿರುವುದು ಖಂಡನೀಯ ಎಂದಿರುವ ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ನೆರವಂಡ ಅನೂಪ್‌ ಉತ್ತಯ್ಯ, ಈ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.


ಮಡಿಕೇರಿ (ಡಿ.2) : ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾಹಬ್ಬದಲ್ಲಿ ಮೂರ್ನಾಡು ಕೊಡವ ಸಮಾಜದ ಹಾಕಿ ತಂಡವನ್ನು ಹಾಕಿ ಕೂಗ್‌ರ್‍ ಸಂಸ್ಥೆ ಅಮಾನತುಗೊಳಿಸಿರುವುದು ಖಂಡನೀಯ ಎಂದಿರುವ ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ನೆರವಂಡ ಅನೂಪ್‌ ಉತ್ತಯ್ಯ, ಈ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಳುಗೋಡುವಿನಲ್ಲಿ ನ.17 ರಿಂದ 20ರ ವರೆಗೆ ಆಯೋಜಿಸಿದ್ದ 8ನೇ ವರ್ಷದ ಕೊಡವ ನಮ್ಮೆಯ ಪ್ರಯುಕ್ತ ನಡೆದ ಅಂತರ ಕೊಡವ ಸಮಾಜಗಳ ಹಾಕಿ ಪಂದ್ಯಾವಳಿಯಲ್ಲಿ ಮೂರ್ನಾಡು ಕೊಡವ ಸಮಾಜದ ಹತ್ತು ಆಟಗಾರರು ಸೇರಿದಂತೆ 14 ಮಂದಿಯನ್ನು ಮತ್ತು ಶ್ರೀಮಂಗಲ ತಂಡವನ್ನು ಹಾಕಿ ಕೂಗ್‌ರ್‍ ಸಂಸ್ಥೆ ಯಾವುದೇ ಮಾಹಿತಿ ನೀಡದೆ ಒಂದು ವರ್ಷ ಅಮಾನತು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Latest Videos

undefined

ಆಟಗಾರರಿಗೆ ಯಾವುದೇ ನೋಟಿಸ್‌ ನೀಡದೆ ಏಕಾಏಕಿ ಅಮಾನತು ಮಾಡಿ ಪತ್ರಿಕೆಗಳಿಗೆ ಹೇಳಿಕೆ ನೀಡಿರುವುದು ಖಂಡನೀಯ. ಹಾಕಿ ಕೂಗ್‌ರ್‍ ಸಂಸ್ಥೆ ಆಸಕ್ತ ಕ್ರೀಡಾಪಟುಗಳ ಕ್ರೀಡಾ ಬೆಳವಣಿಗೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು. ತಿಳಿಯದೆ ಆದ ತಪ್ಪಿಗೆ ಲಿಖಿತ ರೂಪದಲ್ಲಿ ತಾವು ಕ್ಷಮೆ ಕೋರಿದ್ದರೂ ಅಮಾನತುಗೊಳಿಸುವಂತಹ ಕಠಿಣ ಕ್ರಮ ಕೈಗೊಂಡಿರುವುದು ಯಾಕಾಗಿ ಎಂದು ಪ್ರಶ್ನಿಸಿದರು.

ಅಪಾಯದಂಚಿನಲ್ಲಿ ಮಡಿಕೇರಿ- ಸಂಪಾಜೆ ರಾಷ್ಟ್ರೀಯ ಹೆದ್ದಾರಿ!

ಕ್ರೀಡೆ ಎಂಬುವುದು ಬಾಂಧವ್ಯವನ್ನು ಬೆಸೆಯಲು ಇರುವ ಕ್ಷೇತ್ರವೇ ಹೊರತು ಸ್ವಾರ್ಥ ಸಾಧನೆಗಾಗಿ ಅಲ್ಲ. ಹಾಕಿ ಕೂಗ್‌ರ್‍ ಎಂಬ ಸಂಸ್ಥೆ ಕೊಡಗಿನ ಎಲ್ಲ ಹಾಕಿ ಆಟಗಾರರನ್ನು ತನ್ನ ಅಧೀನದಲ್ಲಿ ನೋಂದಾಯಿಸಿಕೊಂಡು ಇಲ್ಲದ ನೀತಿ ನಿಯಮಗಳನ್ನು ಆಟಗಾರರ ಮೇಲೆ ಹೇರಿ ಕ್ರೀಡಾ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳು ಎಚ್ಚೆತ್ತುಕೊಂಡು ಸಂಸ್ಥೆಯ ಹಿಡಿತದಿಂದ ಹೊರ ಬರುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.

ಆಟಗಾರರ ಭವಿಷ್ಯದ ದೃಷ್ಟಿಯಿಂದ ಅಮಾನತುಗೊಂಡವರÜ ಪರವಾಗಿ ಹೈಕೋರ್ಚ್‌ ವಕೀಲ ಅಜ್ಜಿಕುಟ್ಟೀರ ಎಸ್‌.ಪೊನ್ನಣ್ಣ ಅವರ ಮೂಲಕ ಕೋರ್ಚ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದು, ಅಮಾನತಿಗೆ ತಡೆಯಾಜ್ಞೆ ದೊರೆತಿದೆ. ಇದಕ್ಕೆ ವಕೀಲ ಅಚ್ಚಪಂಡ ಗಿರಿ ಉತ್ತಪ್ಪ ಸಹಕರಿಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮೂರ್ನಾಡು ಕೊಡವ ಸಮಾಜದ ಕಾರ್ಯದರ್ಶಿ ಕಂಬೀರಂಡ ಗೌತಮ್‌, ಸದಸ್ಯ ಚೌರೀರ ಸೋಮಣ್ಣ ಹಾಗೂ ಚೌರೀರ ಶ್ಯಾಂ ಗಣಪತಿ ಇದ್ದರು. ಮುಂದಿನ ವರ್ಷ ಪ್ರತ್ಯೇಕ ಕೊಡವ ಲ್ಯಾಂಡ್‌ ಘೋಷಣೆ: ಡಾ. ಸುಬ್ರಮಣಿಯನ್‌ ಸ್ವಾಮಿ

click me!