ತಾಲೂಕಿನ ನರೋಣಾ ವಲಯದ ಹಲವು ಹಳ್ಳಿಗಳಿಗೆ ಡಿಸಿ ಫೌಜಿಯಾ ತರನ್ನುಮ್ ಮತ್ತು ಜಿಪಂ ಸಿಇಒ ಭಂವಾರ್ ಸಿಂಗ್ ಮೀನಾ ಹಠಾತ್ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ವಲಯದಲ್ಲಿ ಬಿಸಿಮುಟ್ಟಿದೆ.
ಆಳಂದ (ಜು.15) : ತಾಲೂಕಿನ ನರೋಣಾ ವಲಯದ ಹಲವು ಹಳ್ಳಿಗಳಿಗೆ ಡಿಸಿ ಫೌಜಿಯಾ ತರನ್ನುಮ್ ಮತ್ತು ಜಿಪಂ ಸಿಇಒ ಭಂವಾರ್ ಸಿಂಗ್ ಮೀನಾ ಹಠಾತ್ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ವಲಯದಲ್ಲಿ ಬಿಸಿಮುಟ್ಟಿದೆ.
ಆಳಂದ ಪಟ್ಟಣಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡುವರು ಎಂಬುದು ಹೇಳಲಾಗಿತ್ತಾದರೂ, ಹಠಾತ್ ನರೋಣಾ ವಲಯಕ್ಕೆ ಅವರು ಪ್ರವಾಸ ಕೈಗೊಂಡಿದ್ದು, ಅಲ್ಲಿನ ನೌಕರ ವರ್ಗವನ್ನು ಬೆಚ್ಚಿಬೀಳಿಸಿದೆ.
undefined
ಏತನ್ಮಧ್ಯೆ ಕಡಗಂಚಿ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲವೆಂದು ಅಲ್ಲಿನ ನಿಯೋಜಿತ ವೈದ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇಲ್ಲಿನ ವೈದ್ಯರು ಕೆಲಸ ಮುಗಿಸಿ ಊಟಕ್ಕೆ ಹೋಗಿದ್ದರು. ಈ ಹಂತದಲ್ಲೇ ಅಧಿಕಾರಿಗಳು ಬಂದು ಭೇಟಿ ನೀಡಿದ್ದರಿಂದ ಈ ರೀತಿಯಾಗಿದೆ ಎನ್ನಲಾಗುತ್ತಿದೆ.
ಗಂಡನ ಮೇಲೆ ಸುಳ್ಳು ವರದಕ್ಷಿಣೆ ಆರೋಪ ಮಾಡಿದ್ದ ಸರ್ಕಾರಿ ಅಧಿಕಾರಿ ಜ್ಯೋತಿ ಮೌರ್ಯ ಸಸ್ಪೆಂಡ್
ಸಿಇಒ ಅವರು, ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಅವ್ಯವಸ್ಥೆ ಮತ್ತು ವೈದ್ಯರು ಸಕಾಲಕ್ಕೆ ಬಾರದಿರುವುದು ಗೈರಾಗುತ್ತಿದ್ದಾರೆ ಎಂಬುದು ಗ್ರಾಮಸ್ಥರ ದೂರನ್ನು ಗಂಭೀರವಾಗಿ ಪರಿಗಣಿಸಿ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಆರೋಗ್ಯ ಇಲಾಖೆಯ ವಲಯದಲ್ಲೂ ಕರ್ತವ್ಯಕ್ಕೆ ಚಕ್ಕರ ಹಾಕುತ್ತಿದ್ದವರಿಗೆ ಎಚ್ಚರಿಗೆ ಗಂಟೆ ಭಾರಿಸಿದಂತಾಗಿದೆ.
ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ವೈದ್ಯರು ಸೇರಿ ಆಸ್ಪತ್ರೆಯಲ್ಲಿನ ಸಮಸ್ಯೆಯನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಹಾಜರಿ ಪುಸ್ತಕ ವೀಕ್ಷಿಸಿ ಆಸ್ಪತ್ರೆಯ ವ್ಯವಸ್ಥೆಯನ್ನು ಕಣ್ಣಾರೆ ಕಂಡರು, ಬಳಿಕ ನಾಡಕಚೇರಿಗೆ ಆಗಮಿಸಿ ಸಕಾಲ ಕಾರ್ಯ ಪರಿಶೀಲಿಸಿ ಸಿಬ್ಬಂದಿಗೆ ಸೂಕ್ತ ಸಲಹೆ ಸೂಚನೆ ನೀಡಿ ಸಮಪರ್ಕ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿ, ಸತತ ಗೈರಾಗುತ್ತಿದ್ದ ವೈದ್ಯ ಅಥವಾ ಸಿಬ್ಬಂದಿ ಮೇಲೆ ತಕ್ಷಣಕ್ಕೆ ಯಾವ ಕ್ರಮ ಕೈಗೊಂಡರೆಂಬುದು ತಿಳಿದುಬಂದಿಲ್ಲ.
ಊಟಕ್ಕೆ ಹೋಗಿದ್ದ ವೈದ್ಯನ ಮೇಲೆ ಶಿಸ್ತು ಕ್ರಮ?:
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬ ಗಾಧೆಯಂತೆ ಕಡಗಂಚಿ ವೈದ್ಯರು ತಮ್ಮ ಕರ್ತವ್ಯ ನಿರ್ವಹಿಸಿ ತನ್ನ ಸಿಬ್ಬಂದಿಯೊಂದಿಗೆ ಹೊರಗೆ ಊಟಕ್ಕೆಂದೇ ಹೋಗಿದ್ದ ವೇಳೆ ಬಂದ ಜಿಲ್ಲಾಧಿಕಾರಿ ಮತ್ತು ಸಿಇಒ ಅವರು ಆವರಣದಲ್ಲಿ ಸ್ವಚ್ವವಾಗಿಲ್ಲ ಮತ್ತು ಸಿಬ್ಬಂದಿ ಹಿಡಿತದಲ್ಲಿಲ್ಲ ಅಮಾತುಗೊಳಿಸಿದ ಪ್ರಸಂಗ ನಡೆದಿದೆ.
ಕಲಬುರಗಿ ಆಳಂದ ಹೆದ್ದಾರಿ ಮಾರ್ಗದಲ್ಲೆ ಇರುವ ಕಡಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದಿನವೀಡಿ ಕರ್ತವ್ಯ ನಿರ್ವಹಿಸಿ ಕಳೆದ 8 ವರ್ಷಗಳಿಂದ ಕಡಗಂಚಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿ ಭೇಟಿ ನೀಡುವ ಮೊದಲೇ ಹಾಜರಿಪಸ್ತಕದಲ್ಲಿ ಸಹಿ ಹಾಕಿದ್ದಾರೆ. ಅಲ್ಲದೆ, ಬೆ.10ಕ್ಕೆ ಬಯೋಮೇಟ್ರಿಕ್ ಥಂಬ್ ನೀಡಿದ್ದು, ಮ.3ರ ವರೆಗೆ ರೋಗಿಗಳಿಗೆ ತಪಾಸಣೆ, ಚಿಕಿತ್ಸೆ ನೀಡಿ ಮಧ್ಯಾಹ್ನ 3ಕ್ಕೆ ಊಟಕ್ಕೆಂದೇ ತನ್ನೊಬ್ಬ ಸಿಬ್ಬಂದಿ ಜೊತೆಗೆ ಹೋಗಿದ್ದರು.
ಕಡಗಂಚಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 18 ಹುದ್ದೆಗಳಲ್ಲಿ ನಾಲ್ಕು ಉಪ ಕೇಂದ್ರಗಳಿಗೆ 3 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಕಡಗಂಚಿ ಕೇಂದ್ರಸ್ಥಾನದಲ್ಲಿ ಐವರು ವೈದ್ಯರು, ಸ್ಟಾಪ್‌ನರ್ಸ್, ಪ್ರಯೋಗಾಲಯ ತಜ್ಞ, ಪಾರ್ಮಶಿಷ್‌್ಟ, ಗ್ರೂಪ್ ಡಿ ನೌಕರ ಇರಬೇಕಾಗಿತ್ತು. ಆದರೆ ಇಬ್ಬರೇ ಸ್ಟಾಪ್‌ನರ್ಸ್ ಮತ್ತು ಗ್ರೂಪ್ ಡಿ ನೌಕರ ಮಾತ್ರ ಇದ್ದರು. ಸಿಬ್ಬಂದಿಯನ್ನು ಹಿಡಿತವಾಗಿಟ್ಟಿಲ್ಲ ಮತ್ತು ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛವಾಗಿಟ್ಟಿಲ್ಲ ಎಂಬ ಕಾರಣ ನೀಡಿ ವೈದ್ಯಾಧಿಕಾರಿ ಡಾ. ರಮೇಶ ಪಾಟೀಲ ಅಮಾನತುಗೊಳಿಸಲಾಗಿದೆ.
ಮೈಸೂರು: ಸಂಸದ ಪ್ರತಾಪ್ ಸಿಂಹ ವಿರುದ್ಧ ಅವಹೇಳನಕಾರಿ ಪೋಸ್ಟ್, ಪೊಲೀಸ್ ಕಾನ್ಸ್‌ಟೇಬಲ್ ಸಸ್ಪೆಂಡ್
ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ಇದೆ. ಹೀಗಾದರೆ ಹೇಗೆ ಜಿಲ್ಲಾಧಿಕಾರಿ ಮತ್ತು ಸಿಇಒ ಆರೋಗ್ಯ ಕೇಂದ್ರಕ್ಕೆ ಬರುವಷ್ಟರಲ್ಲೇ ಊಟಕ್ಕೆ ಹೋಗಿರೊದೊಂದೇ ವೈದ್ಯರ ತಪ್ಪಾಗಿದೆ. ಯಾವತ್ತೂ ರಜೆಯೇ ತೆಗೆದುಕೊಂಡಿಲ್ಲ. ರೋಗಿಗಳಿಗೆ ಸ್ಪಂದಿಸುವ ವೈದ್ಯ. ಅಮಾನತು ಸರಿಯಾದ ಕ್ರಮವಲ್ಲ
- ಸತೀಶ ಪನಶೆಟ್ಟಿ, ಸ್ಥಳೀಯ ವ್ಯಕ್ತಿ
ಬೆಳಗ್ಗೆ ಆಸ್ಪತ್ರೆಯಲ್ಲಿ ವೈದ್ಯರಿದ್ದರು. ಶುಗರ್ ಚೆಕ್ ಮಾಡಿಸಿಕೊಂಡಿದ್ದೇವೆ. ಆಗಾಗ ಆಸ್ಪತ್ರೆಗೆ ಹೋಗುತ್ತೇವೆ. ಒಳ್ಳೆಯ ವೈದ್ಯರಿದ್ದು, ಗೈರಾಗುವುದಿಲ್ಲ. ಡಿಸಿ, ಸಿಇಒ ಬಂದಾಗ ಊಟಕ್ಕೆ ಎಂದಿನಂತೆ ಕೇಂದ್ರೀಯ ವಿವಿ ಹೋಟೆಲ್‌ಗೆ ಹೋಗಿದ್ದರು. ದಿನಾ ಅವರು ಅಲ್ಲೇ ಊಟಕ್ಕೆ ಹೋಗುತ್ತಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸ್ಪಂದಿಸುತ್ತಿದ್ದರು. ಬೆಳಗಿನಿಂದ ಬಂದವರು ಊಟದ ಸಮಯವರೆಗೆ ತಪಾಸಣೆ ಮಾಡುತ್ತಾರೆ. ಅವರ ಬಂದಾಗ ಇವರಿಲ್ಲ ಎಂದು ಅಮಾನತು ಮಾಡಿದ್ದು ಸರಿಯಲ್ಲ. ಎಚ್ಚರಿಕೆ ನೋಟಿಸ್ ಕೊಡಬೇಕಾಗಿತ್ತು.
- ಚಂದ್ರಕಾಂತ ಭೂಸನೂರ, ಕೆಎಂಎಫ್ ನಿರ್ದೇಶಕ, ಕಲಬುರಗಿ