ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ಲಕ್ಕಸಂದ್ರ ಸುರಂಗ ಮಾರ್ಗ ಹಾಗೂ ಮಹಾತ್ಮ ಗಾಂಧಿ ರಸ್ತೆಯ ಸುರಂಗ ಸ್ಟೇಷನ್ ಬಳಿ ನಡೆದಿರುವ ಕಾಮಗಾರಿಯನ್ನು ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪರಿಶೀಲನೆ ನಡೆಸಿದರು.
ಬೆಂಗಳೂರು (ಜು.15): ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ಲಕ್ಕಸಂದ್ರ ಸುರಂಗ ಮಾರ್ಗ ಹಾಗೂ ಮಹಾತ್ಮ ಗಾಂಧಿ ರಸ್ತೆಯ ಸುರಂಗ ಸ್ಟೇಷನ್ ಬಳಿ ನಡೆದಿರುವ ಕಾಮಗಾರಿಯನ್ನು ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪರಿಶೀಲನೆ ನಡೆಸಿದರು. ಸುರಂಗ ಮಾರ್ಗದಲ್ಲಿ ಸಂಚರಿಸಿದ ಅವರು, ಕಾಮಗಾರಿ ನಡೆದಿರುವ ಹಂತ, ಸುರಂಗ ಕೊರೆವ ಟಿಬಿಎಂ ಯಂತ್ರಗಳ ಪ್ರಗತಿ ಹಾಗೂ ಅಳವಡಿಸಿಕೊಂಡಿರುವ ತಂತ್ರಜ್ಞಾನ ಹಾಗೂ ಮುಂದೆ ನಡೆಯಲಿರುವ ಕಾಮಗಾರಿ ಕುರಿತು ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೆಟ್ರೋ ಸುರಂಗ ಕಾಮಗಾರಿ ಪ್ರಗತಿಯಲ್ಲಿದೆ. ಅಧಿಕಾರಿಗಳ ಮಾಹಿತಿಯಂತೆ 21.26 ಕಿಮೀ ಮಾರ್ಗ ಇದಾಗಿದ್ದು, ಒಟ್ಟು 18 ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ 13.76 ಕಿ.ಮೀ. ಸುರಂಗ ಮಾರ್ಗವನ್ನು ನಾಲ್ಕು ಪ್ಯಾಕೆಜ್‌ನಲ್ಲಿ ಈ ಯೋಜನೆ ತೆಗೆದುಕೊಳ್ಳಲಾಗಿದೆ. ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಕೆಲವು ಕಡೆಗಳಲ್ಲಿ ಶೇ.70- ಶೇ.80 ಪೂರ್ಣವಾಗಿದೆ.
ಖಾಸಗಿಯವರಿಗೆ ಸರ್ಕಾರಿ ಜಮೀನಿನ ಪರಿಹಾರ ನೀಡಿದ್ದರೆ ಕ್ರಮ: ಡಿಕೆಶಿ
ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಬೃಹತ್ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಈ ಕಾಮಗಾರಿಗಳು ತಾಂತ್ರಿಕವಾಗಿ ನಡೆಯು ತ್ತವೆ. ಇವು ಬಹಳ ಸುರಕ್ಷಿತವಾಗಿ ಮಾಡಬೇಕಾದ ಕೆಲಸ. ಹೀಗಾಗಿ ಇದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಕೇವಲ ಟೀಕೆ ಮಾಡುವುದು ಸರಿಯಲ್ಲ ಎಂದರು.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರು ಮಾಹಿತಿ ನೀಡಿ, ನಾಲ್ಕು ಹಂತದಲ್ಲಿ ಸುರಂಗ ಮಾರ್ಗದ ಕಾಮಗಾರಿ ನಡೆದಿದೆ. ಮೊದಲ ಹಂತದಲ್ಲಿ ಡೈರಿ ಸರ್ಕಲ್-ಲಕ್ಕಸಂದ್ರ- ಲ್ಯಾಂಗ್‌ಫೋರ್ಡ್ ನಡುವಿನ ಸುರಂಗ ನಿಲ್ದಾಣ ಶೇ. 48ರಷ್ಟುಹಾಗೂ ಸುರಂಗ ಕಾಮಗಾರಿ ಶೇ.80 ಆಗಿದೆ. ಎರಡನೇ ಹಂತದಲ್ಲಿ ಸುರಂಗ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿ ಆರ್‌ಎಂಎಸ್-ಎಂ.ಜಿ.ರಸ್ತೆ-ಶಿವಾಜಿನಗರ ನಿಲ್ದಾಣದ ಕೆಲಸ ಶೇ.79ರಷ್ಟು ಮುಗಿದಿದೆ ಎಂದರು.
ಮೂರನೇ ಹಂತದಲ್ಲಿ ಸುರಂಗ ಮಾರ್ಗ ಶೇ.98 ರಷ್ಟಾಗಿದೆ. ಇಲ್ಲಿ ಕಂಟೋನ್ಮೆಂಟ್, ಪಾಟರಿ ಟೌನ್‌ನಲ್ಲಿ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಶೇ. 75ರಷ್ಟು ಕಾಮಗಾರಿ ಆಗಿದೆ. ನಾಲ್ಕನೇ ಹಂತದಲ್ಲಿ ಶೇ.54ರಷ್ಟುಸುರಂಗ ಕಾಮಗಾರಿ ಮುಗಿದಿದ್ದು, ಟ್ಯಾನರಿ ರಸ್ತೆ, ವೆಂಕಟೇಶಪುರ, ಕೆ.ಜಿ.ಹಳ್ಳಿ, ನಾಗವಾರ ನಿಲ್ದಾಣ ಶೇ. 49ರಷ್ಟು ಪ್ರಗತಿಯಾಗಿದೆ ಎಂದರು. ಒಟ್ಟಾರೆ 2025ರ ಮಾರ್ಚ್ ವೇಳೆಗೆ ಈ ಮೆಟ್ರೋ ಮಾರ್ಗದ ಕಾಮಗಾರಿ ಪೂರ್ಣವಾಗಲಿದೆ ಎಂದು ತಿಳಿಸಿದರು.
ಡಿಕೆಶಿ ವಿರುದ್ಧದ ತನಿಖೆ ತಡ ಆಗಿಲ್ಲ: ಹೈಕೋರ್ಟ್‌ನಲ್ಲಿ ಸಿಬಿಐ ವಾದ
ಡಯಾಮೀಟರ್ ಬಗ್ಗೆ ಚರ್ಚೆ: ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕಾಗಿ ಸುರಂಗ ರಸ್ತೆ ನಿರ್ಮಾಣದ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಸುರಂಗ ಎಷ್ಟುಡಯಾಮೀಟರ್ ಇರಬೇಕು? ಏಕಕಾಲಕ್ಕೆ ಕನಿಷ್ಠ ಎರಡು ವಾಹನಗಳ ಸಂಚಾ ರಕ್ಕೆ ಅನುವು ಇರುವಂತೆ ಸುರಂಗ ಮಾರ್ಗ ರೂಪಿಸುವುದು ಸೇರಿ ಇತರೆ ತಾಂತ್ರಿಕತೆಗಳ ಕುರಿತು ತಜ್ಞರ ಜೊತೆ ಚರ್ಚೆ ನಡೆದಿದೆ. ಬೇರೆ ರಾಜ್ಯಗಳಲ್ಲಿ ಯಾವ ರೀತಿ ಕಾಮಗಾರಿ ಮಾಡಲಾಗುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ. ಈ ವಿಚಾರವಾಗಿ ಸದ್ಯದಲ್ಲೇ ಮಾಹಿತಿ ನೀಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.