ಮೂಳೆ ಪೆಟ್ಟು: ಸಾಲುಮರದ ತಿಮ್ಮಕ್ಕಗೆ ಇಂದು ಶಸ್ತ್ರಚಿಕಿತ್ಸೆ

Kannadaprabha News   | Asianet News
Published : Dec 09, 2020, 08:01 AM IST
ಮೂಳೆ ಪೆಟ್ಟು: ಸಾಲುಮರದ ತಿಮ್ಮಕ್ಕಗೆ ಇಂದು ಶಸ್ತ್ರಚಿಕಿತ್ಸೆ

ಸಾರಾಂಶ

ರಸ್ತೆ ಬದಿಯಲ್ಲಿ ಗಿಡ ನೆಟ್ಟ ಹಿನ್ನೆಲೆಯಲ್ಲಿ ನೂರಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದ ಸಾಲುಮರದ ತಿಮ್ಮಕ್ಕ| ಭಾನುವಾರ ಹಾಸನ ಜಿಲ್ಲೆಯ ಬೇಳೂರಿನ ತಮ್ಮ ನಿವಾಸದಲ್ಲಿ ಬಿದ್ದಿದ್ದ ತಿಮ್ಮಕ್ಕ| ತಿಮ್ಮಕ್ಕ ಅವರ ಸೊಂಟದ ಮೂಳೆಗೆ ಏಟು| 

ಬೆಂಗಳೂರು(ಡಿ.09): ಮನೆಯಲ್ಲೇ ಬಿದ್ದು ಸೊಂಟದ ಮೂಳೆಗೆ ಪೆಟ್ಟು ಮಾಡಿಕೊಂಡಿದ್ದ ಸಾಲು ಮರದ ತಿಮ್ಮಕ್ಕ ಅವರಿಗೆ ಬುಧವಾರ ಬೆಳಗ್ಗೆ ಜಯನಗರ ಅಪೋಲೋ ಅಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಿಗದಿಯಾಗಿದೆ. 

ಭಾನುವಾರ ಹಾಸನ ಜಿಲ್ಲೆಯ ಬೇಳೂರಿನ ತಮ್ಮ ನಿವಾಸದಲ್ಲಿ ತಿಮ್ಮಕ್ಕ ಬಿದ್ದಿದ್ದರು. ಅವರನ್ನು ಹಾಸನದ ಮಣಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸೋಮವಾರ ಆ್ಯಂಬುಲೆನ್ಸ್‌ ಮೂಲಕ ಬೆಂಗಳೂರಿಗೆ ಕರೆ ತರಲಾಗಿದೆ. 

ಸಾಲು ಮರದ ತಿಮ್ಮಕ್ಕ ಆರೋಗ್ಯದಲ್ಲಿ ಚೇತರಿಕೆ: ವೈದ್ಯರಿಗೆ ಥ್ಯಾಂಕ್ಸ್ ಹೇಳಿದ ಶತಾಯುಷಿ

ತಿಮ್ಮಕ್ಕ ಅವರ ಸೊಂಟದ ಮೂಳೆಗೆ ಏಟಾಗಿದ್ದು, ಇಂದು(ಬುಧವಾರ) ಶಸ್ತ್ರ ಚಿಕಿತ್ಸೆ ನಡೆಯಲಿದೆ. ಸದ್ಯ ಅವರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ರಸ್ತೆ ಬದಿಯಲ್ಲಿ ಗಿಡ ನೆಟ್ಟ ಹಿನ್ನೆಲೆಯಲ್ಲಿ ಜನಪ್ರಿಯರಾದ ತಿಮ್ಮಕ್ಕ ನೂರಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
 

PREV
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!