ಸಚಿವ ರಾಮುಲು ನಿವಾಸದಲ್ಲಿ ಅಗ್ನಿ ಅವಘಡ

By Kannadaprabha News  |  First Published Dec 9, 2020, 7:10 AM IST

  ಸಚಿವ ಶ್ರೀ ರಾಮುಲು ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸಚಿವರ ಬಳ್ಳಾರಿ ನಿವಾಸದಲ್ಲಿ ಏಕಾ ಏಕಿ ಅಗ್ನಿ ದುರಂತವಾಗಿದೆ


ಬಳ್ಳಾರಿ (ಡಿ.09) : ನಗರದ ಹವಾಂಭಾವಿ ಪ್ರದೇಶದಲ್ಲಿನ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ನಿವಾಸದಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್‌ ಸಕ್ರ್ಯೂಟ್‌ನಿಂದ ಮನೆಯ ಹೊರಭಾಗದಲ್ಲಿದ್ದ ಜನರೇಟರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಡೀಸೆಲ್‌ ಟ್ಯಾಂಕರ್‌ಗೆ ಆವರಿಸಿದೆ. 

ಈ ವೇಳೆ ಕೆಲಹೊತ್ತು ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿದ್ದು, ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

undefined

ಕುತೂಹಲ ಮೂಡಿಸಿದೆ ರಾಮುಲು ಸಭೆ : ಹೊಸ ಪ್ಲಾನ್ ಮಾಡಿದ್ರಾ ಸಚಿವರು ...

ಶ್ರೀರಾಮುಲು ಅವರು ಈ ಹಿಂದೆ ಸಂಸದರಾಗಿದ್ದ, 2017ರ ಡಿಸೆಂಬರ್‌ ತಿಂಗಳಲ್ಲಿ ದೆಹಲಿಯ ಫಿರೋಜ್‌ ಶಾ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಶ್ರೀರಾಮುಲು ಮಲಗಿದ್ದ ಕೋಣೆಯಲ್ಲೇ ನಡೆದ ಅಗ್ನಿ ದುರಂತದಲ್ಲಿ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

click me!