ಕೊರೋನಾ ಸೋಂಕಿನಿಂದ ಮೃತಪಟ್ಟ ಕೇಂದ್ರ ಸಚಿವ ಸುರೇಶ್ ಅಂಡಗಿ ಅವರ ತಾಯಿ ಸೋಮವ್ವ ಮಗನ ಅಂತಿಮ ದರ್ಶನವಿಲ್ಲದೇ ಕಣ್ಣೀರಾದರು
ಬೆಳಗಾವಿ (ಸೆ.25): ದೆಹಲಿಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಂತ್ಯಸಂಸ್ಕಾರ ನಡೆಯುತ್ತಿದ್ದರೆ, ಬೆಳಗಾವಿಯ ಅವರ ನಿವಾಸದಲ್ಲಿ ತಾಯಿ ಸೋಮವ್ವ ಅವರ ಸಂಕಟ, ವೇದನೆ ಹೇಳತೀರದ್ದಾಗಿತ್ತು. ಕಣ್ಣೆದುರೇ ಬಹು ಎತ್ತರಕ್ಕೆ ಬೆಳೆದಿದ್ದ ಮಗನ ಅಕಾಲಿಕ ಮರಣದ ದುಃಖದೊಂದಿಗೇ ಕೈಯ್ಯಾರೆ ಬೆಳೆಸಿದ ಮಗನನ್ನು ಅಂತಿಮವಾಗಿ ನೋಡಲು ಸಾಧ್ಯವಾಗಲಿಲ್ಲವಲ್ಲ ಎಂಬ ನೋವು ಅವರನ್ನು ಆವರಿಸಿಕೊಂಡಿತ್ತು.
ಕೋವಿಡ್ ನಿಯಮಾನುಸಾರ ಅಂಗಡಿಯವರ ಪಾರ್ಥಿವ ಶರೀರರನ್ನು ಹುಟ್ಟೂರಿಗೂ ತರಲಾಗಿರಲಿಲ್ಲ. ತಾಯಿ ಸೋಮವ್ವ ಅಂಗಡಿ ಮಗನ ಅಂತ್ಯಕ್ರಿಯೆಯನ್ನು ಅಳುತ್ತಲೇ ವೀಡಿಯೋ ಕಾಲ್‌ನಲ್ಲಿ ವೀಕ್ಷಿಸಿದರು. ಅಂಗಡಿ ಅವರ ತಾಯಿ ನೋವು ನೋಡಿ ಅಲ್ಲಿದ್ದವರ ಕಣ್ಣಾಲೆಯನ್ನು ತೇವಗೊಂಡಿದ್ದವು.
ಮತ್ತೆ ಲಾಕ್‌ಡೌನ್ ಇಲ್ಲ; ಮೈಕ್ರೋ ಸೀಲ್‌ಡೌನ್ ಜಾರಿಗೆ ಚಿಂತನೆ..! .
ಸೆ.10ರಂದು ಅವರನ್ನು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಹೋಗಿ ಬಿಟ್ಟು ಬಂದಿದ್ದೆ. ಆದರೆ ಅವರು ಹಿಂದಿರುಗಿ ಬರಲೇ ಇಲ್ಲ ಎಂದು 30 ವರ್ಷಗಳಿಂದ ಸುರೇಶ್ ಅಂಗಡಿ ಕಾರು ಚಾಲಕನಾಗಿರುವ ಮುದಕಪ್ಪ ನಾಯಕ ಅತ್ತರು. ಅಂಗಡಿ ನಿವಾಸದಲ್ಲಿ 13 ವರ್ಷಗಳಿಂದ ಕೆಲಸ ಮಾಡುತ್ತಿರುವ ಬಾಬು ಅಂತಿಮ ದರ್ಶನ ಭಾಗ್ಯವೂ ಸಿಗಲಿಲ್ಲ ಎಂದು ಕಣ್ಣಿರಿಟ್ಟರು. ಮತ್ತೊಂದೆಡೆ ಅಂಗಡಿ ಅವರ ಸಾಕುನಾಯಿ ಬ್ರೋನೋ ಕೂಡ ಒಡೆಯನಿಲ್ಲದ್ದರಿಂದ ಸಪ್ಪೆಯಾಗಿತ್ತು.