ಇದೊಂದೇ ಕಾರಣಕ್ಕೆ ಈ ವಾರದಿಂದಲೇ ಸಂಡೇ ಲಾಕ್‌ಡೌನ್‌ ದಿ ಎಂಡ್ ?

Published : Jul 30, 2020, 05:59 PM IST
ಇದೊಂದೇ ಕಾರಣಕ್ಕೆ ಈ ವಾರದಿಂದಲೇ ಸಂಡೇ ಲಾಕ್‌ಡೌನ್‌  ದಿ ಎಂಡ್ ?

ಸಾರಾಂಶ

ಸಂಡೆ ಲಾಕ್ ಡೌನ್ ತೆರವು ಮಾಡುವ ಬಗ್ಗೆ ಸರ್ಕಾರ ಚಿಂತನೆ/  ಮುಂದಿನ ಭಾನುವಾರದಿಂದ ಲಾಕ್ ಡೌನ್ ತೆರವು ಮಾಡುತ್ತಾರಾ?/  ಲಾಕ್ ಡೌನ್ ಇಂದ ಕೋವಿಡ್ ಕಂಟ್ರೋಲ್ ಗೆ ಬರೋದಿಲ್ಲ ಎನ್ನುವ ಕಾರಣ/ / ಆರ್ಥಿಕ ಚಟುವಟಿಕೆಗಳಾದರೂ ಸುಧಾರಿಸಲಿ ಎನ್ನುವ ಕಾರಣಕ್ಕೆ ಈ ಕ್ರಮ

ಬೆಂಗಳೂರು(ಜು. 30) ಲಾಕ್ ಡೌನ್ ಕಾರಣಕ್ಕೆ ಕೊರೋನಾ ಕಂಟ್ರೋಲ್ ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಮನಗಂಡಂತೆ ಕಾಣುತ್ತಿದೆ. ಬುಧವಾರ ಕೇಂದ್ರ ಸರ್ಕಾರ ಅನ್ ಲಾಕ್ ಮಾರ್ಗಸೂಚಿ ಪ್ರಕಟ ಮಾಡಿ ನೈಟ್ ಕರ್ಫ್ಯೂ ತೆಗೆದು ಹಾಕಿದೆ. ಇದೀಗ ರಾಜ್ಯ ಸರ್ಕಾರ ಸಂಡೇ ಲಾಕ್ ಡೌನ್ ಗೆ  ಅಂತ್ಯ ಹಾಡಲು ಸಿದ್ಧತೆ ಮಾಡಿಕೊಂಡಿದೆ.

ಆರ್ಥಿಕ ಕಾರಣಗಳನ್ನು ಆಧರಿಸಿ ಈ ಭಾನುವಾರದಿಂದಲೇ ಲಾಕ್ ಡೌನ್  ಇರುವುದಿಲ್ಲ ಎನ್ನಲಾಗಿದೆ.  ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಳ ಕಾರಣಕ್ಕೆ ಒಂದು ವಾರ ಲಾಕ್ ಡೌನ್ ಮಾಡಲಾಗಿತ್ತು.

ಕೊರೋನಾ ಕಾಲದಲ್ಲಿ ಸುಲಿಗೆಗೆ ನಿಂತ ಖಾಸಗಿ ಆಸ್ಪತ್ರೆಗಳ ಬಣ್ಣ ಬಟಾಬಯಲು

ಕೇಂದ್ರ ಸರ್ಕಾರ ಅನ್ ಲಾಕ್  3  ಮಾರ್ಗಸೂಚಿ ಬಿಡುಗಡೆ ಮಾಡಿತ್ತು.. ಆಗಸ್ಟ್  5  ರಿಂದ ನೈಟ್ ಕರ್ಪ್ಯೂ ಇರುವುದಿಲ್ಲ.  ಯೋಗ ಮತ್ತು ಜಿಮ್ ಗಳು ಓಪನ್  ಆಗಲಿವೆ. ಅಂತರ್ ರಾಜ್ಯ ಓಡಾಟದ ನಿಯಮವನ್ನು ತೆಗೆದು ಹಾಕಲಾಗಿದೆ ಎಂದು ತಿಳಿಸಿತ್ತು.

ಸಿನಿಮಾ ಮಂದಿರ, ಬಾರ್, ರಾಜಕೀಯ ಸಮಾವೇಶಕ್ಕೆ ಸದ್ಯ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಕೊರೋನಾ ಪ್ರಕರಣಗಳು ಏರು ಮುಖದಲ್ಲಿ ಇದ್ದರೂ ಆರ್ಥಿಕ ಕಾರಣಗಳು ಸರ್ಕಾರಗಳನ್ನು ಕಟ್ಟಿಹಾಕಿದ್ದು ಅನಿವಾರ್ಯ ತೀರ್ಮಾನ ತೆಗೆದುಕೊಳ್ಳುತ್ತಿವೆ. 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು