ಚಿಂಚೋಳಿ: ಹೆಚ್ಚಿದ ಒಳಹರಿವು, ಮುಲ್ಲಾಮಾರಿ ಜಲಾಶಯದಿಂದ ನೀರು ಬಿಡುಗಡೆ

By Kannadaprabha News  |  First Published Jul 30, 2020, 3:35 PM IST

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಇರುವ ಮೇಲ್ದಂಡೆ ಮುಲ್ಲಾಮಾರಿ ಜಲಾಶಯದಿಂದ ನೀರು ಹರಿದು ಬರುತ್ತಿರುವುದರಿಂದ ನಮ್ಮ ಕೆಳದಂಡೆ ಮುಲ್ಲಾಮಾರಿ ಜಲಾಶಯಕ್ಕೆ ಪ್ರತಿನಿತ್ಯ 250 ಕ್ಯುಸೆಕ್‌ ಒಳ ಹರಿವು ಹೆಚ್ಚಳ| ಜಲಾಶಯದ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಒಂದು ಗೇಟನ್ನು 1 ಅಡಿ ಮೇಲೆತ್ತಿ 1000 ಕ್ಯುಸೆಕ್‌ ನೀರು ನದಿಗೆ ಬಿಡುಗಡೆ|


ಚಿಂಚೋಳಿ(ಜು.30):  ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಜಲಾಶಯದಲ್ಲಿ ಒಳಹರಿವು ಹೆಚ್ಚುತ್ತಿರುವುದರಿಂದ ಜಲಾಶಯದಿಂದ ನದಿಗೆ 1000 ಕ್ಯುಸೆಕ್‌ ಹರಿದು ಬಿಡಲಾಗಿದೆ ಎಂದು ಕಿರಿಯ ಅಭಿಯಂತರ ಹಣಮಂತಪ್ಪ ತಿಳಿಸಿದ್ದಾರೆ. 

ಬಸವಕಲ್ಯಾಣ ತಾಲೂಕಿನಲ್ಲಿ ಇರುವ ಮೇಲ್ದಂಡೆ ಮುಲ್ಲಾಮಾರಿ ಜಲಾಶಯದಿಂದ ನೀರು ಹರಿದು ಬರುತ್ತಿರುವುದರಿಂದ ನಮ್ಮ ಕೆಳದಂಡೆ ಮುಲ್ಲಾಮಾರಿ ಜಲಾಶಯಕ್ಕೆ ಪ್ರತಿನಿತ್ಯ 250 ಕ್ಯುಸೆಕ್‌ ಒಳ ಹರಿವು ಹೆಚ್ಚುತ್ತಿರುವುದರಿಂದ ಜಲಾಶಯದ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಒಂದು ಗೇಟನ್ನು 1 ಅಡಿ ಮೇಲೆತ್ತಿ 1000 ಕ್ಯುಸೆಕ್‌ ನೀರು ನದಿಗೆ ಹರಿದು ಬಿಡಲಾಗಿದೆ. 

Tap to resize

Latest Videos

ಕಲ್ಯಾಣ ಕರ್ನಾಟಕದಲ್ಲಿ ಮುಂದುವರಿದ ಮಳೆ: ತುಂಬಿದ ಹಳ್ಳಕೊಳ್ಳಗಳು

ತಾಲೂಕಿನಲ್ಲಿ ಮಳೆ ಬೀಳುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ನೀರು ಹರಿದು ಬಿಡಲಾಗುತ್ತದೆ. ಕೆಳದಂಡೆ ಮುಲ್ಲಾಮಾರಿ ಜಲಾಶಯ ನದಿ ಪಾತ್ರದ ಗ್ರಾಮಗಳ ಚಿಮ್ಮನಚೋಡ, ತಾಜಲಾಪೂರ, ಕನಕಪೂರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಪೋಲಕಪಳ್ಳಿ, ಗರಗಪಳ್ಳಿ, ಬುರುಗಪಳ್ಳಿ, ಕರ್ಚಖೇಡ, ಜಟ್ಟೂರ, ಪೋತಂಗಲ್‌, ಹಲಕೋಡ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.
 

click me!